fbpx

ನನ್ನ ಕ್ಷೇತ್ರದಲ್ಲಿ ಕೊರೋನಾ ವಾರಿಯರ್ಸ್ ಮೇಲೆ ಹಲ್ಲೆ ನಡೆಸಿದ್ರೆ ಅಂಥವರ ಕೈಕಾಲು ಮುರಿದು ಹಾಕಿ

ಕೊರೊನಾ ವಾರಿಯರ್ಸ್ ಮೇಲೆ ದೇಶದಾದ್ಯಂತ ಆಗಾಗ ಹಲ್ಲೆ ಪ್ರಕರಣಗಳು ನಡೆಯುತ್ತಲಿದೆ. ರಾಜ್ಯದಲ್ಲಿಯೂ ಕಳೆದ ಒಂದು ವಾರದ ಅವಧಿಯಲ್ಲಿ ಮೂರು ನಾಲ್ಕು ಕಡೆಗಳಲ್ಲಿ ಹಲ್ಲೆ ಪ್ರಕರಣ ವರದಿಯಾಗಿದೆ.

ಈ ಕಾರಣಕ್ಕೆ ಇದೀಗ ಮುದ್ದೇಬಿಹಾಳ ಶಾಸಕ ಎ.ಎಸ್ ಪಾಟೀಲ್ ನಡಹಳ್ಳಿ ಅವರು ಪೊಲೀಸ್ ಅಧಿಕಾರಿಗಳಿಗೆ ಖಡಕ್ ಆಗಿ ನಿರ್ದೇಶನ ನೀಡಿದ್ದಾರೆ. ಯಾರಾದರೂ ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆ ನಡೆಸಿದ್ರೆ ಅಂಥವರ ವಿರುದ್ಧ ಕ್ರಮ ಕಠಿಣ ಕೈಗೊಳ್ಳಿ. ನನ್ನ ತಾಲೂಕು ವ್ಯಾಪ್ತಿಯಲ್ಲಿ ಎಲ್ಲಾದರೂ ಆಶಾ ಕಾರ್ಯಕರ್ತೆ, ವೈದ್ಯರ ಮೇಲೆ ಹಲ್ಲೆ ನಡೆಸಿದ್ರೆ ಮುಲಾಜಿಲ್ಲದೆ ಅಂಥವರ ಕೈ-ಕಾಲು ಮುರಿಯಿರಿ, ಅಲ್ಲದೆ ಒದ್ದು ಒಳಗೆ ಹಾಕಿ.

ಕೊರೊನಾ ವಾರಿಯರ್ಸ್ ಮೇಲೆ ದಾಳಿ ಮಾಡಿದವ ಪುಡಾರಿಗಳಿಗೆ ಕೋರ್ಟ್ ಕೂಡ ಜಾಮೀನು ಕೊಡಬಾರದು ಎಂದು ಹೇಳಿದ್ದಾರೆ. ಇದೀಗ ಶಾಸಕ ನಡಹಳ್ಳಿ ಆಡಿದ ಖಡಕ್ ಮಾತುಗಳು ಟಿಕ್ ಟಾಕ್, ವಾಟ್ಸಾಪ್ ಗಳಲ್ಲಿ ವೈರಲ್ ಆಗಿದೆ.

error: Content is protected !!