fbpx

Please assign a menu to the primary menu location under menu

‘ಕರೋನಾದಿಂದ ಸತ್ತವರ ಶವದಿಂದ ಸೋಂಕು ಹರಡಲ್ಲ’, ತನ್ನ ನಡೆ ಸಮರ್ಥಿಸಲು ಹೋಗಿ ನಗೆಪಾಟೀಲಿಗೀಡಾದ ಖಾದರ್

ಮಹಾಮಾರಿ ಕರೋನಾದಿಂದ ಮೃತಪಟ್ಟ ವ್ಯಕ್ತಿಯ ಅಂತ್ಯ ಸಂಸ್ಕಾರದಲ್ಲಿ ಯಾವುದೇ ರೀತಿಯ ಪಿಪಿಇ ಕಿಟ್ ಧರಿಸದೆ ಪಾಲ್ಗೊಂಡ್ ವಿವಾದಕ್ಕೀಡಾಗಿರುವ ಕಾಂಗ್ರೆಸ್ ಶಾಸಕ ಯು.ಟಿ.ಖಾದರ್ ಇದೀಗ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಬೇಕು ಎಂಬ ಭಾವನೆಯಿಂದ ಸೋಂಕಿತನ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದೆ. ಕರೋನಾ ಸೋಂಕಿನಿಂದ ಸತ್ತವರ ಮೃತದೇಹದಿಂದ ವೈರಸ್ ಹರಡೋದಿಲ್ಲ. ಮೃತದೇಹದಿಂದ ವೈರಸ್ ಹರಡುತ್ತದೆ ಎಂದು ವೈದ್ಯಕೀಯ ಅಧ್ಯಯನ ಹೇಳಿಲ್ಲ. ಹಾಗಾಗಿ ಪಿಪಿಇ ಕಿಟ್ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಕರೋನಾದಿಂದ ಮೃತಪಟ್ಟವರ ಶವದಿಂದ ಸೋಂಕು ಹರಡಲ್ಲ ಎಂದು ಅನಕ್ಷರಸ್ಥರಂತೆ ಹೇಳಿಕೆ ನೀಡಿರುವ ಖಾದರ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ನಗೆಪಾಟೀಲಿಗೀಡಾಗಿದ್ದಾರೆ. ಈ ಹಿಂದೆ ಕರೋನಾ ಸೋಂಕಿತರ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡ ಕಾರಣಕ್ಕೆ ಕರೋನಾ ಸೋಂಕಿಗೆ ತುತ್ತಾಗಿರುವವರ ಅನೇಕ ಉದಾಹರಣೆಗಳು ಕರ್ನಾಟಕದಲ್ಲೇ ಇದೆ.

ಕರೋನಾ ಸೋಂಕಿನಿಂದ ಮೃತರಾದವರ ದೇಹವನ್ನು ಇತರರಿಗೆ ಸೋಂಕು ಹರಡದಂತೆ ಪ್ಲಾಸ್ಟಿಕ್ ಬ್ಯಾಗ್‌ಗಳಲ್ಲಿ ಮುಚ್ಚಿ ಅಂತ್ಯಸಂಸ್ಕಾರ ಮಾಡಲಾಗುತ್ತೆ. ಕರೋನಾ ರೋಗಿ ಮೃತರಾದರೂ ಅವರ ದೇಹದೊಳಗಿರುವ ವೈರಸ್ ಸಾಯಲ್ಲ ಎಂದು ಈಗಾಗಲೇ ಅಧ್ಯಯನಗಳಲ್ಲಿ ಬಯಲಾಗಿದೆ. ಆದರೂ ಶಾಸಕನ ಸ್ಥಾನದಲ್ಲಿರುವ ವ್ಯಕ್ತಿ ಈ ರೀತಿ ಅನಕ್ಷರಸ್ಥರಂತೆ ಹೇಳಿಕೆ ನೀಡೋದು ಎಷ್ಟು ಸರಿ ಎಂದು ಜನಸಾಮಾನ್ಯರು ಪ್ರಶ್ನಿಸುತ್ತಿದ್ದಾರೆ.

ಕರೋನಾ ರೋಗಿಯ ಅಂತ್ಯಸಂಸ್ಕಾರದಲ್ಲಿ ಮಣ್ಣು ಅಗೆದು ಪೊಲಿಟಿಕಲ್ ಮೈಲೇಜ್ ತೆಗೆದುಕೊಳ್ಳೋ ಬದಲು, ತಮ್ಮ ಕ್ಷೇತ್ರದ ಚರಂಡಿಗಳಲ್ಲಿ ತುಂಬಿರುವ ಹೂಳೆತ್ತಿದರೆ ಮಳೆಗಾಲದಲ್ಲಿ ನೀರು ನಿಂತು ಉಂಟಾಗುವ ಪ್ರವಾಹದಂತಹ ಪರಿಸ್ಥಿತಿಯಿಂದ ಪಾರಾಗಬಹುದು ಎಂದು ಅನೇಕರು ಕಮೆಂಟ್ ಮಾಡಿದ್ದಾರೆ.

error: Content is protected !!