ಲಾಕ್ಡೌನ್ ಹೊರತಾಗಿಯೂ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ತಮ್ಮ ಮಗನಿಗೆ ವಿವಾಹ ಮಾಡಿದ ಬಗ್ಗೆ ಬಾಲಿವುಡ್ ನಟಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕುಮಾರಸ್ವಾಮಿಯವರ ಮಗ ನಿಖಿಲ್ ಹಾಗೂ ರೇವತಿ ಮದುವೆ ಶುಕ್ರವಾರದಂದು ಕುಟುಂಬಸ್ತರ ಸಮ್ಮುಖದಲ್ಲಿ ಸರಳವಾಗಿ ನೆರವೇರಿದೆ.
ಲಾಕ್ಡೌನ್ ನಡುವೆಯೇ ಮದುವೆ ಸಮಾರಂಭ ನಡೆಸಿರುವುದಕ್ಕೆ ಬಾಲಿವುಡ್ ನಟಿ ರವೀನಾ ಟಂಡನ್ ಸಾಮಾಜಿಕ ಜಾಲತಾಣದಲ್ಲಿ ಕುಮಾರಸ್ವಾಮಿಯವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ದೇಶದಲ್ಲಿ ಅದೆಷ್ಟೋ ಮಂದಿ ಹಸಿವಿನಿಂದ ಒದ್ದಾಡುತ್ತಿದ್ದಾರೆ. ಕೋಟ್ಯಾಂಟರ ಜನರು ತಮ್ಮ ಮನೆಯಿಂದ ಹೊರಬರಲಾಗದೆ, ತಮ್ಮ ಕುಟುಂಬದವರನ್ನು ಭೇಟಿಯಾಗಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಇನ್ನೂ ಅನೇಕರು ಕಷ್ಟದಲ್ಲಿದ್ದವರಿಗೆ ನೆರವಾಗುತ್ತಿದ್ದಾರೆ. ಆದರೆ ನೀವು ಮಗನ ಮದುವೆಯ ಸಂಭ್ರಮಾಚರಣೆಯಲ್ಲಿ ತೊಡಗಿದ್ದೀರ, ಅಂದಹಾಗೆ ಈ ವಿವಾಹ ಕಾರ್ಯಕ್ರಮದಲ್ಲಿ ಏನೇನು ಅಡುಗೆ ಮಾಡಿಸಿದ್ದರೋ? ಎಂದು ಟಾಂಗ್ ನೀಡಿ ಟ್ವೀಟ್ ಮಾಡಿದ್ದಾರೆ.