ಕಸಾಯಿಖಾನೆಯಿಂದ ತಪ್ಪಿಸಿಕೊಂಡು ತಾಯಿ-ಮಗುವಿಗೆ ಗುದ್ದಿದ ನೀರೆಮ್ಮೆ, ಮುಂದೇನಾಯ್ತು ನೋಡಿ

ಕಸಾಯಿಖಾನೆಗೆ ವಧೆ ಮಾಡಲು ಕೊಂಡೊಯ್ಯಲಾಗುತ್ತಿದ್ದ ನೀರೆಮ್ಮೆಯೊಂದು ಅಲ್ಲಿಂದ ತಪ್ಪಿಸಿಕೊಂಡು ಮನೆಯ ಮುಂಭಾಗದಲ್ಲಿ ನಿಂತಿದ್ದ ತಾಯಿ-ಮಗುವಿನ ಮೇಲೆರಗಿದ ಘಟನೆ ದಕ್ಷಿಣ ಚೀನಾದ ಗುವಾಂಗ್ ಡಂಗ್ ನಲ್ಲಿ ನಡೆದಿದೆ.

ನೀರೆಮ್ಮೆ ಗುದ್ದಿದ ರಭಸಕ್ಕೆ ತಾಯಿಯ ಕೈಯಲ್ಲಿದ್ದ ಮಗು ನೆಲಕ್ಕೆ ಬಿದ್ದಿದೆ. ಇನ್ನೇನು ನೀರೆಮ್ಮೆ ಮಗುವನ್ನು ತನ್ನ ಕೊಂಬಿನಿಂದ ತಿವಿಯಬೇಕು ಎನ್ನುವಷ್ಟರಲ್ಲಿ ತಾಯಿ ತನ್ನ ಪ್ರಾಣ ಪಣಕ್ಕಿಟ್ಟು ಮಗುವನ್ನು ರಕ್ಷಿಸಿದ್ದಾಳೆ.

Sponsored Ads

Continue Reading

ತಾಯಿ-ಮಗುವಿನ ಮೇಲೆ ನೀರೆಮ್ಮೆ ದಾಳಿಯಿಡುತ್ತಿದ್ದಂತೆ ಮನೆಯೊಳಗಿದ್ದ ಇಬ್ಬರು ಗಂಡಸರು ಹೊರಗೋಡಿ ಬಂದಿದ್ದು, ಒಬ್ಬರು ತಾಯಿಯ ಕೈಯಿಂದ ಮಗುವನ್ನು ಒಳ ತೆಗೆದುಕೊಂಡು ಹೋದರೆ ಇನ್ನೊಬ್ಬರು ನೀರೆಮ್ಮೆಯನ್ನು ಸ್ಥಳದಿಂದ ಓಡಿಸಿ ಮಹಿಳೆಯ ಪ್ರಾಣ ಕಾಪಾಡಿದ್ದಾರೆ.

ಘಟನೆಯಲ್ಲಿ ಮಗುವಿಗೆ ಯಾವುದೇ ತರಹದ ಗಾಯಗಳು ಆಗಿಲ್ಲ, ಆದರೆ ಮಹಿಳೆಗೆ ಸಣ್ಣಪುಟ್ಟ ಗಾಯಗಳಾಗಿದೆ. ನಂತರ ಆ ನೀರೆಮ್ಮೆಯನ್ನು ಸರ್ಕಾರದ ಆದೇಶದಂತೆ ಸ್ಥಳೀಯ ಪೋಲೀಸರು ಗುಂಡು ಹೊಡೆದು ಹತ್ಯೆಗೈದಿದ್ದಾರೆ. ನೀರೆಮ್ಮೆಯ ಭೀಕರ ದಾಳಿಯ ವೀಡಿಯೋ ನೋಡಿ,

Watch Video

أحدث أقدم