fbpx

Please assign a menu to the primary menu location under menu

ಆತ್ಮಾಹುತಿ ದಾಳಿಯ ಮೂಲಕ ‘ಯೋಗಿ ಆದಿತ್ಯನಾಥ್’ ಅವರನ್ನು ಉಡಾಯಿಸುತ್ತೇವೆ, ಬೆದರಿಕೆ ಬಂದಿದ್ದು ಎಲ್ಲಿಂದ ಗೊತ್ತೇ?

ಛತ್ತೀಸ್‌ಗಡದಲ್ಲಿ ನಡೆದ ನಕ್ಸಲ್ ದಾಳಿಯಲ್ಲಿ 23 ಭಾರತೀಯ ಯೋಧರು ಹುತಾತ್ಮರಾದ ಬೆನ್ನಲ್ಲೇ ಇದೀಗ ಮುಂಬೈನ ಕೇಂದ್ರ ಮೀಸಲು ಪೊಲಿಸ್ ಪಡೆ(ಸಿಆರ್‌ಪಿಎಫ್)ಗೆ ಇಮೇಲ್ ಮೂಲಕ ಬೆದರಿಕೆ ಪತ್ರವೊಂದು ಬಂದಿದೆ.

ಪತ್ರದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಗೃಹ ಸಚಿವ ಅಮಿತ್ ಶಾ ಅವರನ್ನು ಕೊಲ್ಲೋದಾಗಿ ಬೆದರಿಕೆ ಹಾಕಲಾಗಿದೆ. ಇಷ್ಟೇ ಅಲ್ಲದೆ ಪೂಜಾ ಸ್ಥಳಗಳು ಹಾಗೂ ಭಾರತದ ಇತರ ಪ್ರಮುಖ ಸ್ಥಳಗಳ ಮೇಲೆ ದಾಳಿ ಮಾಡುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ.

ನಮ್ಮಲ್ಲಿ 11 ಆತ್ಮಹತ್ಯಾ ಬಾಂಬರ್ ಗಳಿದ್ದಾರೆ. ಆತ್ಮಹತ್ಯಾ ದಾಳಿಯ ಮೂಲಕ ಯೋಗಿ ಆದಿತ್ಯನಾಥ್ ಮತ್ತು ಅಮಿತ್ ಶಾ ಅವರನ್ನು ಮುಗಿಸುತ್ತೇವೆ. ಯೋಗಿ ಆದಿತ್ಯನಾಥ್ ಹಾಗೂ ಅಮಿತ್ ಶಾ ಅವರನ್ನು ಕೊಲೆ ಮಾಡುವುದೇ ನಮ್ಮ ಗುರಿಯಾಗಿದೆ ಎಂದು ಪತ್ರದಲ್ಲಿ ಬರೆಯಲಾಗಿದೆ.

ಈ ಸಂಬಂಧ ಮುಂಬೈ ಪೋಲೀಸರು ತನಿಖೆ ಕೈಗೆತ್ತಿಕೊಂಡಿದ್ದು, ಇಮೇಲ್ ಮೂಲಕ ಬೆದರಿಕೆ ಹಾಕಿದ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

error: Content is protected !!