ತುಳುನಾಡ ಜನರ ಬಿಸು ಹಬ್ಬಕ್ಕೆ ತುಳುವಿನಲ್ಲೇ ಶುಭಾಷಯ ಕೋರಿ ಸೈ ಎನಿಸಿಕೊಂಡ ಸಿಎಂ



ದೇಶ ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ಲಾಕ್‌ಡೌನ್‌ ಆಗಿರೋದರಿಂದ ಎಲ್ಲಾ ರೀತಿಯ ಧಾರ್ಮಿಕ ಹಬ್ಬ, ಸಡಗರಗಳು ಕಳೆಗುಂದಿ ಹೋಗಿದೆ. ಇಂದು ಮಂಗಳೂರಿನಲ್ಲಿ ಬಿಸು ಹಬ್ಬ ಆಚರಿಸಲಾಗುತ್ತಿದ್ದು, ಮುಖ್ಯಮಂತ್ರಿ ಯಡಿಯೂರಪ್ಪನವರು ಈ ಶುಭ ದಿನಕ್ಕೆ ತುಳು ಭಾಷೆಯಲ್ಲಿಯೇ ಶುಭಾಷಯ ಕೋರಿದ್ದಾರೆ. ಟ್ವೀಟ್ ನೋಡಿ,
ತುಳುನಾಡ ಜನತೆಗೆ ಶುಭಕೋರಿ ಟ್ವೀಟ್‌ ಮಾಡಿರುವ ಅವರು, "ಬಿಸುವಿನ ದಿನ ಹೊಸ ಕನಸು, ಹೊಸ ಮನಸು, ಹೊಸ ತಿನಿಸು, ಎಲ್ಲವೂ ಹೊಸತಾಗಲಿ. ಈ ಹೊಸ ವರ್ಷದಲ್ಲಿ ಹಳೆಯ ಮಹಾಮಾರಿ ದೂರವಾಗಿ ಸುಖ ಸಂತೋಷ ನೆಲೆಸಲಿ. ಎಲ್ಲರಿಗೆ ಬಿಸುವಿನ ಶುಭಾಶಯಗಳು" ಎಂದು ತುಳು ಭಾಷೆಯಲ್ಲಿ ಹೇಳಿದ್ದಾರೆ. ಇದಕ್ಕೆ ತುಳುವರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ತುಳುವಲ್ಲಿ ಟ್ವೀಟಿಸಿದ್ದು ತುಂಬಾ ಒಳ್ಳೆಯ ಬೆಳವಣಿಗೆ. ನಿಮಗೂ ಬಿಸು ಹಬ್ಬ ಒಳ್ಳೆಯದನ್ನು ಮಾಡಲಿ. ತುಳುವರ ಮನಸು ಗೆದ್ದುಬಿಟ್ರಿ 💚
ಇರೆಗ್ಲಾ ಬಿಸು ಪರ್ಬೊದ ಎಡ್ಡೆಪ್ಪುಲು. ತುಲುನಾಡ ದೈವ,ದೇವೆರ್ ಎಡ್ಡೆ ಮಲ್ಪಡ್. ☺💐
ಈರೆಗ್ಲಾ ಬಿಸು ಪರ್ಬೊದ ಎಡ್ಡೆಪ್ಪುಲು ರಾಜ್ಯೊದ ಮುಖ್ಯಮಂತ್ರಿಲೆ..... (ನಿಮಗೂ ಬಿಸು ಹಬ್ಬದ ಶುಭಶಯಗಳು ರಾಜ್ಯದ ಮುಖ್ಯಮಂತ್ರಿಗಳೆ)

أحدث أقدم