fbpx

ಕೇಸರಿ ಚಾಲೆಂಜ್ ಬಗ್ಗೆ ಕೊಂಕು ಮಾತನಾಡಿದ ಕಾಂಗ್ರೆಸ್ಸಿಗನ ಚಳಿ ಬಿಡಿಸಿದ ಹಿಂದೂ ಮಹಿಳೆ, ವೈರಲ್ ವೀಡಿಯೋ ನೋಡಿ

ತಬ್ಲಿಘಿ ಜಮಾತ್ ವಿಚಾರದಲ್ಲಿ ಮು’ಸ್ಲಿಮರ ವಿರುದ್ಧ ಯಾವುದೇ ರೀತಿಯ ಹೇಳಿಕೆಗಳನ್ನು ನೀಡಬಾರದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಹೇಳಿಕೆಗಳ ವಿರುದ್ದ ಈಗ ಹಿಂದೂ ಸಂಘಟನೆಗಳು ತಿರುಗಿ ಬಿದ್ದಿದ್ದು, ಬಿಜೆಪಿ ಭದ್ರಕೋಟೆ ಕರಾವಳಿಯಲ್ಲಿ ಈಗ ಕೇಸರಿ ಚಾಲೆಂಜ್ ಆರಂಭಗೊಂಡಿದೆ.

ಬಿಜೆಪಿಯ ಭದ್ರಕೋಟೆ ಕರಾವಳಿಯಲ್ಲಿ ಸಿಎಂ ಯಡಿಯೂರಪ್ಪ ಮಾತಿಗೆ ಭಾರಿ ವಿರೋಧ ವ್ಯಕ್ತವಾಗಿದ್ದು, ಸಿಎಂ ಹೇಳಿಕೆಗೆ ಹಿಂದೂ ಪರ ಸಂಘಟನೆಗಳು ಕೆರಳಿವೆ. ಇದೀಗ ತಮ್ಮ ಸ್ಟೇಟಸ್, ಡಿಪಿ ಪಿಕ್ಚರ್‌ನಲ್ಲಿ ಕೇಸರಿ ಧ್ವಜ ಹಾಕುವಂತೆ ಕರೆ ನೀಡಲಾಗಿದ್ದು, ಈಗಾಗಲೇ ಲಕ್ಷಾಂತರ ಮಂದಿ ಚಾಲೆಂಜ್ ಸ್ವೀಕರಿಸಿದ್ದಾರೆ. ಕೇಸರಿ ಧ್ವಜವನ್ನು ತಮ್ಮ ಖಾತೆಗಳಿಗೆ ಅಪ್ಲೋಡ್ ಮಾಡಿಕೊಂಡಿದ್ದಾರೆ. ಇಷ್ಟೇ ಅಲ್ಲದೆ ಫೇಸ್‍ಬುಕ್, ವಾಟ್ಸಾಪ್‍ನಲ್ಲಿ ಕೇಸರಿ ಧ್ವಜ ಓಡಾಡುತ್ತಿದೆ.

ಈ ಮಧ್ಯೆ ಹಿಂದೂಗಳು ಕೇಸರಿ ಚಾಲೇಂಜ್ ಸ್ವೀಕರಿಸಿ ತಮ್ಮ ಒಗ್ಗಟ್ಟು ಪ್ರದರ್ಶಿಸುತ್ತಿರುವಂತೆ ಕಾಂಗ್ರೆಸ್ ಮತ್ತು ಎ’ಡಪಂಥೀಯರು ವಿರೋಧ ವ್ಯಕ್ತಪಡಿಸಲು ಶುರುಮಾಡಿದ್ದಾರೆ. ಕರಾವಳಿಯ ಖಾಸಗಿ ಸುದ್ದಿವಾಹಿನಿಯೊಂದರಲ್ಲಿ ಈ ಬಗ್ಗೆ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ಹಾಗೂ ಎ’ಡಪಂಥೀಯ ಮುಖಂಡರಿಗೆ ಹಿಂದೂ ಮಹಿಳೆಯೊಬ್ಬರು ತರಾಟೆಗೆ ತೆಗೆದುಕೊಂಡಿದ್ದಾರೆ. ನಾವು ಡಿಪಿಯಲ್ಲಿ ಕೇಸರಿ ಧ್ವಜ ಹಾಕಲು ಅಷ್ಟೇ ಹೇಳಿರೋದು, ಯಾರಿಗೋ ಕಲ್ಲು ತೂರಿ ಎಂದು ಹೇಳಿಲ್ಲ. ಹಿಂದೂಗಳ ಒಗ್ಗಟ್ಟನ್ನು ನೋಡಿ ನಿಮಗೆ ಸಹಿಸಲು ಆಗುತ್ತಿಲ್ಲ ಎಂದು ಹೇಳಿದ್ದಾರೆ. ಇನ್ನು ಏನೇನು ಹೇಳಿದ್ದಾರೆ ಈ ವೀಡಿಯೋ ನೋಡಿ,

error: Content is protected !!