fbpx

ಲೈವ್‌ನಲ್ಲೇ ಗನ್ ಹಿಡಿದು ವರದಿಗಾರನನ್ನೇ ದೋಚಿದ ಕಳ್ಳ! ವೈರಲ್ ವಿಡಿಯೋ ನೋಡಿ

ದರೋಡೆಕೋರನೊಬ್ಬ ಸುದ್ದಿ ವಾಹಿನಿಯೊಂದರ ಲೈವ್ ವರದಿ ನಡೆಯುತ್ತಿರುವಾಗಲೇ ವಾಹಿನಿಯ ಸಿಬ್ಬಂದಿಗೆ ಗನ್ ಹಿಡಿದು ದರೋಡೆ ಮಾಡಿರುವ ಘಟನೆ ಈಕ್ವೆಡಾರ್‌ನಲ್ಲಿ ನಡೆದಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಬೆಚ್ಚಿಬೀಳಿಸುವಂತಿದೆ.

ಗನ್‌ಧಾರಿ ದರೋಡೆಕೋರ ನ್ಯೂಸ್ ಚಾನಲ್‌ನ ವರದಿಗಾರ ಹಾಗೂ ಇತರ ಸಿಬ್ಬಂದಿಯ ಹಣೆಗೆ ಗನ್ ಹಿಡಿದು ಬೆದರಿಸಿ ಲೂಟಿ ಮಾಡಿದ್ದಾನೆ. ಈಕ್ವೆಡಾರ್‌ನ ಕ್ರೀಡಾ ವರದಿಗಾರ ಡಿಯೆಗೋ ಅರ್ಡಿನೋಲಾ ಎಂಬವರು ಡೈರೆಕ್ಟೀವಿ ಸ್ಪೋರ್ಟ್ಸ್‌ ವಾಹಿನಿಗೆ ನೇರ ಪ್ರಸಾರದ ಕಾರ್ಯಕ್ರಮದಲ್ಲಿ ವರದಿ ನೀಡುತ್ತಿದ್ದರು.

ಗಯಾಕಿಲ್‌ ನಗರದ ಎಸ್ಟೇಡಿಯೋ ಮಾನ್ಯುಮೆಂಟಲ್ ಕ್ರೀಡಾಂಗಣದಿಂದ ವರದಿ ಮಾಡುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಮುಖಕ್ಕೆ ಮಾಸ್ಕ್‌ ಧರಿಸಿಕೊಂಡು ಬಂದ ದರೋಡೆಕೋರ ವರದಿಗಾರನ ಮುಖಕ್ಕೆ ಗನ್‌ ಇಟ್ಟು ಬೆದರಿಸಿದ್ದಾನೆ.

ಕ್ಯಾಮರಾಮ್ಯಾನ್ ಆರ್ಡಿನೋಲಾರನ್ನು ಚಿತ್ರೀಕರಿಸುತ್ತಿದ್ದ ಕ್ಯಾಮೆರಾ ಚಾಲ್ತಿಯಲ್ಲಿದ್ದ ಕಾರಣ ಘಟನೆಯ ಅಷ್ಟೂ ದೃಶ್ಯವಾಳಿ ರೆಕಾರ್ಡ್ ಆಗಿದ್ದು, ವರದಿಗಾರ ಈ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದಾರೆ. ವೈರಲ್ ವಿಡಿಯೋ ಇಲ್ಲಿದೆ ನೋಡಿ,

Watch Video

error: Content is protected !!