fbpx

Please assign a menu to the primary menu location under menu

ಕಳೆದ ಮೂರು ವರ್ಷದಲ್ಲಿ ಕಮ್ಯುನಿಸ್ಟ್ ಚೀನಾ ನಾಶ ಮಾಡಿರುವ ‘ಮಸೀದಿಗಳ’ ಸಂಖ್ಯೆ ಎಷ್ಟು ಗೊತ್ತೇ?

ಚೀನಾದ ಕಮ್ಯುನಿಸ್ಟ್ ಆಡಳಿತ ತನ್ನ ದೇಶದಲ್ಲಿರುವ ಮುಸ್ಲಿಮ್ ಜನಾಂಗವನ್ನು ದಮನ ಮಾಡಲು ಬಾರೀ ತಯಾರಿ ನಡೆಸಿರೋದು ಬಯಲಾಗಿದೆ. ಸರ್ಕಾರಿ ಬೆಂಬಲಿತ ಅಧಿಕಾರಿಗಳು ಚೀನಾದ ಕ್ಸಿನ್ಜಿಯಾಂಗ್‌ ಪ್ರಾಂತ್ಯವೊಂದರಲ್ಲೇ 16,000 ಸಾವಿರ ಮಸೀದಿಗಳನ್ನು ನೆಲಸಮ ಮಾಡಿದ್ದಾರೆ ಎಂಬುದಾಗಿ ಆಸ್ಟ್ರೇಲಿಯಾದ ಥಿಂಕ್ ಟ್ಯಾಂಕ್ ಶುಕ್ರವಾರ ವರದಿ ಮಾಡಿದೆ.

ಇತ್ತೀಚಿಗೆ ಈ ಪ್ರದೇಶದಲ್ಲಿ ವ್ಯಾಪಕ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ವರದಿ ತಿಳಿಸಿದೆ. ಹತ್ತು ಲಕ್ಷಕ್ಕೂ ಅಧಿಕ ಉಯಿಘರ್ ಮುಸ್ಲಿಂ ಮತ್ತು ಇತರ ಮುಸ್ಲಿಂ ಟರ್ಕಿಶ್ ಮಾತನಾಡುವ ಜನರನ್ನು ವಾಯುವ್ಯ ಪ್ರದೇಶದ ಶಿಬಿರಗಳಲ್ಲಿ ಬಂಧನಕ್ಕೊಳಪಡಿಸಲಾಗಿದೆ ಎಂದು ತಿಳಿದುಬಂದಿದೆ.

ಇಲ್ಲಿನ ನಿವಾಸಿಗಳಿಗೆ ಇಸ್ಲಾಂನ ಸಾಂಪ್ರದಾಯಿಕ ಮತ್ತು ಧಾರ್ಮಿಕ ಚಟುವಟಿಕೆಗಳನ್ನು ತ್ಯಜಿಸುವಂತೆ ಅಧಿಕಾರಿಗಳು ನಿರ್ಬಂಧ ಹೇರಿದ್ದಾರೆ ಎಂಬುದಾಗಿ ಹಕ್ಕುಗಳ ಗುಂಪುಗಳು ಹೇಳಿವೆ. ಸುಮಾರು 16,000 ಮಸೀದಿಗಳು ನೆಲಸಮವಾಗಿವೆ ಹಾಗೂ ಹಲವು ಪವಿತ್ರ ಮುಸ್ಲಿಮ್ ತಾಣಗಳನ್ನು ನಾಶ ಮಾಡಲಾಗಿದೆ ಎಂಬುದಾಗಿ ಉಪಗ್ರಹ ಚಿತ್ರಣವನ್ನು ಆಧರಿಸಿ ಆಸ್ಟ್ರೇಲಿಯಾದ ಸ್ಟ್ರಾಟೆಜಿಕ್ ಪಾಲಿಸಿ ಇನ್ಸ್ಟಿಟ್ಯೂಟ್ (ಎಎಸ್ಪಿಐ) ವರದಿ ಮಾಡಿದೆ.

ಕೇವಲ ಕಳೆದ ಮೂರು ವರ್ಷಗಳಲ್ಲಿಯೇ ಅಂದಾಜು 8,500 ಮಸೀದಿಗಳು ಸಂಪೂರ್ಣವಾಗಿ ನಾಶವಾಗಿವೆ ಎಂದೂ ಉರುಮ್ಕಿ ಮತ್ತು ಕಾಶ್ಗರ್ ಕೇಂದ್ರಗಳ ಹೊರಗೆ ಹೆಚ್ಚಿನ ಹಾನಿಯಾಗಿದೆ ಎಂಬುದಾಗಿ ವರದಿಯಲ್ಲಿ ತಿಳಿಸಲಾಗಿದೆ.

error: Content is protected !!