ಕೊರೋನಾ ವೈರಸ್ ಹರಡುವುದನ್ನು ತಪ್ಪಿಸಲು ಭಾರತ ಸರ್ಕಾರ ದೇಶದಾದ್ಯಂತ ಲಾಕ್ ಡೌನ್ ಆದೇಶ ಹೊರಡಿಸಿದ್ದರು ಅನೇಕರು ನಿರ್ಲಕ್ಷ್ಯ ತೋರುತ್ತಿದ್ದಾರೆ. ಇದೇ ರೀತಿ ಪಂಜಾಬ್ ನಲ್ಲಿ ವೃದ್ದರೋರ್ವರು ತಳ್ಳುಗಾಡಿಯಲ್ಲಿ ತರಕಾರಿ ಮಾರಾಟಕ್ಕೆ ಮುಂದಾಗಿದ್ದು, ಇದನ್ನು ಗಮನಿಸಿದ ಪಂಜಾಬ್ ಪೋಲೀಸರು ವೃದ್ಧನ ತಳ್ಳುಗಾಡಿಯನ್ನು ತಡೆದು ಆತನಿಂದ ತರಕಾರಿ ವಶಪಡಿಸಿಕೊಂಡಿದ್ದಾರೆ.
ಆದರೆ ಲಾಕ್ ಡೌನ್ ಕೆಲಸದ ಒತ್ತಡದ ಮಧ್ಯೆಯೂ ಪಂಜಾಬ್ ಪೋಲೀಸರು ಮಾನವೀಯತೆ ಮೆರೆದಿದ್ದು, ಆ ವೃದ್ದನಿಗೆ ಹಣವನ್ನು ನೀಡಿದ್ದಾರೆ, ಅಲ್ಲದೆ ವಶಪಡಿಸಿಕೊಂಡ ತರಕಾರಿಯನ್ನು ಬಡವರಿಗೆ ಹಂಚಿದ್ದಾರೆ. ಈ ಕಾರ್ಯ ಎಲ್ಲೆಡೆ ಶ್ಲಾಘನೆಗೆ ಪಾತ್ರವಾಗಿದೆ. ವೀಡಿಯೋ ನೋಡಿ,