ನಿನ್ನೆ ಒಂದೇ ದಿನ ಕೊರೋನ ಮಹಾಮಾರಿಗೆ ವಿಶ್ವದಾದ್ಯಂತ ಬಲಿಯಾದವರು ಎಷ್ಟು ಗೊತ್ತೆ? ಬೆಚ್ಚಿಬೀಳಿಸೋ ಸುದ್ದಿ
byAdmin-
ಕೊರೋನ ಮಹಾಮಾರಿ ವಿಶ್ವದಾದ್ಯಂತ ತನ್ನ ಮರಣ ಮೃದಂಗವನ್ನು ಮುಂದುವರೆಸಿದೆ. ಚೀನಾದಿಂದ ಪ್ರಾರಂಭವಾದ ಸೊಂಕು ನಂತರ ವಿಶ್ವದ ಇತರ ದೇಶಗಳಿಗೂ ಹಬ್ಬಿದ್ದಲ್ಲದೆ, ಅಪಾರ ಸಾವುನೋವುಗಳಿಗೆ ಕಾರಣವಾಗಿದೆ. ಭಾರತದಲ್ಲಿಯೂ 657ಜನರಲ್ಲಿ ಸೋಂಕು ಪತ್ತೆಯಾಗಿದ್ದು 12ಜನ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.
ನಿನ್ನೆ ಒಂದೇ ದಿನ ಈ ಮಹಾಮಾರಿಗೆ ವಿಶ್ವದಾದ್ಯಂತ 2,389 ಮಂದಿ ಬಲಿಯಾಗಿದ್ದಾರೆ ಅಲ್ಲದೆ 48,486 ಮಂದಿಯಲ್ಲಿ ಹೊಸ ಸೋಂಕು ಪತ್ತೆಯಾಗಿದೆ. ಹೀಗೆ ವಿಶ್ವದಾದ್ಯಂತ ಕೊರೋನ ಮಾರಿ ಇದುವರೆಗೆ ಸುಮಾರು 21,283 ಜನರನ್ನು ಬಲಿತೆಗೆದುಕೊಂಡಿದ್ದು, 1,14,218 ಜನ ಗುಣಮುಖರಾಗಿದ್ದಾರೆ. ಇನ್ನೂ 3,35,500 ಜನರು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ.