fbpx

ಯೋಗಿ ರಾಜ್ಯದಲ್ಲಿ ಮತ್ತೆ ಘರ್ಜಸಿತು ಜೆಸಿಬಿ, ಗೂಂಡಾ ರಾಜಕಾರಣಿ ‘ಮುಖ್ತಾರ್ ಅನ್ಸಾರಿ’ ಸಾಮ್ರಾಜ್ಯ ಧ್ವಂಸ! ವೈರಲ್ ವಿಡಿಯೋ ನೋಡಿ

ಗೂಂಡಾ ರಾಜಕಾರಣಿ, ಮಾಫಿಯಾ ದೊರೆ ಮುಖ್ತಾರ್ ಅನ್ಸಾರಿಯ ಅಕ್ರಮ ಸಾಮ್ರಾಜ್ಯವನ್ನು ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರಪ್ರದೇಶ ಸರ್ಕಾರ ಧ್ವಂಸ ಮಾಡಲು ಮುಂದಾಗಿದೆ. ಅನ್ಸಾರಿಗೆ ಸೇರಿದ ಕೋಟ್ಯಾಂತರ ಮೌಲ್ಯದ ಅಕ್ರಮ ಆಸ್ತಿಗಳನ್ನು ಜಪ್ತಿಮಾಡಲಾಗುತ್ತಿದೆ.

ಗೂಂಡಾಗಳಿಂದಲೇ ತುಂಬಿ ಹೋಗಿದ್ದ ಉತ್ತರಪ್ರದೇಶವನ್ನು ಗೂಂಡಾ ಮುಕ್ತ ರಾಜ್ಯವಾಗಿಸಲು ಯೋಗಿ ಆದಿತ್ಯನಾಥ್ ಪಣ ತೊಟ್ಟಿದ್ದಾರೆ. ಕೆಲ ಸಮಯಗಳ ಹಿಂದಷ್ಟೇ ಪೋಲೀಸರ ಹಂತಕ ವಿಕಾಸ್ ದುಬೆಯನ್ನು ಎನ್ಕೌಂಟರ್ ಮಾಡಿ ಆತನ ಅಕ್ರಮ ಆಸ್ತಿಗಳನ್ನು ವಶಪಡಿಸಿಕೊಂಡಿತ್ತು. ಇದೀಗ ಗೂಂಡಾ ರಾಜಕಾರಣಿ ಮುಖ್ತಾರ್ ಅನ್ಸಾರಿಯ ಅಕ್ರಮ ಅಸ್ತಿಗಳನ್ನು ವಶಪಡಿಸಿಕೊಳ್ಳುವ ಕಾರ್ಯಕ್ಕೆ ಮುಂದಾಗಿದೆ.

ಆತ ಅಕ್ರಮವಾಗಿ ಕಟ್ಟಿದ್ದ ಮನೆಯನ್ನು ಇದೀಗ ನೆಲಸಮ ಮಾಡಲಾಗಿದ್ದು, ಈ ವಿಡಿಯೋವನ್ನು ಪತ್ರಕರ್ತ ಅಮನ್‌ ಶರ್ಮಾ ಅವರು ಹಂಚಿಕೊಂಡಿದ್ದಾರೆ. ಜೆಸಿಬಿ ಯಂತ್ರವು ಮುಖ್ತಾರ್ ಅನ್ಸಾರಿಯ ಮನೆ ಉರುಳಿಸುವ ವಿಡಿಯೋ ಇದೀಗ ವೈರಲ್‌ ಆಗುತ್ತಿದೆ.

yogi 8058716299707016630

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ ಲಕ್ನೋ ಜಿಲ್ಲಾಡಳಿತ, “ದಂಗ್‌ಬಾಗ್ ಕಾಲೋನಿ ಬಳಿ ಡಾನ್ ಮುಖ್ತಾರ್ ಅನ್ಸಾರಿ ಅಕ್ರಮ ಆಸ್ತಿಯನ್ನು ನೆಲಸಮ ಮಾಡಲಾಗಿದೆ. ಉರುಳಿಸುವಿಕೆಯ ವೆಚ್ಚವನ್ನು ಆತನಿಂದಲೇ ವಸೂಲಿ ಮಾಡಲಾಗುವುದು. ಎಫ್‌ಐಆರ್ ದಾಖಲಿಸಲಾಗುವುದು. ಈ ಅಕ್ರಮ ನಿರ್ಮಾಣವನ್ನು ನಡೆಸಲು ಕಾರಣರಾದ ಅಧಿಕಾರಿಗಳನ್ನು ಗುರುತಿಸಿ ಶಿಕ್ಷಿಸಲಾಗುತ್ತದೆ” ಎಂದು ತಿಳಿಸಿದೆ.

ಇದನ್ನೂ ಓದಿ:  ಮಥುರೆಯ ಕೃಷ್ಣ ಜನ್ಮ ಭೂಮಿಯಲ್ಲಿರುವ ಅಕ್ರಮ ಮಸೀದಿ ತೆರವಿಗೆ ಕೋರ್ಟ್‌ನಲ್ಲಿ ದಾವೆ! ಇಲ್ಲಿದೆ‌ ಡಿಟೈಲ್ಸ್

ಅಲ್ಲದೆ ಆತನ ಸಂಬಂಧಿಕರ ಬಳಿ ಇದ್ದ 39.80 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಆಸ್ತಿಯನ್ನು ವಶಕ್ಕೆ ಪಡೆಯಲಾಗಿದೆ ಮತ್ತು ಅವರ ಬಳಿ ಇದ್ದ 33 ಶಸ್ತ್ರಾಸ್ತ್ರಗಳ ಪರವಾನಗಿ ರದ್ದುಪಡಿಸಿ ಅದನ್ನು ವಿವಿಧ ಜೈಲುಗಳಿಗೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಆತನ ಸಂಬಂಧಿಕರು ಮತ್ತು ಸಹವರ್ತಿಗಳಿಗೆ ಸೇರಿದ ಅಕ್ರಮ ಆಸ್ತಿಯನ್ನು ಗುರುತಿಸಲಾಗುತ್ತಿದೆ.

ಆತನಿಗೆ ಸೇರಿದ 17 ಮಾಫಿಯಾಗಳನ್ನು ಗುರುತಿಸಲಾಗಿದ್ದು ಇವುಗಳಲ್ಲಿ ಮೂರು ಆಲ್ಕೋಹಾಲ್ ಮಾಫಿಯಾಗಳು, ಮೂರು ಹಸು ಕಳ್ಳಸಾಗಣೆ ಮತ್ತು ಕ್ರಿಮಿನಲ್ ಮಾಫಿಯಾಗಳು ಸೇರಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಜೆಸಿಬಿ ಯಂತ್ರವು ಮುಖ್ತಾರ್ ಅನ್ಸಾರಿಯ ಮನೆ ಉರುಳಿಸುವ ವಿಡಿಯೋ ಇಲ್ಲಿದೆ ನೋಡಿ,

Watch Video

video

Trending Short Videos

error: Content is protected !!