ಕರೋನಾ ಹರಡುತ್ತಿರುವ ಮು'ಸ್ಲಿಮರ ಜೊತೆ ಯಾರೂ ವ್ಯಾಪಾರ ಮಾಡಬೇಡಿ: ಬಿಜೆಪಿ ಶಾಸಕನ ವೈರಲ್ ವೀಡಿಯೋ ನೋಡಿ

ಮು'ಸ್ಲಿಮ್ ವ್ಯಾಪಾರಿಗಳ ಜೊತೆ ವ್ಯಾಪಾರ ಮಾಡಬೇಡಿ, ತರಕಾರಿ ಕೊಳ್ಳಬೇಡಿ ಎಂದು ಉತ್ತರಪ್ರದೇಶದ ಬಿಜೆಪಿ ಶಾಸಕ ಸುರೇಶ್ ತಿವಾರಿ ಹೇಳಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಯಾವುದೇ ಕಾರಣಕ್ಕೂ ಮು'ಸ್ಲಿಮ್ ಮಾರಾಟಗಾರರಿಂದ ವ್ಯಾಪಾರ ವಹಿವಾಟು ಮಾಡಬೇಡಿ, ಇದನ್ನು ನಾನು ಸಾರ್ವಜನಿಕವಾಗಿಯೇ ಹೇಳುತ್ತಿದ್ದೇನೆ ಎಂದು ಅವರು ನಗರ ಪಾಲಿಕೆಯ ಸಭೆಯಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಹೇಳಿದರು.

Sponsored Ads

Continue Reading

ಮು'ಸ್ಲಿಮ್ ವ್ಯಾಪಾರಿಗಳು ತರಕಾರಿ, ಹಣ್ಣುಗಳ ಮೇಲೆ ಎಂಜಲು ಹಚ್ಚುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡಿರುವ ಕುರಿತಾಗಿ ಪ್ರಸ್ತಾಪಿಸಿದ ಅವರು, ಕರೋನಾ ಸೋಂಕು ಒಂದು ಹಂತಕ್ಕೆ ಕಡಿಮೆಯಾಗುವವರೆಗೂ ಮು'ಸ್ಲಿಮರ ಬಳಿ ವ್ಯಾಪಾರ ಮಾಡಬೇಡಿ ಎಂದರು.

ಇಡೀ ದೇಶದಲ್ಲಿ ಕರೋನಾ ಹರಡಿಸಿದ್ದು ತ'ಬ್ಲಿಘಿ ಜ'ಮಾತ್ ಗೆ ಹೋಗಿ ಬಂದವರು ಎಂಬುದು ನಿಮಗೆಲ್ಲಾ ತಿಳಿದೇ ಇದೆ ಎಂದು ಹೇಳಿದರು. ಇದೀಗ ಬಿಜೆಪಿ ಶಾಸಕನ ಹೇಳಿಕೆಗೆ ಕೆಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮುಸ್ಲಿಮರ ಜೊತೆ ವ್ಯಾಪಾರ ಮಾಡಬೇಡಿ ಎಂದ ಬಿಜೆಪಿ ಶಾಸಕನ ವೀಡಿಯೋ ನೋಡಿ,

Watch Video

أحدث أقدم