fbpx

ಮೋಜಿಗಾಗಿ ನಾಯಿಗೆ ಹೈಡ್ರೋಜನ್ ಬಲೂನ್ ಕಟ್ಟಿ ಹಾರಿಬಿಟ್ಟ ಭೂಪ, ಮುಂದೇನಾಯಿತು ನೋಡಿ! ಶಾಕಿಂಗ್ ವಿಡಿಯೋ

ಪ್ರಾಣಿಗಳನ್ನು ಹಿಂಸಿಸೋದು ಕಾನೂನಿನ ಪ್ರಕಾರ ಅಪರಾಧ ಎಂದು ಗೊತ್ತಿದ್ದರು ಕೆಲವರಿಗೆ ಪ್ರಾಣಿಗಳ ಮೇಲೆ ಹಿಂಸೆ ನೀಡಿ ಮೋಜು ಅನುಭವಿಸುವ ಹುಚ್ಚು ಕಮ್ಮಿಯಾಗಿಲ್ಲ. ಕೆಲ ದಿನಗಳ ಹಿಂದಷ್ಟೇ ಕರಾವಳಿಯಲ್ಲಿ ಬೀದಿ ನಾಯಿಯನ್ನು ಬೈಕ್‌ ಗೆ ಕಟ್ಟಿ ಎಳೆದುಕೊಂಡು ಹೋಗುತ್ತಿರುವ ವಿಡಿಯೋಗಳು ವೈರಲ್ ಆಗಿತ್ತು. ಈ ಸಂಬಂಧ ಆರೋಪಿಗಳ ಬಂಧನವೂ ಆಗಿತ್ತು.

ಇದೀಗ ಇದೇ ರೀತಿ ವೈರಲ್ ವಿಡಿಯೋಗಾಗಿ ನಾಯಿಗೆ ಹಿಂಸೆ ನೀಡಿದ ಪ್ರಕರಣಕ್ಕೆ ಸಂಬಂಧ ದೆಹಲಿ ಮೂಲದ ಪ್ರಖ್ಯಾತ ಯೂಟ್ಯೂಬರ್ ಹಾಗೂ ಆತನ ತಾಯಿಯ ಮೇಲೆ ಪ್ರಕರಣ ದಾಖಲಾಗಿದೆ. ಯೂಟ್ಯೂಬ್‌ನಲ್ಲಿ 40ಲಕ್ಷಕ್ಕೂ ಹೆಚ್ಚು ಹಿಂಬಾಲಕರನ್ನು ಹೊಂದಿರುವ ‘ಗೌರವ್’ ಎಂಬಾತ ತನ್ನ ಸಾಕು ನಾಯಿಗೆ ಹೈಡ್ರೋಜನ್ ಬಲೂನ್‌ಗಳನ್ನು ಕಟ್ಟಿ ಆಗಸಕ್ಕೆ ಹಾರಲು ಬಿಟ್ಟಿದ್ದಾನೆ.


ಸುದ್ದಿಗಳನ್ನು ತಕ್ಷಣ ಪಡೆಯಲು ನಮ್ಮ 'Telgram Channel' ಸೇರಿ

ಈತನ ಹುಚ್ಚು ಕೆಲಸಕ್ಕೆ ಆತನ ತಾಯಿಯೂ ಸಹಾಯ ಮಾಡಿದ್ದು, ನಾಯಿ ಮೇಲಕ್ಕೆ ಹೋಗುತ್ತಿದ್ದಂತೆ ಅದನ್ನು ಹಿಡಿಯುವುದು, ಮತ್ತಷ್ಟು ಬಲೂನ್‌ಗಳನ್ನು ಕಟ್ಟಿ ಹಾರಿಸುವ ಮೂಲಕ ವಿಕೃತತೆ ಮೆರೆದಿದ್ದಾರೆ.

ವಿಡಿಯೋ ವೈರಲ್ ಆಗುತ್ತಿದ್ದಂತೆ ಈತನ ಕೃತ್ಯ ಪ್ರಾಣಿ ಪ್ರೀಯರ ಕೆಂಗಣ್ಣಿಗೆ ಗುರಿಯಾಗಿದ್ದು, ಈತನ ವಿರುದ್ದ ದೆಹಲಿಯ ಮಾಲ್ವಿಯಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿ ಗೌರವ್‌ನನ್ನು ಪೊಲೀಸರು ಬಂಧಿಸಿದ್ದು, ಪ್ರಾಣಿಯ ಮೇಲೆ ಕ್ರೌರ್ಯ ಮೆರೆದ ಆತನ ವಿರುದ್ಧ ಹಾಗೂ ಆತನ ತಾಯಿಯ ಸೆಕ್ಷನ್ 188, 269 ಮತ್ತು 34 ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.

Watch Video:

video

error: Content is protected !!