fbpx

ಕೋಳಿಗೆ ಭೇದಿ ಆಗಿದೆ ಸಾರ್, ಆಸ್ಪತ್ರೆಗೆ ಕರ್ಕೊಂಡ್ ಹೋಗ್ತಿದ್ದೇನೆ! ವ್ಯಕ್ತಿಯ ವಿಡಿಯೋ ಸಖತ್ ವೈರಲ್

ಕರೋನಾ ಎರಡನೇ ಅಲೆಯ ಕಾರಣಕ್ಕೆ ರಾಜ್ಯದಾದ್ಯಂತ ಲಾಕ್‌ಡೌನ್ ಜಾರಿಯಾಗಿದ್ದು, ಅಗತ್ಯ ವಸ್ತುಗಳ ಖರೀದಿಗೆ ಅಂತ ಬೆಳಗ್ಗೆ ಸಮಯ ನಿಗದಿಪಡಿಸಲಾಗಿದೆ. ಜನರು ಅನಗತ್ಯವಾಗಿ ಓಡಾಡುವುದನ್ನು ತಡೆಯಲು ಅಲ್ಲಲ್ಲಿ ಪೋಲೀಸರು ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಿ ಪಹರೆ ಕಾಯುತ್ತಿದ್ದಾರೆ.

ಅನಗತ್ಯ ಓಡಾಡುವ ಜನರಿಗೆ ತಿಳಿ ಹೇಳಿ ಅಥವಾ ದಂಡ ವಿಧಿಸುವ ಮೂಲಕ ಮತ್ತೆ ತಪ್ಪು ಎಸಗದಂತೆ ಬುದ್ಧಿ ಹೇಳಲಾಗುತ್ತಿದೆ. ಇದೀಗ ವಿಡಿಯೋವೊಂದು ವೈರಲ್ ಆಗಿದ್ದು, ವ್ಯಕ್ತಿಯೊಬ್ಬ ಅನಗತ್ಯವಾಗಿ ಓಡಾಡುವ ಸಂದರ್ಭದಲ್ಲಿ ಪೊಲೀಸರ ಕೈಗೆ ತಗಲಾಕಿಕೊಂಡಿರುವ ವಿಡಿಯೋ ಇದಾಗಿದೆ.


ಸುದ್ದಿಗಳನ್ನು ತಕ್ಷಣ ಪಡೆಯಲು ನಮ್ಮ 'Telgram Channel' ಸೇರಿ

ಗದಗದ ಟಾಂಗಾಕೂಟ ವೃತ್ತದಲ್ಲಿ ಪೋಲೀಸರು ಲಾಕ್‌ಡೌನ್ ನಿರ್ವಹಣೆ ‌ಮಾಡುತ್ತಿದ್ದ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಚೀಲ ಹಿಡಿದುಕೊಂಡು ಅನಗತ್ಯವಾಗಿ ಓಡಾಡೋದನ್ನು ಕಂಡಿದ್ದಾರೆ. ತಕ್ಷಣ ವ್ಯಕ್ತಿಯನ್ನು ನಿಲ್ಲಿಸಿದ ಪೋಲೀಸರು, ‘ಯಾಕ್ರೀ ಅನಗತ್ಯವಾಗಿ ಓಡಾಡ್ತಿದ್ದೀರ’ ಎಂದು ಕೇಳಿದ್ದಾರೆ.

ಆಗ ವ್ಯಕ್ತಿ ತಕ್ಷಣ ತನ್ನ ಕೈಲಿದ್ದ ಚೀಲದಿಂದ ನಾಟಿ ಕೋಳಿ ಹೊರತೆಗೆದು, ‘ಕೋಳಿಗೆ ನಿನ್ನೆಯಿಂದ ಭೇದಿಯಾಗ್ತಿದೆ, ಆಸ್ಪತ್ರೆಗೆ ಕರ್ಕೊಂಡ್ ಹೋಗ್ತಿದ್ದೀನಿ’ ಎಂದು ಸಬೂಬು ನೀಡಿದ್ದಾರೆ. ಮೊದಲೇ ಲಾಕ್‌ಡೌನ್ ಕರ್ತವ್ಯದ ಒತ್ತಡದಲ್ಲಿದ್ದ ಪೊಲೀಸರು ವ್ಯಕ್ತಿಯ ಕಾರಣ ಕೇಳಿ ಶಾಕ್ ಆಗಿದ್ದಾರೆ. ವ್ಯಕ್ತಿ ಸುಳ್ಳು ಹೇಳ್ತಿದ್ದಾನೆ ಎಂದು ಗೊತ್ತಿದ್ರು ತಮಗೆ ಸ್ವಲ್ಪ ಮನರಂಜನೆ ನೀಡಿದ ಆ ವ್ಯಕ್ತಿಯನ್ನು ಪೊಲಿಸರು ಪಾಪ ಅಂತಾ ಬಿಟ್ಟು ಕಳುಹಿಸಿದ್ದಾರೆ. ವೈರಲ್ ವಿಡಿಯೋ ಇಲ್ಲಿದೆ ನೋಡಿ,
Watch Video:

video

error: Content is protected !!