fbpx

ದೇಶದ ಪರ ಅಭಿಮಾನ ಹೊಂದಿದ್ದೇ ತಪ್ಪಾ? ಮುಸ್ಲಿಂ ಯುವ ನಾಯಕನನ್ನು ಹ’ತ್ಯೆಗೈದ ಇ’ಸ್ಲಾಮಿಕ್ ಉ’ಗ್ರರು

ಪ್ರತ್ಯೇಕತಾವಾದಿಗಳಿಂದ ತುಂಬಿ ಹೋಗಿರುವ ಕಾಶ್ಮೀರದಲ್ಲೇ ಹುಟ್ಟಿದ್ದರೂ ಭಾರತದ ಬಗ್ಗೆ ಅಪಾರ ಅಭಿಮಾನ ಹೊಂದಿದ್ದ ಮುಸ್ಲಿಂ ಯುವ ನಾಯಕ ವಾಸಿಮ್ ಬ್ಯಾರಿ ಹಾಗೂ ಆತನ ಕುಟುಂಬದ ಮೇಲೆ ಪತ್ಯೇಕತಾವಾದಿ ಇಸ್ಲಾಮಿಕ್ ಉ’ಗ್ರರು ದಾಳಿ ನಡೆಸಿ ಹ’ತ್ಯೆ ಮಾಡಿರುವ ಘಟನೆ ಜಮ್ಮು-ಕಾಶ್ಮೀರದ ಬಂಡಿಪೋರದಲ್ಲಿ ನಡೆದಿದೆ. ಉ’ಗ್ರರ ದಾಳಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಶೇಖ್ ವಾಸಿಮ್, ಆತನ ತಂದೆ ಹಾಗೂ ತಮ್ಮನೂ ಮೃತರಾಗಿದ್ದಾರೆ.

ಶೇಖ್ ವಾಸಿಮ್ ಅವರ ಕುಟುಂಬದೊಂದಿಗೆ ಅಂಗಡಿಯಲ್ಲಿ ಕುಳಿತ್ತಿದ್ದಾಗ ಭ’ಯೋತ್ಪಾದಕರು ಏಕಾಏಕಿ ಗುಂ’ಡಿನ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡ ವಾಸಿಮ್, ಅವರ ತಂದೆ ಮತ್ತು ತಮ್ಮನನ್ನು ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ, ತೀವ್ರ ರಕ್ತ ಸ್ರಾವದಿಂದಾಗಿ ಮೂವರು ಸಾವನ್ನಪ್ಪಿದ್ದಾರೆ.


ಸುದ್ದಿಗಳನ್ನು ತಕ್ಷಣ ಪಡೆಯಲು ನಮ್ಮ 'Telgram Channel' ಸೇರಿ
ವಾಸಿಮ್ ಬ್ಯಾರಿ

ಈ ವಿಚಾರದ ಬಗ್ಗೆ ಮಾಹಿತಿ ನೀಡಿರುವ ಜಮ್ಮು-ಕಾಶ್ಮೀರ ಪೋಲೀಸರು, ‘ಬಂಡಿಪೋರಾದಲ್ಲಿ ಬಿಜೆಪಿ ಕಾರ್ಯಕರ್ತ ವಾಸಿಮ್ ಹಾಗೂ ಅವರ ಕುಟುಂಬದ ಮೇಲೆ ಭ’ಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದಾರೆ. ಭ’ಯೋತ್ಪಾದಕರ ಗುಂಡಿನ ದಾಳಿಯಲ್ಲಿ ವಾಸೀಮ್ ಬ್ಯಾರಿ ಮತ್ತು ಅವರ ತಂದೆ ಬಶೀರ್ ಅಹ್ಮದ್ ಮತ್ತು ಸಹೋದರ ಉಮರ್ ಬಶೀರ್ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ಮೂವರೂ ಸಾವನ್ನಪ್ಪಿದ್ದಾರೆ’ ಎಂದು ಹೇಳಿದ್ದಾರೆ.

ಉ’ಗ್ರರ ಬೆದರಿಕೆ ಹಿನ್ನೆಲೆಯಲ್ಲಿ ವಾಸಿಮ್ ಮತ್ತು ಅವರ ಕುಟುಂಬಕ್ಕೆ ಎಂಟು ಮಂದಿ ಭದ್ರತಾ ಸಿಬ್ಬಂದಿಯನ್ನು ನೇಮಿಸಲಾಗಿತ್ತು ಎಂದು ತಿಳಿದುಬಂದಿದೆ. ಆದರೆ ಘಟನೆ ನಡೆದ ಸ್ಥಳದಲ್ಲಿ ಒಬ್ಬರೂ ಭದ್ರತಾ ಸಿಬ್ಬಂದಿಗಳು ಇಲ್ಲದೇ ಇರುವುದು ಅನುಮಾನಕ್ಕೆ ಕಾರಣವಾಗಿದೆ. ಕರ್ತವ್ಯ ಲೋಪ ಮಾಡಿದ ವಾಸಿಮ್ ಅವರ ಭದ್ರತಾ ಸಿಬ್ಬಂದಿಯನ್ನು ಬಂಧಿಸಲಾಗಿದ್ದು, ಅವರನ್ನು ವಿಚಾರಣೆ ನಡೆಸಲಾಗುವುದು ಎಂದು ಜಮ್ಮು-ಕಾಶ್ಮೀರ ಡಿಜಿಪಿ ದಿಲ್ಭಾಗ್ ಸಿಂಗ್ ಹೇಳಿದ್ದಾರೆ.

error: Content is protected !!