ಆಗಸ್ಟ್ ಮೊದಲ ವಾರದಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಅಡಿಪಾಯ ಹಾಕಲು ದಿನಾಂಕ ನಿಗದಿಪಡಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಂದಿರದ ಶಿಲಾನ್ಯಾಸಕ್ಕೆ ಅಡಿಪಾಯ ಹಾಕಲಿದ್ದಾರೆ.
ಆದರೆ ಇದೀಗ ರಾಮ ಮಂದಿರ ಭೂಮಿ ಪೂಜೆ ನಡೆಯಲು ಅವಕಾಶ ನೀಡದಂತೆ ಅಲಹಾಬಾದ್ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಾಲಗಿದೆ. ದೆಹಲಿ ಮೂಲ್ ಸಾಕೇತ್ ಗೋಖಲೆ ಎಂಬಾತ ಈ ಅರ್ಜಿಯನ್ನು ಸಲ್ಲಿಸಿದ್ದು, ಕರೋನಾ ವ್ಯಾಪಕವಾಗಿ ಹಬ್ಬುತ್ತಿರುವ ಈ ಸಮಯದಲ್ಲಿ ಭೂಮಿ ಪೂಜೆಗೆ ಅವಕಾಶ ನೀಡಬಾರದು. ಈ ಕಾರ್ಯಕ್ರಮದಲ್ಲಿ ಪ್ರಧಾನಿ ಸೇರಿ ಮುನ್ನೂರು ಜನ ಭಾಗವಹಿಸಲಿದ್ದು ತಕ್ಷಣ ಇದಕ್ಕೆ ತಡೆಯೊಡ್ಡಬೇಕು ಎಂದು ಕಾರಣ ನೀಡಿದ್ದಾನೆ.
Standing next to Rahul Gandhi is Saket Gokhale. He has filed a PIL in the Allahabad High Court seeking a stay on the Ram Mandir bhoomi poojan at Ayodhya. Join the dots! pic.twitter.com/BEhmJhKYG9
— Priti Gandhi – प्रीति गांधी (@MrsGandhi) July 24, 2020
ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ, ಯುಪಿ ಮುಖ್ಯಮಂತ್ರಿ ಸೇರಿ ಹಲವು ಗಣ್ಯರು, ಧಾರ್ಮಿಕ ಮುಖಂಡರು ಭಾಗವಹಿಸಲಿದ್ದು, ಇದು ಲಾಕ್ಡೌನ್ ನಿಯಮಗಳ ಉಲ್ಲಂಘನೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಒಂದು ವೇಳೆ ಈ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ಮಾನ್ಯ ಮಾಡಿದರೆ ರಾಮ ಮಂದಿರ ಭೂಮಿ ಪೂಜೆ ಮುಂದೂಡುವ ಅನಿವಾರ್ಯತೆ ಎದುರಾಗಲಿದೆ.
ಈ ಅರ್ಜಿಯ ಹಿಂದೆ ಕಾಣದ ‘ಕೈ’ಗಳ ಕೈವಾಡ ಇದೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ರಾಮ ಮಂದಿರ ನಿರ್ಮಾಣಕ್ಕೆ ಟ್ರಸ್ಟ್ ಪ್ರಾರಂಭವಾದಾಗಿನಿಂದ ಎಡಪಂಥೀಯರು, ಜಿ’ಹಾದಿಗಳು, ಮಿಷನರಿಗಳು ಮಂದಿರ ನಿರ್ಮಾಣ ತಡೆಯಲು ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಅಯೋಧ್ಯೆಯಲ್ಲಿ ಬುದ್ಧ ಮಂದಿರವಿತ್ತು ಎಂದು ಕಥೆ ಕಟ್ಟಿ ಹಿಂದೂಗಳ ವಿರುದ್ಧ ಬೌದ್ಧರನ್ನು ಎತ್ತಿಕಟ್ಟುವ ಹುನ್ನಾರ ಕಳೆದ ಕೆಲ ತಿಂಗಳುಗಳಿಂದ ನಡೆಯುತ್ತಿದೆ.
ಯಾತು ಏನೆ ಮಾಡಿದ್ರೂ ರಾಮ ಮಂದಿರ ಶಿಲನ್ಯಾಸ ಆಗಸ್ಟ್ 5ರಂದು ನಡೆಯಲಿದ್ಧು, ಪ್ರಧಾನಿ ಮೋದಿ ಭೂಮಿಪೂಜೆ ಕಾರ್ಯಕ್ರಮ ನೆರವೇರಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಲಾಕ್ಡೌನ್ ನಿಯಮಗಳನ್ನು ಅನುಸರಿಲಾಗುವುದು ಎಂದು ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಖಜಾಂಚಿ ಸ್ವಾಮಿ ಗೋವಿಂದ್ ದೇವ್ ಗಿರಿ ಸ್ಪಷ್ಟಪಡಿಸಿದ್ದಾರೆ.