fbpx

Please assign a menu to the primary menu location under menu

ಕಣ್ಣಮುಂದೆ ಕರೋನಾ ವಾರಿಯರ್ ಪ್ರಾಣ ಹೋಗುತ್ತಿದ್ದರೂ ಸಹಾಯಕ್ಕೆ ಮುಂದಾಗದ ಬಿಜೆಪಿ ಶಾಸಕ, ಶಾಕಿಂಗ್ ವಿಡಿಯೋ ನೋಡಿ

ಅಪಘಾತ ಉಂಟಾಗಿ ಆರೋಗ್ಯಾಧಿಕಾರಿಯ ಪ್ರಾಣ ಹೋಗುತ್ತಿದ್ದರೂ ಬಿಜೆಪಿ ಶಾಸಕ ಸಹಾಯ ಮಾಡದೆ ಕಾರಿನಲ್ಲೇ ಕುಳಿತುಕೊಂಡು ದರ್ಪ ತೋರಿದ ಘಟನೆ ಚಿಕ್ಕಮಗಳೂರಿನ ತರೀಕೆರೆಯಲ್ಲಿ ನಡೆದಿದೆ. ಬಿಜೆಪಿ ಶಾಸಕ ಡಿ.ಎಸ್. ಸುರೇಶ್ ಅವರ ಈ ಅಮಾನವೀಯ ವರ್ತನೆಗೆ ಸ್ಥಳೀಯರು ಅಸಮಾಧಾನ ಹೊರಹಾಕಿದ್ದಾರೆ.

ಕೊರೋನಾ ಡ್ಯೂಟಿ ಮುಗಿಸಿ ತೆರಳುತ್ತಿದ್ದ ಹಿರಿಯ ಆರೋಗ್ಯಾಧಿಕಾರಿ ರಮೇಶ್ ಅವರ ಬೈಕ್ ಗೆ ತರೀಕೆರೆಯ ಲಕ್ಕವಳ್ಳಿ ಕ್ರಾಸ್ ಬಳಿ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದಿದೆ. ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಅವರನ್ನು ಆಸ್ಪತ್ರೆಗೆ ಸೇರಿಸಲು ಸ್ಥಳೀಯರು ಕೂಡಲೇ ಆ್ಯಂಬುಲೆನ್ಸ್‌ಗೆ ಫೋನ್ ಮಾಡಿದ್ದರೂ ಆ್ಯಂಬುಲೆನ್ಸ್ ಬಂದಿರಲಿಲ್ಲ.

ಅದೇ ಸಂದರ್ಭದಲ್ಲಿ ಆ ಮಾರ್ಗದಲ್ಲೇ ಬಂದ ತರೀಕೆರೆ ಬಿಜೆಪಿ ಶಾಸಕ ಡಿ.ಎಸ್. ಸುರೇಶ್ ಅವರು ರಸ್ತೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಆರೋಗ್ಯಾಧಿಕಾರಿ ರಮೇಶ್‌ಗೆ ಸಹಾಯ ಮಾಡಲು ಕಾರಿನಿಂದ ಕೆಳಿಗೆ ಇಳಿಯಲೇ ಇಲ್ಲ. ಅರ್ಧ ಗಂಟೆಗೂ ಹೆಚ್ಚು ಕಾಲ ರಸ್ತೆಯಲ್ಲಿ ಒದ್ದಾಡಿದ ಆರೋಗ್ಯಾಧಿಕಾರಿ ನೋವಿನಿಂದ ನರಳಾಡುತ್ತಿದ್ದರೂ ಶಾಸಕ ಸುರೇಶ್ ಸಹಾಯ ನೀಡಲಿಲ್ಲ.

ಈ ಅಪಘಾತ ನಡೆದು ಅರ್ಧ ಗಂಟೆಯ ಬಳಿಕ ಘಟನಾ ಸ್ಥಳಕ್ಕೆ ಆ್ಯಂಬುಲೆನ್ಸ್ ಆಗಮಿಸಿದ್ದು, ಗಂಭೀರವಾಗಿ ಗಾಯಗೊಂಡಿದ್ದ ರಮೇಶ್ ಅವರನ್ನು ಶಿವಮೊಗ್ಗಕ್ಕೆ ರವಾನೆ ಮಾಡಲಾಯಿತು. ಆದರೆ, ತೀವ್ರ ರಕ್ತಸ್ರಾವದಿಂದ ಮಾರ್ಗಮಧ್ಯೆಯೇ ಆರೋಗ್ಯಾಧಿಕಾರಿ ರಮೇಶ್ ಅವರ ಪ್ರಾಣಪಕ್ಷಿ ಹಾರಿಹೋಗಿದೆ.

ಅಪಘಾತ ಸ್ಥಳದಲ್ಲಿ ಅಮಾನವೀಯ ವರ್ತನೆ ತೋರಿದ ಶಾಸಕ ಡಿ.ಎಸ್.ಸುರೇಶ್ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಶಾಸಕರು ಸ್ವಲ್ಪ ಮನಸು ಮಾಡಿದ್ದರೂ ಆರೋಗ್ಯಾಧಿಕಾರಿಯ ಪ್ರಾಣ ಉಳಿಯುತ್ತಿತ್ತು. ಆದರೆ, ಚಿಕಿತ್ಸೆ ಸಿಗುವುದು ತಡವಾಗಿದ್ದರಿಂದ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
Watch Video:

video

error: Content is protected !!