fbpx

Please assign a menu to the primary menu location under menu

ಕ್ವಾರಂಟೈನ್ ಅವಧಿ ಮುಗಿಸಿದ 17 ವಿದೇಶಿ ತಬ್ಲಿಘಿಗಳನ್ನು ಜೈಲಿಗಟ್ಟಿದ ಯೋಗಿ ಸರ್ಕಾರ, ಕಾರಣವೇನು ಗೊತ್ತೇ?

ಪಾಸ್‌ಪೋರ್ಟ್‌, ವಿಸಾ ನಿಯಮ ಉಲ್ಲಂಘಿಸಿ ಭಾರತದೊಳಕ್ಕೆ ನುಸುಳಿ ದೆಹಲಿಯ ನಿಜಾಮುದ್ದೀನ್‌ನಲ್ಲಿ ನಡೆದಿದ್ದ ಸಭೆಯಲ್ಲಿ ಭಾಗವಹಿಸಿದ್ದ 17 ಮಂದಿ ತಬ್ಲಿಘಿಗಳನ್ನು ಈಗ ಜೈಲಿಗೆ ಕಳುಹಿಸಲಾಗಿದೆ. ಇವರ ಕ್ವಾರಂಟೈನ್‌ ಅವಧಿ ಮುಗಿದ ಹಿನ್ನೆಲೆಯಲ್ಲಿ, ಅವರನ್ನು ಬಂಧಿಯಾಗಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ 17 ಮಂದಿಯೂ ವಿದೇಶಿಗರು. ಇಂಡೋನೇಷ್ಯಾ ಮತ್ತು ಥಾಯ್ಲೆಂಡ್‌ನಿಂದ ಜಮಾತ್‌ನಲ್ಲಿ ಭಾಗವಹಿಸಲು ಬಂದಿದ್ದರು. ಆ ಸಮಯದಲ್ಲಿ ವೀಸಾ, ಪಾಸ್‌ಪೋರ್ಟ್‌ ನಿಯಮ ಉಲ್ಲಂಘಿಸಿದ್ದರು. ಮಾರ್ಚ್‌ 31ರಂದು ಇವರೆಲ್ಲರನ್ನೂ ಕ್ವಾರಂಟೈನ್‌ಗೆ ಒಳಪಡಿಸಲಾಗಿತ್ತು. ಏ.12 ರಂದು ಕ್ವಾರಂಟೈನ್ ಅವಧಿ ಮುಕ್ತಾಯಗೊಂಡಿದ್ದು, ಮ್ಯಾಜಿಸ್ಟ್ರೇಟ್ ಎದುರು ಹಾಜರುಪಡಿಸಿ ಈಗ ಜೈಲಿಗೆ ಕಳುಹಿಸಲಾಗಿದೆ.

ಕ್ವಾರಂಟೈನ್‌ ನಂತರ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ 17 ಮಂದಿಯಲ್ಲಿ ಸೋಂಕು ಪತ್ತೆಯಾಗದ ಕಾರಣ, ಈಗ ಜೈಲಿಗೆ ಕಳುಹಿಸಲಾಗಿದೆ.
ಈ ಎಲ್ಲರ ವಿರುದ್ಧ ಎಪಿಡೆಮಿಕ್ ಡಿಸೀಸಸ್ ಕಾಯ್ದೆ (1897) 03, ಪಾಸ್‌ಪೋರ್ಟ್‌ ಕಾಯ್ದೆ (1967) ಸೆಕ್ಷನ್ 12(3) ಐಪಿಸಿ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ

error: Content is protected !!