fbpx

Please assign a menu to the primary menu location under menu

“ಕೆಲವರು ಭ’ಯೋತ್ಪಾದನೆ ವೈರಸ್‌ ಹರಡುವುದರಲ್ಲಿ ತಲ್ಲೀನ”, ಪ್ರಧಾನಿ ಟಾಂಗ್ ನೀಡಿದ್ದು ಯಾರಿಗೆ ಗೊತ್ತೇ?

ಅಲಿಪ್ತ ಚಳವಳಿ ಸದಸ್ಯ ರಾಷ್ಟ್ರಗಳ ನಾಯಕರ ಜೊತೆ ನಡೆದ ಆನ್‌ಲೈನ್‌ ವಿಡಿಯೊ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿಯವರು ಭ’ಯೋತ್ಪಾದನೆಯ ವಿರುದ್ಧ ಕಿಡಿಕಾರಿದ್ದಾರೆ. ಕಾಶ್ಮೀರದಲ್ಲಿ ಕಳೆದ ಒಂದು ವಾರದ ಅವಧಿಯಲ್ಲಿ ಪಾ’ಕಿಸ್ತಾನ ಬೆಂಬಲಿತ ಉ’ಗ್ರರು ಮೂರು ಕಡೆಗಳಲ್ಲಿ ಭಾರತೀಯ ಯೋಧರ ಮೇಲೆ ಧಾ’ಳಿ ನಡೆಸಿದ್ದು, 10ಭಾರತೀಯ ಯೋಧರು ಹು’ತಾತ್ಮರಾಗಿದ್ದಾರೆ.

ಈ ಬಗ್ಗೆ ಮಾತನಾಡಿದ ಪ್ರಧಾನಿಯವರು, ‘ಇಡೀ ವಿಶ್ವ ಕರೋನಾ ಸೋಂಕಿನ ವಿರುದ್ಧದ ಹೋರಾಟದಲ್ಲಿ ಒಗ್ಗೂಡಿರುವ ಸಂದರ್ಭದಲ್ಲಿ ಕೆಲವರು ಭ’ಯೋತ್ಪಾದನೆ, ಸುಳ್ಳು ಸುದ್ದಿ ಹಾಗೂ ತಿರುಚಿದ ವಿಡಿಯೊಗಳಂತಹ ವಿನಾಶಕಾರಿ ವೈರಸ್‌ಗಳನ್ನು ಹರಡುವ ಮೂಲಕ ಸಮುದಾಯ ಹಾಗೂ ರಾಷ್ಟ್ರರಾಷ್ಟ್ರಗಳ ಮಧ್ಯೆ ಒಡಕು ಮೂಡಿಸುವುದರಲ್ಲಿ ತಲ್ಲೀನರಾಗಿದ್ದಾರೆ’ ಎಂದು ಪಾ’ಕಿಸ್ತಾನದ ಹೆಸರನ್ನು ನೇರವಾಗಿ ಉಲ್ಲೇಖಿಸದೆ ಟೀಕಿಸಿದ್ದಾರೆ.

ಪ್ರಜಾಪ್ರಭುತ್ವ, ಶಿಸ್ತು ಹಾಗೂ ಪರಿಣಾಮಕಾರಿಯಾದ ನಿರ್ಧಾರ ಒಗ್ಗೂಡಿದರೆ ಹೇಗೆ ನೈಜವಾದ ಜನರ ಚಳುವಳಿಯಾಗುತ್ತದೆ ಎಂಬುದಕ್ಕೆ ಕೋವಿಡ್‌ –19ರ ವಿರುದ್ಧ ಭಾರತದ ಹೋರಾಟವೇ ಸಾಕ್ಷಿ ಎಂದರು.
ಹಲವು ದಶಕಗಳ ನಂತರ ಇಂಥ ಗಂಭೀರ ಸ್ಥಿತಿ ಎದುರಾಗಿದೆ. ಇದನ್ನು ನಿಭಾಯಿಸಲು ಅಲಿಪ್ತ ಚಳವಳಿ ರಾಷ್ಟ್ರಗಳು ಕೈಜೋಡಿಸಬಹುದು ಎಂದು ಕೇಳಿಕೊಂಡರು.

ಕರೋನಾ ಸೋಂಕು ಸಂಪೂರ್ಣವಾಗಿ ನಾಶವಾದ ನಂತರ ನಿಷ್ಪಕ್ಷಪಾತವಾದ ಸಮಾನತೆ ಹಾಗೂ ಮಾನವೀಯತೆಯ ಹೊಸ ಮಾದರಿಯ ಜಾಗತೀಕರಣ ಬೇಕಾಗಿದೆ. 59 ಅಲಿಪ್ತ ಚಳವಳಿ ಸದಸ್ಯ ರಾಷ್ಟ್ರಗಳು ಸೇರಿದಂತೆ 120 ರಾಷ್ಟ್ರಗಳಿಗೆ ಭಾರತದಿಂದ ಅಗತ್ಯ ಔಷಧಿಯನ್ನು ಸರಬರಾಜನ್ನು ಮಾಡಲಾಗಿದೆ ಎಂದರು.

ಆರ್ಥಿಕತೆಯ ಅಭಿವೃದ್ಧಿಯಷ್ಟೇ ಅಲ್ಲದೆ ಜನರ ಏಳಿಗೆಯ ಕಡೆಗೂ ಗಮನಹರಿಸಬೇಕಾಗಿದೆ ಎಂದ ಅವರು, ಪ್ರಸ್ತುತ ಸಮಯದಲ್ಲಿ ಎಲ್ಲರನ್ನೂ ಪ್ರತಿನಿಧಿಸುವ ಅಂತರರಾಷ್ಟ್ರೀಯ ಸಂಸ್ಥೆಯೊಂದರ ಅವಶ್ಯಕತೆ ಇದೆ ಎಂದು ಹೇಳಿದರು.

error: Content is protected !!