ಪಾಕಿಸ್ತಾನದ ರಸ್ತೆಗಳಲ್ಲಿ ರಾರಾಜಿಸಿದ 'ಅಖಂಡ ಭಾರತ'ದ ಪೋಸ್ಟರ್'ಗಳು, ವೀಡಿಯೋ ಸಖತ್ ವೈರಲ್


ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ 370ನೇ ವಿಧಿಯನ್ನು ತೆಗೆದುಹಾಕಿದ ಬಳಿಕ ಪಾಕಿಸ್ತಾನದಲ್ಲಿ ಕೋಲಾಹಲವೆ ಏರ್ಪಟ್ಟಿದೆ. ಪಾಕಿಸ್ತಾನದ ಪ್ರಧಾನಿ ಭಾರತದ ಮೇಲೆ ಮತ್ತೊಮ್ಮೆ ಪುಲ್ವಾಮಾ ರೀತಿಯ ದಾಳಿ ನಡೆಸೋ ಬೆದರಿಕೆ ಹಾಕಿರೋದು ಒಂದು ಕಡೆಯಾದರೆ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ನ ರಸ್ತೆಗಳಲ್ಲಿ ಅಖಂಡ ಭಾರತದ ಪೋಸ್ಟರ್ ಗಳು ರಾರಾಜಿಸಲು ಶುರುವಾಗಿದೆ.

ಶಿವಸೇನೆ ಸಂಸದ ಸಂಜಯ್ ರಾವತ್ ಅವರು ಸಂಸತ್ತಿನಲ್ಲಿ 'ಇಂದು ಜಮ್ಮು-ಕಾಶ್ಮೀರ ತೆಗೆದುಕೊಂಡಿದ್ದೇವೆ, ನಾಳೆ ಬಲೊಚಿಸ್ತಾನ ಹಾಗೂ POK ವಶಪಡಿಸಿಕೊಳ್ಳುತ್ತೇವೆ. ನಮ್ಮ ಪ್ರಧಾನಿ ಅಖಂಡ ಭಾರತದ ಕನಸನ್ನು ನನಸಾಗಿಸುತ್ತಾರೆ' ಎಂದಿದ್ದರು. ಇದನ್ನೇ ಪೋಸ್ಟರ್ ಮೂಲಕ ಪಾಕಿಸ್ತಾನದ ರಸ್ತೆಗಳ ಇಕ್ಕೆಲಗಳಲ್ಲಿ ಅಂಟಿಸಲಾಗಿದೆ. ವೈರಲ್ ವೀಡಿಯೋ ಇಲ್ಲಿದೆ ನೋಡಿ,
أحدث أقدم