ವೀಡಿಯೋ ಸುದ್ದಿಯ ಕೊನೆಯಲ್ಲಿದೆ
ಪಾಲ್ಘರ್ ಸಾಧುಗಳ ಹತ್ಯಾಕಾಂಡದಲ್ಲಿ ಕ್ರಿ’ಶ್ಚಿಯನ್ ಮಿಷನರಿ ಹಾಗೂ ಕಮ್ಯುನಿಸ್ಟರ ಕೈವಾಡ ಇರೋ ಬಲವಾದ ಶಂಕೆ ಹಿನ್ನೆಲೆಯಲ್ಲಿ ದೇಶದಾದ್ಯಂತ ಆಕ್ರೋಶಗಳು ವ್ಯಕ್ತವಾಗುತ್ತಿದೆ. ಪೋಲೀಸರ ಸಮ್ಮುಖದಲ್ಲಿಯೇ ನೂರಕ್ಕೂ ಹೆಚ್ಚು ಜನರ ಗುಂಪು ಇಬ್ಬರು ಅಮಾಯಕ ಸಾಧುಗಳು ಸೇರಿ ಮೂವರನ್ನು ದೊಣ್ಣೆ ಕಲ್ಲುಗಳಿಂದ ಹೊಡೆದು ಬರ್ಬರವಾಗಿ ಹತ್ಯೆಗೈದಿತ್ತು.
ತಮ್ಮ ಆಡಳಿತದ ರಾಜ್ಯಗಳಲ್ಲಿ ಸಾಧುಗಳ ಮೇಲೆ ಧಾಳಿಗಳು ನಡೆದು ಬರ್ಬರವಾಗಿ ಹತ್ಯೆಯಾದ್ರೂ ತುಟಿಬಿಚ್ಚದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ರಿಪಬ್ಲಿಕ್ ಟಿವಿಯ ಆರ್ನಬ್ ಗೋಸ್ವಾಮಿಯವರು ನೇರ ಪ್ರಸಾರ ಕಾರ್ಯಕ್ರಮದಲ್ಲಿಯೇ ಹಿಗ್ಗಾಮುಗ್ಗಾ ಜಾಡಿಸಿದ್ದರು. ಇದಕ್ಕೆ ದೇಶದಾದ್ಯಂತ ಕಾಂಗ್ರೆಸ್ ನಾಯಕರು, ಕಾರ್ಯಕರ್ತರಿಂದ ವಿರೋಧ ವ್ಯಕ್ತವಾಗಿತ್ತಲ್ಲದೆ ಹಲವು ಕಡೆಗಳಲ್ಲಿ ಕೇಸು ದಾಖಲಿಸಲಾಗಿತ್ತು.
ಇದೀಗ ಶತ್ರುರಾಷ್ಟ್ರ ಪಾಕಿಸ್ತಾನದಲ್ಲಿಯೂ ಸೋನಿಯಾ ಗಾಂಧಿಗೆ ಬೆಂಬಲ ವ್ಯಕ್ತವಾಗುತ್ತಿದೆ. ಅಲ್ಲಿನ ಮಾಧ್ಯಮವೊಂದು ಸೋನಿಯಾ ಗಾಂಧಿ ವಿರುದ್ಧ ಸುದ್ದಿ ಪ್ರಸಾರ ಮಾಡಿದ ಆರ್ನಬ್ ಗೋಸ್ವಾಮಿ ಅಷ್ಟೇ ಅಲ್ಲದೆ ಭಾರತದ ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇಲ್ಲಿ ಸೋನಿಯಾ ಗಾಂಧಿಯನ್ನು ತರಾಟೆಗೆ ತೆಗೆದುಕೊಂಡರೆ ಪಾಕಿಸ್ತಾನದಲ್ಲೇಕೆ ಆಕ್ರೋಶ ವ್ಯಕ್ತವಾಗುತ್ತಿದೆ? ಸೋನಿಯಾ ಗಾಂಧಿಗೂ ಪಾಕಿಸ್ತಾನಕ್ಕೂ ಇರೋ ಅಂತಹ ಬಾಂಧವ್ಯವೇನು? ಎಂದು ಅನೇಕರು ಪ್ರಶ್ನೆ ಮಾಡುತ್ತಿದ್ದಾರೆ. ಪಾಕಿಸ್ತಾನ ಮಾಧ್ಯಮದ ವೈರಲ್ ವೀಡಿಯೋ ಇಲ್ಲಿದೆ ನೋಡಿ,
Watch Video
