fbpx

ಬುದ್ಧ ಪೂರ್ಣಿಮೆಯ ದಿನ ಕೊರೊನಾ ವಾರಿಯರ್ಸ್‌ಗೆ ಪ್ರಧಾನಿ ಮೋದಿಯಿಂದ ಮಹತ್ತರ ಸಂದೇಶ: ಅಷ್ಟಕ್ಕೂ ಅವರು ಹೇಳಿದ್ದೇನು ಗೊತ್ತಾ.?

ಬುದ್ಧ ಪೂರ್ಣಿಮಾ ಸಂದರ್ಭದಲ್ಲಿ ಪ್ರಧಾನಿ ಮೋಧಿ ತಮ್ಮ ಭಾಷಣದಲ್ಲಿ ಕೋರೊನಾ ಯೋಧರಾದ ವೈದ್ಯಕೀಯ ಸಿಬ್ಬಂದಿ, ವೈದ್ಯರು ಮತ್ತು ಪೊಲೀಸರು ಮತ್ತು ಇತರರನ್ನು ಉದ್ದೇಶಿಸಿ ಮಾತನಾಡಿ ಗೌರವ ಸಮರ್ಪಿಸಿದ್ದಾರೆ. ವಾಸ್ತವವಾಗಿ ವಿಎಇಯೋ ಕಾನ್ಫರೆನ್ಸ್ ಮೂಲಕ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಈ ಕಾರ್ಯಕ್ರಮದಲ್ಲಿ ಜಗತ್ತಿನ ಅನೇಕ ದೊಡ್ಡ ದೊಡ್ಡ ನಾಯಕರು ಭಾಗವಹಿಸಿದ್ದರು.

ಈ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋಧಿಯವರು ತಮ್ಮ ಭಾಷಣದಲ್ಲಿ, ಪ್ರತೀ ಬಾರಿಯ ಸಮಸ್ಯೆಗಳಿಗಿಂತ ಈ ಬಾರಿಯ ಸಮಸ್ಯೆಯ ಪರಿಸ್ಥಿತಿಗಳು ವಿಭಿನ್ನವಾಗಿವೆ, ಇದೀಗ ಜಗತ್ತು ಕಷ್ಟದ ಸಮಯಗಳನ್ನು ಎದುರಿಸುತ್ತಿದೆ, ಈ ನಡುವೆ ನಾನು ನಿಮ್ಮ ಜೊತೆ ಇರುವದು, ನಿಮ್ಮ ಜೊತೆ ಬರುವುದು ಒಳ್ಳೆಯದು, ಆದರೆ ಪ್ರಸ್ತುತ ಪರಿಸ್ಥಿತಿ ಅದನ್ನು ಅನುಮತಿಸುವುದಿಲ್ಲ, ಹೀಗಾಗಿ ಅಂತರ ಕಾಯ್ದುಕೊಳ್ಳಲೇಬೆಕಾಗಿದೆ.

ಭಾರತವು ಸ್ವಾರ್ಥವಿಲ್ಲದೆ ಜಗತ್ತಿನೊಂದಿಗೆ ನಿಂತಿದೆ, ನಾವು ನಮ್ಮ ಕುಟುಂಬವನ್ನು ಮತ್ತು ನಮ್ಮ ಸುತ್ತಮುತ್ತಲಿನ ಪ್ರದೇಶವನ್ನು ರಕ್ಷಿಸಬೇಕು. ಈ ಬಿಕ್ಕಟ್ಟಿನ ಸಮಯದಲ್ಲಿ ಎಲ್ಲರಿಗೂ ಸಹಾಯ ಮಾಡುವುದೇ ಪ್ರತಿಯೊಬ್ಬರ ಧರ್ಮವಾಗಿದೆ. ಈ ಬಿಕ್ಕಟ್ಟಿನ ಸಮಯದಲ್ಲಿ ತೊಂದರೆಯಲ್ಲಿರುವವರಿಗೆ ನಾವು ಸಹಾಯ ಮಾಡಬೇಕಾಗಿದೆ. ನಮ್ಮನ್ನು ನಮ್ಮ ಕುಟುಂಬವನ್ನು ರಕ್ಷಿಸುವುದರ ಜೊತೆಗೆ ಇತರರನ್ನು ನಾವು ರಕ್ಷಿಸಿಕೊಳ್ಳಬೇಕು ಎಂದರು.

ಭಾರತವು ಕೇವಲ ಭಾರತವಷ್ಟೇ ಅಲ್ಲದೆ ವಿಶ್ವದ ಹಿತದೃಷ್ಟಿಯಿಂದಲೂ ಕಾರ್ಯನಿರ್ವಹಿಸುತ್ತಿದೆ ಮತ್ತು ಅದನ್ನು ನಾವು ಮುಂದುವರಿಸಲಿದೆ. ಮಾನವೀಯತೆಗೆ ಸೇವೆ ಸಲ್ಲಿಸುವವರೆ ನಿಜವಾದ ಬುದ್ಧನ ಅನುಯಾಯಿಗಳು. ನಮ್ಮ ಕೆಲಸ ಸೇವಾಭಾವನೆಯಾಗಿರಬೇಕು. ಜಗತ್ತು ಕಷ್ಟದ ಸಮಯವನ್ನು ಎದುರಿಸುತ್ತಿದೆ ಭಗವಾನ್ ಬುದ್ಧನು ಆಶಿರ್ವಾದ ಮಾಡುವ ಮೂಲಕ ಜಗತ್ತಿಗೆ ದೀಪವಾಗಿ ಮಾರ್ಪಡಿಸಲಿ ಎಂದು ಪ್ರಾರ್ಥಿಸೋಣ.

ಬುದ್ಧ ತಮ್ಮ ಆಡಂಭರ ಜೀವನವನ್ನು ತ್ಯಜಿಸಿ ಜಗತ್ತನ್ನು ಬೆಳಗಿಸಿದ್ದರು ಎಂದು ಪ್ರಧಾನಿ ಮೋದಿಯವರು ತಮ್ಮ ಭಾಷಣದಲ್ಲಿ ಹೇಳುವ ಮೂಲಕ, ನಾವು ಸೇವಾ ಮನೋಭಾವದಿಂದ ಕೆಲಸ ಮಾಡೋಣ, ನಮ್ಮ ರಕ್ಷಣೆಯ ಜೊತೆಗೆ ಇತರರನ್ನು ರಕ್ಷಣೆ ಮಾಡೋಣ ಎಂದು ಹೇಳಿ, ಬುದ್ಧ ಪೂರ್ಣಿಮೆಯ ಶುಭಾಶಯ ಕೋರಿದ್ದಾರೆ.

Trending Short Videos

error: Content is protected !!