fbpx

Please assign a menu to the primary menu location under menu

ಕಾಂಗ್ರೆಸ್ ಶಾಸಕನ ಮೇಲೆ ಏಕಾಏಕಿ ಗುಂಡಿನ ದಾಳಿ, ಪ್ರಾಣರಕ್ಷಣೆಗೆ ಓಡಿದ ಶಾಸಕ! ವೈರಲ್ ವಿಡಿಯೋ ನೋಡಿ

ಕಾಂಗ್ರೆಸ್ ಶಾಸಕನ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಸ್ಸಾಂ‌ನ ಮರಿಯಾನಿ ಶಾಸಕ ರೂಪ್ ಜ್ಯೋತಿ ಕುರ್ಮಿ ಅವರು ದೆಸ್ಸಾಯ್ ಕಣಿವೆ ಮೀಸಲು ಅರಣ್ಯ ಪ್ರದೇಶದಲ್ಲಿ ಅತಿಕ್ರಮಣದ ಬಗ್ಗೆ ಪರಿಶೀಲನೆಗೆಂದು ತೆರಳಿದ್ದ ಸಂದರ್ಭದಲ್ಲಿ ಈ ದಾಳಿ ನಡೆದಿದೆ.

ಶಾಸಕ ತನ್ನ ಭದ್ರತಾ ಪಡೆ, ಪತ್ರಕರ್ತರು ಮತ್ತು ಕೆಲ ಬೆಂಬಲಿಗರ ಜೊತೆ ಅತಿಕ್ರಮಣದ ಪರಿಶೀಲನೆಗೆಂದು ತೆರಳಿದ್ದರು. ಈ ವೇಳೆ ಏಕಾಏಕಿ ಗುಂಡಿನ ದಾಳಿ ನಡೆದಿದ್ದು, ಮೂವರು ಪತ್ರಕರ್ತರಿಗೆ ಗಾಯಗಳಾಗಿದೆ. ದುರ್ಘಟನೆಯಲ್ಲಿ ಎಲ್ಲರೂ ಜೀವಾಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಸ್ಸಾಂ ಜೊತೆ ಗಡಿ ಹಂಚಿಕೊಂಡಿರುವ ನಾಗಾಲ್ಯಾಂಡ್‌ನ ಚರೈಡಿಯೊ, ಶಿವಸಾಗರ್, ಜೋರ್ಹತ್, ಗೋಲಾಘಾಟ್ ಮತ್ತು ಕಾರ್ಬಿ ಆಂಗ್ಲಾಂಗ್ ಪ್ರದೇಶಗಳಲ್ಲಿ ನಾಗಾಲ್ಯಾಂಡ್ ಕಡೆಯಿಂದ ಪದೇಪದೇ ಅತಿಕ್ರಮಣ ನಡೆಯುತ್ತಿದ್ದು, ಇದರಿಂದಾಗಿ ಇಲ್ಲಿ ಆಗಾಗ ಹಿಂಸಾಚಾರಗಳು ನಡೆಯುತ್ತಿರುತ್ತೆ. ಕಾಂಗ್ರೆಸ್ ಶಾಸಕನ ಮೇಲೆಯೂ ನಾಗಾಲ್ಯಾಂಡ್ ಗಡಿ ಭಾಗದಿಂದ ಗುಂಡಿನ ದಾಳಿ ನಡೆಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಘಟನೆಯ ಬಗ್ಗೆ ಅಸ್ಸಾಂ ಮುಖ್ಯಮಂತ್ರಿ ಹಿಮಾಂತ್ ಬಿಸ್ವಾ ಅವರು ಕಳವಳ ವ್ಯಕ್ತಪಡಿಸಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳನ್ನು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಲು ತಿಳಿಸಿದ್ದಾರೆ. ಘಟನೆಯ ವಿಡಿಯೋಗಳು ವೈರಲ್ ಆಗಿದ್ದು, ಕಾಂಗ್ರೆಸ್ ಶಾಸಕ ತನ್ನ ಭದ್ರತಾಪಡೆಗಳು ಹಾಗೂ ಬೆಂಬಲಿಗರ ಸಹಾಯದಿಂದ ಪ್ರಾಣರಕ್ಷಣೆಗೆ ಓಡುತ್ತಿರೋದನ್ನ ಕಾಣಬಹುದಾಗಿದೆ‌. ವೈರಲ್ ವಿಡಿಯೋ ನೋಡಿ,
Watch Video:

video

error: Content is protected !!