fbpx

Please assign a menu to the primary menu location under menu

ಹಿಂದಿ ಹೇರಿಕೆಯ ವಿರುದ್ಧ ಸಂಸತ್ತಿನಲ್ಲಿ ಗುಡುಗಿದ ಸುಮಲತಾ ಅಂಬರೀಶ್! ವಿಡಿಯೋ ಇಲ್ಲಿದೆ ನೋಡಿ

ಹಿಂದಿ ಹೇರಿಕೆಯ ಬಗ್ಗೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಕೋಲಾಹಲ ಎದ್ದಿರೋದು ಎಲ್ಲರಿಗೂ ಗೊತ್ತಿರೋ ವಿಚಾರ. ಕೆಲ ದಿನಗಳ ಹಿಂದೆ ನಡೆದ ಹಿಂದಿ ದಿನಾಚರಣೆಯನ್ನು ವಿರೋಧಿಸಿ ದಕ್ಷಿಣ ಭಾರತದ ರಾಜ್ಯಗಳು ಪ್ರತಿಭಟನೆ ನಡೆದಿತ್ತು. ಸ್ಥಳೀಯ ಭಾಷೆಗಳನ್ನು ಕೇಂದ್ರ ಸರ್ಕಾರ ಕಡೆಗಣಿಸಿ ಹಿಂದಿ ಹೇರಲು ಹೊರಟಿದೆ ಅನ್ನೋದೆ ಇದಕ್ಕೆ ಕಾರಣ.

ಇದೀಗ ಸಂಸತ್‌ನಲ್ಲಿ ನಡೆಯುತ್ತಿರುವ ಮುಂಗಾರು ಅಧಿವೇಶನದಲ್ಲಿ ಕೂಡ ಹಿಂದಿ ಹೇರಿಕೆ ಪ್ರತಿಧ್ವನಿಸಿದೆ. ಹಿಂದಿ ಹೇರಿಕೆಯ ಬಗ್ಗೆ ಮಾತನಾಡಿದ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು,‌ ‘ನಾವು ಹಿಂದಿಯನ್ನು ಭಾಷೆಯ ರೂಪದಲ್ಲಿ ಪ್ರೀತಿಸುತ್ತೇವೆ. ಹಾಗಂತ ನಮ್ಮ ಮೇಲೆ ಹಿಂದಿಯನ್ನು ಹೇರಲು ಬರಬೇಡಿ. ಹಿಂದಿ ಹೇರಿಕೆಯಿಂದ ನಮ್ಮ ಸಂವಹನಕ್ಕೆ ತೊಂದರೆಯಾಗುತ್ತೆ. ನಾವು ಯಾವುದೇ ಕಾರಣಕ್ಕೂ ಹಿಂದಿ ಹೇರಿಕೆಯನ್ನು ಒಪ್ಪುವುದಿಲ್ಲ’ ಎಂದು ಹೇಳಿದ್ದಾರೆ.

ದೇಶದೆಲ್ಲೆಡೆಯಿಂದ ಬರುವ ಜನರನ್ನು ನಮ್ಮ ಕರ್ನಾಟಕ ಪ್ರೀತಿಯಿಂದ ಬರಮಾಡಿಕೊಂಡಿದೆ. ನಮ್ಮ ಕನ್ನಡಕ್ಕೆ ಅದರದೇ ಆದ ಪರಂಪರೆ, ಇತಿಹಾಸವಿದೆ. ಒಂದು ವೇಳೆ ದೇಶದ ಜನರ ಮೇಲೆ ಹಿಂದಿ ಹೇರಿಕೆ ಮಾಡಲು ಹೋದರೆ ಇದರಿಂದ ಪ್ರಾದೇಶಿಕ ಭಾಷೆಗಳ ಮೇಲೆ ಪರಿಣಾಮ ಬೀರಲಿದೆ.

ಸರ್ಕಾರಿ ಯೋಜನೆಗಳು, ಸವಲತ್ತುಗಳು ಹಿಂದಿ ಹೇರಿಕೆಯ ಕಾರಣದಿಂದ ಸಾಮಾನ್ಯ ಜನರನ್ನು ತಲುಪುತ್ತಿಲ್ಲ. ನಾವು ಹಿಂದಿ ಭಾಷೆಯನ್ನು ಪ್ರೀತಿಸುತ್ತೇವೆ, ಅದಕ್ಕಿಂತ ಹೆಚ್ಚಾಗಿ ನಮ್ಮ ಮಾತೃಭಾಷೆ ಕನ್ನಡವನ್ನು ಪ್ರೀತಿಸ್ತೇವೆ ಎಂದು ಹೇಳಿದ್ದಾರೆ. ಸುಮಲತಾ ಅವರು ಸಂಸತ್‌ನಲ್ಲಿ ಮಾಡಿರುವ ಭಾಷಣದ ವಿಡಿಯೋ ಇದೀಗ ವೈರಲ್ ಆಗಿದೆ. ಇಲ್ಲಿದೆ ನೋಡಿ ಪೂರ್ತಿ ವಿಡಿಯೋ,

Watch Video

video
error: Content is protected !!