fbpx

ದೇಶದ ನಂಬರ್ 1 ಮುಖ್ಯಮಂತ್ರಿ ಯಾರು? ಕರ್ನಾಟಕದ ಮುಖ್ಯಮಂತ್ರಿಗೆ ಎಷ್ಟನೇ ಸ್ಥಾನ? ಸಮೀಕ್ಷೆ ವರದಿ ಇಲ್ಲಿದೆ ನೋಡಿ

ಇಂಡಿಯಾ ಟುಡೆ – ಕಾರ್ವಿ ಇನ್ಸೈಟೈಸ್ ಮೂಡ್ ಆಫ್ ದಿ ನೇಶನ್ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ದೇಶದ ಅತ್ಯುತ್ತಮ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ರಾಜ್ಯದ ಅಭಿವೃದ್ದಿ, ಶಾಂತಿ ಸುವ್ಯವಸ್ಥೆ ಕಾಪಾಡಲು ಕಟ್ಟು ನಿಟ್ಟಿನ ಕ್ರಮ, ದಕ್ಷ ಆಡಳಿತ, ಎಲ್ಲಾ ವರ್ಗದವರಿಗೆ ನೆರವು ಸೇರಿದಂತೆ ಹಲವು ಕ್ಷೇತ್ರ ಹಾಗೂ ವಿಭಾಗದಲ್ಲಿ ಉತ್ತಮ ಸೇವೆ ಸಲ್ಲಿಸುವ ಮೂಲಕ ಜನರ ಮೆಚ್ಚುಗೆ ಗಳಿಸಿರುವ ಮುಖ್ಯಮಂತ್ರಿ ಯಾರು ಎಂದು ಸಮೀಕ್ಷೆ ನಡೆಸಲಾಗಿತ್ತು.

ಈ ಸಮೀಕ್ಷೆಯಲ್ಲಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ದೇಶದ ನಂಬರ್ 1 ಸಿಎಂ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಯೋಗಿ ಆದಿತ್ಯನಾಥ್ ಶೇಕಡಾ 24 ರಷ್ಟು ಮತಗಳನ್ನು ಪಡೆಯುವ ಮೂಲಕ ಸತತ ಮೂರನೇ ಬಾರಿ ಬೆಸ್ಟ್ ಸಿಎಂ ಎಂಬ ಪಟ್ಟ ಮುಡಿಗೇರಿಸಿಕೊಂಡಿದ್ದಾರೆ. ಕಳೆದ ವರ್ಷ ಶೇಕಡಾ 18 ರಷ್ಟು ಮತ ಪಡೆದಿದ್ದ ಯೋಗಿ ಆದಿತ್ಯನಾಥ್ ಈ ವರ್ಷ ಶೇಕಡಾ 24ರಷ್ಟು ಮತಗಳನ್ನು ಪಡೆದಿದ್ದಾರೆ.


Continue Reading

ಕರ್ನಾಟಕದ ಮುಖ್ಯಮಂತ್ರಿ ಈ ಸಮೀಕ್ಷೆಯಲ್ಲಿ ಹತ್ತನೇ ಸ್ಥಾನ ಪಡೆಯುವ ಮೂಲಕ ಟಾಪ್ ಹತ್ತರಲ್ಲಿ ಸ್ಥಾನ ಪಡೆದಿದ್ದಾರೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶೇಕಡಾ 15ರಷ್ಟು ಮತಗಳನ್ನು ಪಡೆದು 2ನೇ ಸ್ಥಾನ ಪಡೆದಿದ್ದಾರೆ. ಮೂರನೇ ಸ್ಥಾನ ಆಂದ್ರಪ್ರದೇಶ ಮುಖ್ಯಮಂತ್ರಿ ಜಗನ್ ರೆಡ್ಡಿ ಪಾಲಾಗಿದೆ.

ಟಾಪ್ 10 ಅತ್ಯುತ್ತಮ ಮುಖ್ಯಮಂತ್ರಿಗಳ ಪಟ್ಟಿ ಇಲ್ಲಿದೆ ನೋಡಿ
1) ಯೋಗಿ ಆದಿತ್ಯನಾಥ್(ಉತ್ತರ ಪ್ರದೇಶ)
2) ಅರವಿಂದ್ ಕೇಜ್ರಿವಾಲ್ (ದೆಹಲಿ)
3) ಜಗನ್ ರೆಡ್ಡಿ (ಆಂಧ್ರ ಪ್ರದೇಶ)
4) ಮಮತಾ ಬ್ಯಾನರ್ಜಿ(ಪಶ್ಚಿಮ ಬಂಗಾಳ)
5) ನಿತೀಶ್ ಕುಮಾರ್ (ಬಿಹಾರ)
6) ಉದ್ಧವ್ ಠಾಕ್ರೆ (ಮಹಾರಾಷ್ಟ್ರ)
7) ನವೀನ್ ಪಟ್ನಾಯಕ್ (ಒಡಿಶಾ)
8) ಕೆ ಚಂದ್ರಶೇಖರ್ ರಾವ್(ತೆಲಂಗಾಣ)
9) ಅಶೋಕ್ ಗೆಹ್ಲೋಟ್(ರಾಜಸ್ಥಾನ)
10) ಬಿಎಸ್ ಯಡಿಯೂರಪ್ಪ(ಕರ್ನಾಟಕ)

Trending Short Videos

close

This will close in 26 seconds

error: Content is protected !!