ಕಲ್ಲುತೂರಾಟಗಾರರಿಗೆ ತಮ್ಮ ದಬಾಂಗ್ ಸ್ಟೈಲ್ ನಲ್ಲೇ ಜಾಡಿಸಿದ ಸಲ್ಮಾನ್ ಖಾನ್, ವೈರಲ್ ವೀಡಿಯೋ ನೋಡಿ




ಕೊರೋನಾ ವೈರಸ್ ಹರಡುವ ಆತಂಕದಿಂದ ಇಡೀ ದೇಶವೇ ಲಾಕ್ ಡೌನ್ ಆಗಿದೆ. ಪೋಲೀಸರು, ಡಾಕ್ಟರ್ ಗಳು ದೇಶವನ್ನು ಕೊರೋನಾದಿಂದ ರಕ್ಷಿಸಲು ಹಗಲಿರುಳು ಕೆಲಸ ಮಾಡಿತ್ತಿದ್ದಾರೆ. ಆದರೆ ಇದೇ ಕೊರೋನಾ ವಾರಿಯರ್ಸ್ ಗಳ ಮೇಲೆ ದೇಶದ ಮೂಲೆ ಮೂಲೆಗಳಲ್ಲಿ ದಾಳಿಗಳು ನಡೆಯುತ್ತಿರೋದು ಖೇದಕರ ಸಂಗತಿ.

ಉತ್ತರ ಭಾರತದ ಅದರಲ್ಲೂ ಉತ್ತರಪ್ರದೇಶದ ಹಲವು ಕಡೆ ಇಂತಹ ದಾಳಿಗಳು ನಡೆದಿದೆ. ಈ ವಾರದಲ್ಲೇ ಇಂದೋರ್ ಹಾಗೂ ಮೊರಾದಾಬಾದ್ ನಲ್ಲಿ ಪೋಲೀಸರು, ಡಾಕ್ಟರ್ ಗಳ ಮೇಲೆ ಭೀಕರ ದಾಳಿಗಳು ನಡೆದಿದೆ. ತಮ್ಮನ್ನು ರಕ್ಷಿಸಲು ಬಂದಿರುವ ಕೊರೋನಾ ವಾರಿಯರ್ಸ್ ಗಳ ಮೇಲೆ ಯಾತಕ್ಕಾಗಿ ಈ ದಾಳಿಗಳನ್ನು ಮಾಡುತ್ತಿದ್ದಾರೆ ಎಂಬುದೇ ಕಗ್ಗಂಟಾಗಿದೆ.

ಈ ಬಗ್ಗೆ ಕೊನೆಗೂ ಮೌನ ಮುರಿದಿರುವ ಬಾಲಿವುಡ್ ನಟ ಸಲ್ಮಾನ್ ಖಾನ್, ಕಲ್ಲುತೂರಾಟಗಾರರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಕಲ್ಲು ತೂರಾಟಗಾರರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಅವರು,
'ಕೊರೋನಾ ಮೊದಲು ಪತ್ತೆಯಾದ ಚೀನಾದಲ್ಲೇ ಕೊರೋನಾ ನಿಯಂತ್ರಣಕ್ಕೆ ಬಂದಿದೆ. ಆದರೆ ಇಲ್ಲಿ ಕೆಲ ಮೂರ್ಖರಿಂದಾಗಿ ಕೊರೋನಾ ಮತ್ತಷ್ಟು ಉಲ್ಬಣವಾಗುತ್ತಿದೆ. ನಿಮ್ಮನ್ನು ರಕ್ಷಿಸಲು ಬಂದ ಡಾಕ್ಟರ್, ಪೋಲೀಸರ ಮೇಲೆಯೇ ಕಲ್ಲು ತೂರುತ್ತೀರಿ'.

'ಕೊರೋನಾ ಸೋಂಕು ಪತ್ತೆಯಾದವರು ಆಸ್ಪತ್ರೆಯಿಂದ ತಪ್ಪಿಸಿಕೊಳ್ಳುತ್ತಿದ್ದೀರಿ. ಎಲ್ಲಿಗೆ ಓಡುತ್ತೀರ? ಬದುಕುವ ಕಡೆಗಾ ಅಥವಾ ಸಾಯುವ ಕಡೆಗ' ಎಂದು ಪ್ರಶ್ನಿಸಿದ್ದಾರೆ. 'ಇಂತವರನ್ನು ನಿಯಂತ್ರಿಸಲು ಸೇನೆಯೆ ಸರಿ. ಲಾಕ್ ಡೌನ್ ಕಟ್ಟುನಿಟ್ಟಾಗಿ ನಡೆಯಲು ಆದಷ್ಟು ಬೇಗ ಸೇನೆಯನ್ನು ನಿಯೋಜಿಸಿ' ಎಂದು ಸರ್ಕಾರವನ್ನು ಕೇಳಿಕೊಂಡಿದ್ದಾರೆ. ವೀಡಿಯೋ ನೋಡಿ,

Watch Video

أحدث أقدم