fbpx

Please assign a menu to the primary menu location under menu

ಕೇಂದ್ರ ಸರ್ಕಾರದ ಈ ತಪ್ಪು ನಿರ್ಧಾರದ ವಿರುದ್ಧ ಸಿಡಿದೆದ್ದ ಸುಬ್ರಮಣಿಯನ್ ಸ್ವಾಮಿ, ಹೇಳಿದ್ದೇನು ನೋಡಿ

ಕಳೆದ 40ಕ್ಕೂ ಹೆಚ್ಚು ದಿನಗಳಿಂದ ದೇಶ ಲಾಕ್-ಡೌನ್ ನಲ್ಲಿದೆ. ಒಂದು ಕಡೆ ಉದ್ಯೋಗ ಇಲ್ಲದೆ, ಇನ್ನೊಂದು ಕಡೆ ತಿನ್ನಲು ಆಹಾರವಿಲ್ಲದೆ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದೆಲ್ಲದರ ನಡುವೆ ತಮ್ಮತಮ್ಮ ಊರಿಗೆ ತೆರಳಲು ಹಾತೊರಿಯುತ್ತಿರುವ ವಲಸೆ ಕಾರ್ಮಿಕರಿಗೆ ಕೇಂದ್ರಸರ್ಕಾರ ಶಾಕ್ ನೀಡಿದೆ.

ಇದೀಗ ಸ್ವಪಕ್ಷದ ವಿರುದ್ಧವೇ ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಕಿಡಿಕಾರಿದ್ದಾರೆ. “ಸತತ ಲಾಕ್‌ಡೌನ್‌ನಿಂದಾಗಿ ಹಸಿವಿನಿಂದ ಸಾಯುತ್ತಿರುವ ವಲಸೆ ಕಾರ್ಮಿಕರಿಂದ ಹಣ ಕೇಳುವ ಕೇಂದ್ರ ಸರ್ಕಾರ ಎಂಥಾ ದುರವಸ್ತೆಯಲ್ಲಿದೆ? ಎಂದು ಸುಬ್ರಮಣಿಯನ್ ಸ್ವಾಮಿ ಸರ್ಕಾರವನ್ನೇ ಪ್ರಶ್ನಿಸಿದ್ದಾರೆ.

ಸತತ 40 ದಿನಗಳಿಂದ ದೇಶ ಸ್ಥಬ್ದವಾಗಿದೆ, ಲಾಕ್‌ಡೌನ್‌ನಿಂದಾಗಿ ವಲಸೆ ಕಾರ್ಮಿಕರು ತಮ್ಮ ರಾಜ್ಯಗಳಿಗೆ ತೆರಳಲು ಸಾಧ್ಯವಾಗದೆ, ಮತ್ತೊಂದೆಡೆ ಉದ್ಯೋಗವಿಲ್ಲದೆ ಹಾಗೂ ಊಟಕ್ಕೂ ಗತಿಯಿಲ್ಲದೆ ದೇಶದ ನಾನಾ ಮೂಲೆಯಲ್ಲಿ ಸಿಲುಕಿಕೊಂಡಿದ್ದಾರೆ. ಕೊನೆಗೂ ವಲಸೆ ಕಾರ್ಮಿಕರನ್ನು ಅವರವರ ರಾಜ್ಯಗಳಿಗೆ ತಲುಪಿಸಲು ಕೇಂದ್ರ ಸರ್ಕಾರ ವಿಶೇಷ ರೈಲುಗಳ ವ್ಯವಸ್ಥೆ ಮಾಡಿದೆ. ಆದರೆ, ಪ್ರಯಾಣ ವೆಚ್ಚವನ್ನು ಕಾರ್ಮಿಕರೇ ಭರಿಸಬೇಕು ಎಂದು ಆದೇಶ ಹೊರಡಿಸಿದೆ.

ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ಸುಬ್ರಹ್ಮಣ್ಯ ಸ್ವಾಮಿ ಕಿಡಿಕಾರಿದ್ದು, “ಉದ್ಯೋಗವಿಲ್ಲದೆ, ತಿನ್ನಲು ಆಹಾರವೂ ಇಲ್ಲದೆ ಹಸಿವಿನಿಂದ ಸಾಯುತ್ತಿರುವ ವಲಸೆ ಕಾರ್ಮಿಕರಿಂದ ಹಣ ಪಡೆಯಬೇಡಿ. ಇಂತಹ ಕಠಿಣ ಪರಿಸ್ಥಿತಿಯಲ್ಲಿಯೂ ಬಡ ವಲಸೆ ಕಾರ್ಮಿಕರಿಂದಲೂ ಹಣ ಕೇಳುವ ಕೇಂದ್ರ ಸರ್ಕಾರ ಎಂಥಾ ದುರವಸ್ತೆಯಲ್ಲಿದೆ?

ವಿದೇಶದಲ್ಲಿ ಸಿಲುಕಿದ್ದವರನ್ನು ಭಾರತಕ್ಕೆ ಕರೆತರಲು ಉಚಿತ ವ್ಯವಸ್ಥೆಗಳನ್ನು ಮಾಡಲಾಗಿದೆ. ಆದರೆ, ಬಡಪಾಯಿ ವಲಸೆ ಕಾರ್ಮಿಕರಿಂದ ಹಣ ಕೇಳಲಾಗುತ್ತಿರುವುದು ಎಷ್ಟು ಸರಿ? ಸಂಕಷ್ಟದಲ್ಲಿರುವ ವಲಸೆ ಕಾರ್ಮಿಕರನ್ನು ಮನೆಗೆ ಸುರಕ್ಷಿತವಾಗಿ ತಲುಪಿಸಬೇಕಿರುವುದು ಸರ್ಕಾರದ ಕರ್ತವ್ಯ.

ಒಂದು ವೇಳೆ ರೈಲ್ವೆ ಇಲಾಖೆಯಿಂದ ಟಿಕೆಟ್ ಹಣ ಬರಿಸಲು ಸಾಧ್ಯವಿಲ್ಲವಾದರೆ ಬಜೆಟ್ PM CARES ಫಂಡ್ ನಿಂದ ಸಂಗ್ರಹವಾಗಿರುವ ಹಣವನ್ನು ಇದಕ್ಕೆ ವಿನಿಯೋಗಿಸಿ. ಕೇಂದ್ರ ಸರ್ಕಾರ 85% ಮತ್ತು ರಾಜ್ಯ ಸರ್ಕಾರ 15% ಹಣ ಪಾವತಿಸಿ ಎಂದು ಸುಬ್ರಮಣಿಯನ್ ಸ್ವಾಮಿ ಸಲಹೆ ನೀಡಿದ್ದಾರೆ. ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ವಿರೋಧ ಪಕ್ಷಗಳೂ ಕಿಡಿಕಾರಿವೆ.

error: Content is protected !!