ಶಿವಮೊಗ್ಗದ ಹಾರನಹಳ್ಳಿಯಲ್ಲಿ ಪೊಲೀಸ್, ಹೆಲ್ತ್ ಆಫೀಸರ್ ಹೆಸರಿನಲ್ಲಿ ಸಾರ್ವಜನಿಕರನ್ನು ವಂಚಿಸುತ್ತಿದ್ದ ಯುವಕರ ಬಂಧನವಾಗಿದೆ. ಒಬ್ಬಾತ ಪೋಲೀಸ್ ಎಂದು ಹೇಳಿಕೊಂಡು ಸ್ಥಳೀಯ ವಾಹನ ಸವಾರರನ್ನು ಅಡ್ಡಹಾಕಿ ತೊಂದರೆ ಕೊಡುತ್ತಿದ್ದರೆ ಇನ್ನೊಬ್ಬ ಹೆಲ್ತ್ ಆಫೀಸರ್ ಹೆಸರಿನಲ್ಲಿ ಐಡಿ ಕಾರ್ಡ್ ಹಾಕಿಕೊಂಡು ತಿರುಗಾಡುತ್ತಿದ್ದ.
ಶಿವಮೊಗ್ಗದ ಟಿಪ್ಪು ನಗರದ ನಿವಾಸಿಗಳಾದ ವಾಸಿಂ ಹಾಗೂ ಅಲಿ ಬಂಧಿತ ಆರೋಪಿಗಳು. ಇವರು ಕುಂಸಿ ಠಾಣೆ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಮಾಸ್ಕ್ ಧರಿಸದೆ ಬೈಕ್ನಲ್ಲಿ ಹೋಗುತ್ತಿದ್ದವರನ್ನು ಅಡ್ಡಗಟ್ಟಿ, ಲಾಕ್ಡೌನ್ ಜಾರಿಯಲ್ಲಿದ್ದರೂ ಮಾಸ್ಕ್ ಧರಿಸಿಲ್ಲ ನಿಮ್ಮ ಮೇಲೆ ಕೇಸ್ ದಾಖಲಿಸುತ್ತೇವೆ ಎಂದು ಹೆದರಿಸಿ ಹಣ ವಸೂಲಿ ಮಾಡುತ್ತಿದ್ದರಂತೆ.
ಇಬ್ಬರೂ ಮಂಗಳವಾರ ಶಿವಮೊಗ್ಗ ತಾಲೂಕಿನ ಹಾರನಹಳ್ಳಿ ಗ್ರಾಮದಲ್ಲಿ ಜನರನ್ನು ಹೆದರಿಸಿ ಹಣ ವಸೂಲಿ ಮಾಡುತ್ತಿರುವಾಗ ಅನುಮಾನಗೊಂಡ ಸ್ಥಳೀಯರು, ಆರೋಪಿಗಳನ್ನ ತರಾಟೆಗೆ ತೆಗೆದುಕೊಂಡು ಪ್ರಶ್ನಿಸಿದ್ದಾರೆ. ಜನರಿಗೆ ವಂಚಿಸಿ ದುಡ್ಡು ಮಾಡುವ ಪ್ಲಾನ್ ಹೊಂದಿದ್ದ ಇಬ್ಬರನ್ನು ಹಿಡಿದು ಸರಿಯಾಗಿ ಜಾಡಿಸಿ ಪೋಲೀಸರಿಗೆ ಒಪ್ಪಿಸಲಾಗಿದೆ. ವೀಡಿಯೋ ನೋಡಿ,