fbpx

‘ಲಡಾಕ್ ಗಡಿಗೆ ಹೋಗಲ್ಲ’ ಎಂದು ಗೋಳಾಡುತ್ತಿರುವ ಚೀನೀ ಯೋಧರು? ವೈರಲ್ ವಿಡಿಯೋ ನೋಡಿ

ಭಾರತ-ಚೀನಾ ಗಡಿಯಲ್ಲಿ ಯುದ್ಧದ ಕಾರ್ಮೋಡ ಆವರಿಸಿರುವ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ತಿಂಗಳ ಹಿಂದೆ ಗಾಲ್ವಾನ್‌ನಲ್ಲಿ ಸಂಭವಿಸಿದ ಹೋರಾಟದಲ್ಲಿ ಭಾರತದ 20ಯೋಧರು ಹುತಾತ್ಮರಾದರೆ, ಚೀನಾದ 40ಕ್ಕೂ ಹೆಚ್ಚು ಯೋಧರನ್ನು ಭಾರತೀಯ ಸೇನೆ ಹೊಡೆದುರುಳಿಸಿತ್ತು.

ಇದೀಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು, ಲಡಾಕ್ ಗಡಿಗೆ ತೆರಳುತ್ತಿರುವ ಚೀನಾ ಯೋಧರ ವಿಡಿಯೋ ಇದಾಗಿದೆ. ಲಡಾಕ್ ಗಡಿಯಲ್ಲಿ ನಿಯೋಜನೆ ಮಾಡಿದ್ದಕ್ಕೆ ಚೀನಾದ ‘ಪಿಎಲ್‌ಎ’ ಯೋಧರು ಗೋಳಾಡುತ್ತಿರುವ ವಿಡಿಯೋ ಇದು ಎಂದು ಹೇಳಲಾಗುತ್ತಿದೆ.

ಪಾಕಿಸ್ತಾನದ ಮೂಲದ ನಟ ‘ಜಿಯಾದ್ ಹಮೀದ್’ ಎಂಬಾತ ಈ ವಿಡಿಯೋವನ್ನು ತನ್ನ ಫೇಸ್ಬುಕ್ ಖಾತೆಯಲ್ಲಿ ಶೇರ್ ಮಾಡಿದ್ದು ಸಖತ್ ವೈರಲ್ ಆಗಿದೆ. ಚೀನೀ ಯೋಧರೆ, ಪಾಕಿಸ್ತಾನಿಯರ ಬೆಂಬಲ ನಿಮಗಿದೆ ಧೈರ್ಯಗುಂದದಿರಿ ಎಂದು ಬರೆದಿದ್ದಾನೆ.

ತೈವಾನ್ ಮೂಲದ ಪತ್ರಿಕೆಯೊಂದು ಇದೇ ಸುದ್ದಿಯನ್ನು ಪ್ರಕಟಿಸಿದ್ದು, ಚೀನಾ ಸರ್ಕಾರ ಒತ್ತಾಯಪೂರ್ವಕವಾಗಿ ಸಣ್ಣ ವಯಸ್ಸಿನ ಯುವಕರಿಗೆ ಸೇನೆ ಬಟ್ಟೆ ತೊಡಿಸಿ ಗಡಿಗೆ ಕಳುಹಿಸುತ್ತಿದೆ ಎಂದು ಅದು ಆರೋಪವನ್ನೂ ಮಾಡಿದೆ. ವೈರಲ್ ವಿಡಿಯೋ ಇಲ್ಲಿದೆ ನೋಡಿ,

Watch Video

error: Content is protected !!