ಭಾರತೀಯ ಪ್ರವಾಸಿಗರಿಗೆ ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸೋನರೋ ಶುಭ ಸುದ್ದಿಯನ್ನು ನೀಡಿದ್ದಾರೆ.ಇನ್ನು ಮುಂದೆ ನೀವು ಬ್ರೆಜಿಲ್ ಪ್ರವಾಸಕ್ಕೆ ಹೊರಡುವ ಮುನ್ನ ನೀವು ವೀಸಾಗೆ ಅರ್ಜಿ ಹಾಕುವ ಅಗತ್ಯವಿಲ್ಲ. ಬೆಂಗಳೂರಿನಿಂದ ದಿಲ್ಲಿಗೆ ವಿಮಾನ ಏರಿ ಪ್ರವಾಸ ಮಾಡುವಷ್ಟೇ ಸಲೀಸಾಗಿ ಬ್ರೆಜಿಲ್‌ಗೂ ಹೋಗಿ ಬರಬಹುದು,ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸೋನರೋ ಈ ವಿಚಾರವನ್ನು ಪ್ರಕಟಿಸಿದ್ಧಾರೆ.
ಭಾರತ ಹಾಗೂ ಚೀನಾ ಎರಡೂ ದೇಶಗಳ ಪ್ರವಾಸಿಗರಾಗಲಿ, ಉದ್ಯಮಿಗಳಾಗಲೀ ಬ್ರೆಜಿಲ್‌ಗೆ ಹೋಗಬೇಕಾದರೆ ವೀಸಾಗಾಗಿ ಅರ್ಜಿ ಹಾಕಿ ಕಾಯುತ್ತಾ ಕೂರಬೇಕಾದ ಸನ್ನಿವೇಷವೇ ಇಲ್ಲವಾಗಿದೆ. ಉತ್ತರ ಅಮೆರಿಕದಲ್ಲಿರುವ ಬ್ರೆಜಿಲ್ ದೇಶ, ವೀಸಾ ವಿನಾಯಿತಿ ನೀಡುವ ಮೂಲಕ ಭಾರತೀಯರಿಗೆ ಹತ್ತಿರವಾಗಿದೆ. ಬಲಪಂಥೀಯ ರಾಜಕಾರಣಿ ಎಂದೇ ಗುರ್ತಿಸಿಕೊಂಡಿರುವ ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸೋನರೋ, ಈ ವರ್ಷಾರಂಭದಲ್ಲಿ ಅಧಿಕಾರ ಸ್ವೀರಿಸಿದ್ದಾರೆ. ಸದ್ಯ ಚೀನಾ ಪ್ರವಾಸದಲ್ಲಿರುವ ಜೈರ್, ಈ ಘೋಷಣೆ ಮಾಡಿದ್ದಾರೆ. ಅತ್ಯಧಿಕ ಜನಸಂಖ್ಯೆ ಹೊಂದಿರುವ ಭಾರತ ಹಾಗೂ ಚೀನಾ ದೇಶಗಳ ಪ್ರವಾಸಿಗರನ್ನು ತಮ್ಮತ್ತ ಸೆಳೆಯುವುದು ಬ್ರೆಜಿಲ್ ಉದ್ದೇಶವಾಗಿದೆ.
ಈ ಹಿಂದೆ ಮುಂದುವರೆದ ದೇಶಗಳ ಪಟ್ಟಿಯಲ್ಲಿರುವ ಹಲವು ರಾಷ್ಟ್ರಗಳ ಪ್ರಜೆಗಳಿಗೆ ವೀಸಾ ನಿಯಮ ಸಡಿಲಗೊಳಿಸಿತ್ತು. ಅಮೆರಿಕ, ಕೆನಡಾ, ಜಪಾನ್ ಹಾಗೂ ಆಸ್ಟ್ರೇಲಿಯಾದ ಪ್ರವಾಸಿಗರು ಹಾಗೂ ಉದ್ಯಮಿಗಳು ಬ್ರೆಜಿಲ್‌ಗೆ ಬರಲು ವೀಸಾ ಬೇಕಿಲ್ಲ ಎಂದು ನಿಯಮಾವಳಿ ಬದಲಾವಣೆ ಮಾಡಿತ್ತು. ಇದೀಗ ಅಭಿವೃದ್ಧಿಶೀಲ ರಾಷ್ಟ್ರಗಳಾದ ಭಾರತ ಹಾಗೂ ಚೀನಾಗೂ ಇದೇ ನಿಯಮವನ್ನು ಅನ್ವಯಿಸಿದೆ.

Good news for all Indians travelling to Brazil.https://t.co/J4rjCQjF3t— India Today (@IndiaToday) October 25, 2019