fbpx

Please assign a menu to the primary menu location under menu

ಪ್ರಧಾನಿ ಟಿವಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆ ಅವರಿಗೆ ಆರತಿ ಎತ್ತಿ, ತಿಲಕ ಇಟ್ಟ ಮಹಿಳೆ. ವೈರಲ್ ಆಯ್ತು ವೀಡಿಯೋ

ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಬೆಳಗ್ಗೆ 9 ಗಂಟೆಗೆ ಲೈವ್‌ ಬಂದು, ವಿಡಿಯೋ ಮೂಲಕ ರಾಷ್ಟ್ರದ ಜನತೆಗೆ ಪ್ರಮುಖ ಸಂದೇಶವನ್ನು ರವಾನೆ ಮಾಡಿದರು. ಈ ಸಂದರ್ಭ ಮಾತನಾಡುತ್ತ, ಮಾರ್ಚ್‌ 22 ರಂದು, ಕೊರೊನಾ ಸೋಂಕಿನ ವಿರುದ್ಧ ಹೋರಾಡುತ್ತಿರುವ ವೈದ್ಯರು, ನರ್ಸ್‌ಗಳು, ಪೌರ ಕಾರ್ಮಿಕರು, ಪೊಲೀಸರು ಹೀಗೆ ಎಲ್ಲರಿಗೂ ಗೌರವ ಪೂರ್ಣವಾಗಿ ನಡೆದುಕೊಂಡ ರೀತಿಗೆ ಮನಸ್ಪೂರ್ತಿ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.

ಏಪ್ರಿಲ್‌ 5ರಂದು ಭಾನುವಾರ ರಾತ್ರಿ 9 ಗಂಟೆಗೆ ಸರಿಯಾಗಿ ಮನೆಯ ಎಲ್ಲ ವಿದ್ಯುತ್‌ ದೀಪಗಳನ್ನು 9 ನಿಮಿಷಗಳ ಕಾಲ ಆರಿಸಿ ಮತ್ತು ಆ ಸಮಯದಲ್ಲಿ ಮನೆಯ ಕಿಟಕಿ/ಬಾಲ್ಕನಿಗೆ ಬಂದು ಮೊಂಬತ್ತಿ, ದೀಪ ಅಥವಾ ಮೊಬೈಲ್‌ನ ಫ್ಲಾಶ್‌ ಲೈಟ್‌ ಬೆಳಗಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರದ ಜನತೆಗೆ ಕರೆ ನೀಡಿದ್ದಾರೆ. ಈ ಸುದ್ದಿ ಪ್ರಸಾರವಾಗುತ್ತಿದ್ದಂತೆ ಮಹಿಳೆಯೊಬ್ಬರು ಟಿವಿಯಲ್ಲಿ ಕಾಣಿಸಿಕೊಂಡ ಪ್ರಧಾನಿಯವರಿಗೆ ಆರತಿ ಎತ್ತಿ, ತಿಲಕ ಇಡುವ ಮೂಲಕ ಕೊರೋನಾ ವಿರುದ್ಧದ ಹೋರಾಟದಲ್ಲಿ ಜಯಶಾಲಿಯಾಗಿ ಎಂದು ಹಾರೈಸಿದ್ದಾರೆ. ವೈರಲ್ ವೀಡಿಯೋ ನೋಡಿ,

error: Content is protected !!