fbpx

Please assign a menu to the primary menu location under menu

ಗಡದ್ದಾಗಿ ತಿಂದ್ಮೇಲೆ ಊಟದಲ್ಲಿ ಕೂದಲು ಬಿದ್ದಿದೆ ಎಂದು ರಂಪಾಟವಾಡಿದ ಯುವಕರು, ಅಷ್ಟಕ್ಕೂ ಕೂದಲು ಬಂದಿದ್ದು ಎಲ್ಲಿಂದ ನೋಡಿ! ವೈರಲ್ ವಿಡಿಯೋ

ಹೋಟೇಲ್‌ಗೆ ಬಂದ ಯುವಕರಿಬ್ಬರು ಗಡದ್ದಾಗಿ ತಿಂದು ಬಿಲ್ ಕೊಡದೆ ವಂಚಿಸಿದ ಘಟನೆ ಬೆಳಕಿಗೆ ಬಂದಿದೆ. ಬ್ರಿಟನ್‌ನಲ್ಲಿ ಈ ಘಟನೆ ನಡೆದಿದ್ದು, ಇದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಯುವಕರಿಬ್ಬರು ಬ್ರಿಟನ್ನ ಬ್ಲ್ಯಾಕ್ಬರ್ನ್ ಎಂಬಲ್ಲಿರುವ ಬಾಬೆರ್ಕ್ಯೂ ಕಿಚನ್ ರೆಸ್ಟೋರಂಟ್ಗೆ ತೆರಳಿ ತಮಗೆ ಬೇಕಾದ ಆಹಾರಗಳನ್ನು ತರಿಸಿ ಗಡದ್ದಾಗಿ ತಿಂದಿದ್ದಾರೆ. ಇನ್ನೇನು ತಿಂದು ಪ್ಲೇಟ್ ಕಾಲಿಯಾಗುತ್ತಾ ಬಂದಾಗ ಆಹಾರದಲ್ಲಿ ಕೂದಲು ಬಿದ್ದಿದೆ ಎಂದು ರಂಪಾಟ ಶುರು ಮಾಡಿದ್ದಾರೆ.

ಯುವಕರು ತಿಂದ ಊಟದ ಬಿಲ್ 67ಬ್ರಿಟೀಷ್ ಪೌಂಡ್(6500ರೂ) ಆಗಿತ್ತು. ಸುಮಾರು ಆರು ಜನ ತಿನ್ನಬಹುದಾದ ಆಹಾರವನ್ನು ಇಬ್ಬರೇ ತಿಂದು ತೇಗಿದ್ದರು. ಇನ್ನೇನು ಪ್ಲೇಟ್ ಕಾಲಿಯಾಗಬೇಕು ಎನ್ನುವಷ್ಟರಲ್ಲಿ ತಾವು ತಿಂದ ಆಹಾರದ ಬಿಲ್ ಬಂದಿದೆ. ಇದನ್ನು ನೋಡಿದ ಯುವಕರು ಮಾಡಿದ ಕೆಲಸ ಮಾತ್ರ ವಾಕರಿಕೆ ಬರಿಸುವಂತದ್ದು.

ತಿಂದು ಉಳಿದಿದ್ದ ಆಹಾರಗಳ ಮೇಲೆ ತಮ್ಮ ಕೂದಲನ್ನು ಹರಡಿದ್ದಾರೆ. ಅದರಲ್ಲೂ ಒಬ್ಬ ಯುವಕ ತನ್ನ ಗುಪ್ತಾಂಗದ ಕೂದಲನ್ನೂ ಕಿತ್ತು ಪ್ಲೇಟ್‌ಗೆ ಹಾಕಿದ್ದಾನೆ. ನಂತರ ಹೋಟೇಲ್ ಮ್ಯಾನೇಜರ್‌ನ ಕರೆದು ಊಟದಲ್ಲಿ ಕೂದಲು ಬಿದ್ದಿದೆ ಎಂದು ರಂಪಾಟ ಶುರು ಮಾಡಿದ್ದಾರೆ.

ಮ್ಯಾನೇಜರ್ ಬಂದು ಪರೀಕ್ಷಿಸಿದಾಗ ಬಿರಿಯಾನಿ, ಕಬಾಬ್ ಹಾಗೂ ನಾನ್ನಲ್ಲಿ ಕೂದಲುಗಳ ರಾಶಿಯೇ ಕಂಡುಬಂದಿತ್ತು. ಇದರಿಂದ ಅನುಮಾನಗೊಂಡ ಮ್ಯಾನೇಜರ್ ಸಿಸಿ ಕ್ಯಾಮರಾ ದೃಶ್ಯಗಳನ್ನು ಪರಿಶೀಲಿಸಿದ್ದಾರೆ, ಇದರಿಂದ ಯುವಕರ ಅಸಲಿಯತ್ತು ಬಯಲಾಗಿದೆ.

ಆದರೂ ಯುವಕರು ಊಟದ ಬಿಲ್ ನೀಡಲು ಒಪ್ಪುವುದಿಲ್ಲ. ಕೊನೆಗೆ ವಾಗ್ವಾದದ ಬಳಿಕ ಕೇವಲ 20 ಪೌಂಡ್ ಹಣ ನೀಡಿ ಯುವಕರು ಹೊರ ನಡೆಯುತ್ತಾರೆ. ಈ ಬಗ್ಗೆ ಹೋಟೆಲ್‌ನವರು ಪೊಲೀಸರಿಗೆ ದೂರು ನೀಡಿದರೂ ಪೋಲೀಸರು ಪ್ರಕರಣ ದಾಖಲಿಸಿಲ್ಲ ಎಂದು ತಿಳಿದುಬಂದಿದೆ. ವಿಡಿಯೋ ಇಲ್ಲಿದೆ ನೋಡಿ,

Watch Video

video
error: Content is protected !!