ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರದಂದು ಲಡಾಖ್ನ ಲೇಹ್ ಜಿಲ್ಲೆಯ ನಿಮೂಗೆ ಭೇಟಿ ನೀಡಿದ್ದು, ಭದ್ರತೆಗೆ ನಿಯೋಜನೆಗೊಂಡಿದ್ದ ಯೋಧರ ಜೊತೆಗೆ ಮಾತುಕತೆ ನಡೆಸಿದ್ದರು. ಪ್ರಧಾನಿಗೆ ಭಾರತದ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ(ಸಿಡಿಎಸ್) ಬಿಪಿನ್ ರಾವತ್ ಹಾಗೂ ಭೂಸೇನಾ ಮುಖ್ಯಸ್ಥ ಕೂಡ ಪ್ರಧಾನಿಯವರಿಗೆ ಸಾಥ್ ನೀಡಿದ್ದರು.
ಸೇನಾ ನೆಲೆಯಲ್ಲಿನ ಸೈನಿಕರೊಂದಿಗೆ ಉಭಯ ಕುಶಲೋಪಹರಿ ನಡೆಸಿದ್ದ ಪ್ರಧಾನಿ ಮೋದಿಯವರು, ‘ಕೇಂದ್ರ ಸರ್ಕಾರ ಹಾಗೂ ಇಡೀ ಭಾರತ ನಿಮ್ಮೊಂದಿಗೆ ಗಟ್ಟಿಯಾಗಿ ನಿಂತಿದೆ ಎಂದು ಭರವಸೆ ನೀಡುವ ಮೂಲಕ ಸೈನಿಕರ ಆತ್ಮಸ್ಥೈರ್ಯ ಹೆಚ್ಚಿಸುವ ಮಾತುಗಳನ್ನಾಡಿದ್ದರು.
ಇದೇ ಸಂದರ್ಭದಲ್ಲಿ ‘ಭಾರತ್ ಮಾತಾಕಿ ಜೈ’ ‘ವಂದೇ ಮಾತರಂ’ ಎನ್ನುತ್ತಾ ಯೋಧರೊಂದಿಗೆ ಹೆಜ್ಜೆಹಾಕಿದ್ದರು. ಈ ವೀಡಿಯೋ ವೈರಲ್ ಆಗಿತ್ತು. ಆದರೆ ಪ್ರಧಾನಿಯವರ ಲೇಹ್ ಭೇಟಿಯನ್ನು ಕಾಂಗ್ರೆಸ್ ಹಾಗೂ ಅದರ ಮಿತ್ರಪಕ್ಷಗಳು ಗೇಲಿ ಮಾಡಿದ್ದು, ಸುಳ್ಳು ಸುದ್ದಿಯ ಮೂಲಕ ಮೋದಿಯವರನ್ನು ಟ್ರೋಲ್ ಮಾಡೋದರ ಜೊತೆಗೆ, ಸೈನಿಕರ ಮನೋಬಲ ಕುಂದುವಂತಹ ಬರಹಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದಾರೆ.
ಈ ಬಗ್ಗೆ ಸೇನಾ ಮುಖ್ಯಸ್ಥರು ಹೇಳಿಕೆ ಬಿಡುಗಡೆ ಮಾಡಿದ್ದು, ‘ಸುಳ್ಳು ಸುದ್ದಿಗಳನ್ನು ಹಬ್ಬಿಸಿ ಸೈನಿಕರ ಮನೋಬಲ ಕುಗ್ಗಿಸಬೇಡಿ’ ಎಂದು ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ. ಇದೇ ವಿಷಯವಾಗಿ ಸುವರ್ಣ ನ್ಯೂಸ್ನಲ್ಲಿ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಎಡಪಂಥೀಯ ಗಂಜಿಗಿರಾಕಿಯೊಬ್ಬ ಭಾರತೀಯ ಸೇನೆ ‘ಭಾರತ್ ಮಾತಾಕಿ ಜೈ’ ‘ವಂದೇ ಮಾತರಂ’ ಎಂದಿರೋದನ್ನ ಪ್ರಸ್ತಾಪಿಸಿ, ಈ ಘೋಷಣೆಗಳು ಸಂವಿಧಾನ ವಿರೋಧಿ ಎಂದು ಬೊಗಳಿದ್ದಾನೆ.
ಇದರಿಂದ ರೊಚ್ಚಿಗೆದ್ದ ಸುವರ್ಣ ನ್ಯೂಸ್ನ ಖ್ಯಾತ ನಿರೂಪಕ ಅಜಿತ್ ಹನುಮಕ್ಕನವರ್ ಆ ಗಂಜಿಗಿರಾಕಿಯನ್ನು ಡಿಬೇಟ್ ನಿಂದ ಹೊರದಬ್ಬಿದ್ದಾರೆ. ಇದೀಗ ಈ ವೀಡಿಯೋ ವೈರಲ್ ಆಗಿದ್ದು, ದೇಶದ್ರೋಹಿ ಕಮ್ಯುನಿಸ್ಟ್ ಮನಸ್ಥಿತಿ ಮತ್ತೊಮ್ಮೆ ಜಗಜ್ಜಾಹೀರಾಗಿದೆ. ವೀಡಿಯೋ ಇಲ್ಲಿದೆ ನೋಡಿ,