fbpx

ಎಲ್ಲೆಂದರಲ್ಲಿ ಓಡಾಡಿಕೊಂಡಿರುವ ತಬ್ಲಿಗಿಗಳು ಜನರಲ್ಲಿ ಸೋಂಕು ಹರುಡುತ್ತಿದ್ದಾರೆ ಎಂದ ಆಂದ್ರ ಡಿಸಿಎಂ

ವೈದ್ಯರ ಚಿಕಿತ್ಸೆಗೆ ಸಹಕರಿಸದೇ, ಎಲ್ಲೆಂದರಲ್ಲಿ ಓಡಾಡಿಕೊಂಡಿರುವ ತಬ್ಲಿಗಿಗಳು ಜನರಲ್ಲಿ ಸೋಂಕು ಹರುಡುತ್ತಿದ್ದಾರೆ ಎಂದು ಆಂಧ್ರ ಉಪ ಮುಖ್ಯಮಂತ್ರಿ ಕೆ. ನಾರಾಯಣಸ್ವಾಮಿ ಆರೋಪಿಸಿದ್ದಾರೆ. ದೆಹಲಿಯ ಜಮಾತ್‌ನಿಂದ ಹಿಂದಿರುಗಿದವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಅವರು, ತಬ್ಲಿಗಿಗಳ ಆಹಾರ ಪದ್ಧತಿ, ಶುಚಿತ್ವವಿಲ್ಲದ ಜೀವನ ಕ್ರಮಗಳನ್ನು ಪ್ರಶ್ನೆ ಮಾಡಿದ್ದಾರೆ.

ನನಗೆ ಮು’ಸ್ಲಿಂ ಅಲ್ಪಸಂಖ್ಯಾತರ ಮೇಲೆ ಯಾವುದೇ ದ್ವೇಷವಿಲ್ಲ. ಅವರು ಅವರ ದೇವರನ್ನು ಪೂಜಿಸಲಿ. ಅ’ಲ್ಲಾಹು ದಯಾಮಯಿ. ಆದರೆ, ತಬ್ಲಿಗಿಗಳು ಮಾಡುತ್ತಿರುವುದೆಲ್ಲವೂ ಅಸಹ್ಯದ ಕೆಲಸಗಳು. ಅವರು ಉತ್ತಮ ಆಹಾರ ಸೇವಿಸುವುದಿಲ್ಲ. ಶುಚಿತ್ವ ಪಾಲಿಸುವುದಿಲ್ಲ. ಅವರ ಅಭ್ಯಾಸಗಳಿಂದಾಗಿ ಕೊರೊನಾ ವೈರಸ್‌ ಈ ಹಂತಕ್ಕೆ ಹರಡಿದೆ ಎಂದು ಆಕ್ರೋಶಗೊಂಡರು.


Continue Reading

ಕೊರೊನಾ ವೈರಸ್‌ ಸೋಂಕಿತರ ಸಂಖ್ಯೆ ಸಂಖ್ಯೆ 25–26 ಇರಲಿಲ್ಲ. ಆದರೆ ದೆಹಲಿಯ ಮರ್ಕಜ್‌ನಿಂದ ಬಂದ ತಬ್ಲಿಗಿಗಳು ರಾಜ್ಯದಲ್ಲಿ ಸೋಂಕನ್ನು ಹರಡಿದರು ಎಂದು ಆರೋಪ ಮಾಡಿದ್ದಾರೆ. ಇತ್ತೀಚೆಗಷ್ಟೇ ಮುಖ್ಯಮಂತ್ರಿ ಜಗನ್‌ ಮೋಹನ್‌ ರೆಡ್ಡಿ ಅವರು ತಬ್ಲಿಗಿ ಜಮಾತ್‌ ಸಮಾವೇಶವನ್ನು ಸಮರ್ಥನೆ ಮಾಡಿದ್ದು, ಆ ಹೇಳಿಕೆಯ ಬೆನ್ನಿಗೆ ಉಪ ಮುಖ್ಯಮಂತ್ರಿ ನಾರಾಯಣಸ್ವಾಮಿ ತದ್ವಿರುದ್ಧ ಹೇಳಿಕೆ ನೀಡಿದ್ದು ಸರ್ಕಾರಕ್ಕೆ ಮುಜುಗರ ಉಂಟು ಮಾಡಿದ್ದಾರೆ.

Trending Short Videos


close

This will close in 26 seconds

error: Content is protected !!