fbpx

ದೀಪ ಹಚ್ಚಿದ್ರೆ, ಕೊರೋನಾ ವೈರಸ್ ದೀಪದ ಬಳಿ ಬಂದು ಶಾಖಕ್ಕೆ ಸತ್ತೋಗ್ತವೆ : ಬಿಜೆಪಿ ಶಾಸಕ ರಾಮದಾಸ್ (ವೀಡಿಯೋ)

ಕೊರೋನಾ ವೈರಸ್ ದಾಳಿಯಿಂದ ತತ್ತರಿಸಿರುವ ಭಾರತದಲ್ಲಿ ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ದೇಶದ ಜನರೆಲ್ಲರೂ ತಮ್ಮ ಒಗ್ಗಟ್ಟು ಪ್ರದರ್ಶಿಸುವ ಸಲುವಾಗಿ ಏ. 5ಂದು ರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ಮೊಂಬತ್ತಿ, ಹಣತೆ ಅಥವಾ ಮೊಬೈಲ್ ಟಾರ್ಚ್​ ಬೆಳಗಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆನೀಡಿದ್ದರು. ಈ ಹಿನ್ನೆಲೆಯಲ್ಲಿ ಮೈಸೂರಿನ ಜನರಿಗೆ ಶಾಸಕ ರಾಮದಾಸ್ ಅವರು ಮೊಂಬತ್ತಿ ಮತ್ತು ಮಾಸ್ಕ್​ಗಳನ್ನು ವಿತರಣೆ ಮಾಡಿದ್ದಾರೆ.

ಈ ವೇಳೆ ಮಾತನಾಡಿರುವ ಅವರು, ಪ್ರಧಾನಿ ಮೋದಿ ದೀಪ ಹಚ್ಚಲು ಹೇಳಿರುವುದರ ಹಿಂದೆ ಕಾರಣವಿದೆ. ದೀಪ ಹಚ್ಚಿದ್ರೆ ವೈರಸ್​ಗಳು ದೀಪದ ಬಳಿ ಬರುತ್ತವೆ. ಆಗ ಅವು ದೀಪದ ಶಾಖಕ್ಕೆ ಸಾಯುತ್ತವೆ ಎಂದು ದೀಪದ ವಿಶೇಷತೆ ಕುರಿತು ತಮ್ಮದೇ ರೀತಿಯಲ್ಲಿ ವ್ಯಾಖ್ಯಾನ ಮಾಡಿದ್ದಾರೆ. ಇದು ಈವಾಗ ಸಖತ್ ಟ್ರೋಲ್ ಗಳಿಗೆ ಕಾರಣವಾಗಿದೆ, ವೀಡಿಯೋ ನೋಡಿ

Trending Short Videos

error: Content is protected !!