fbpx

ಗಣೇಶ ಮೂರ್ತಿ ಪ್ರತಿಷ್ಟಾಪನೆಗೆ ವಿರೋಧಿಸಿದ ಪುಂಡರಿಗೆ ಸ್ಥಳೀಯರು ಹೆಂಗೆ ಬೆಂಡೆತ್ತಿದ್ದಾರೆ ನೋಡಿ, ವೈರಲ್ ವಿಡಿಯೋ

ಕರೋನಾ ಸೋಂಕಿನ ಹಿನ್ನೆಲೆಯಲ್ಲಿ ದೇಶದಾದ್ಯಂತ ಗಣೇಶ ಚತುರ್ಥಿಯನ್ನು ಈ ಬಾರಿ ಸರಳವಾಗಿ ಆಚರಿಸಲಾಗುತ್ತಿದೆ. ಪ್ರತಿವರ್ಷ ಅದ್ಧೂರಿಯಾಗಿ ನಡೆಯುತ್ತಿದ್ದ ಸಾರ್ವಜನಿಕ ಗಣೇಶೋತ್ಸವವನ್ನು ಈ ವರ್ಷ ಜನರ ಆರೋಗ್ಯದ ಹಿತದೃಷ್ಟಿಯಿಂದ ತಡೆಹಿಡಿಯಲಾಗಿದೆ‌.

ಕೆಲವೆಡೆ ಪುಂಡರು ಗಣೇಶೋತ್ಸವಕ್ಕೆ ಅಡ್ಡಿಪಡಿಸಿದ್ದು ಬಿಟ್ಟರೆ, ಬಹುತೇಕ ಎಲ್ಲಾ ಕಡೆ ಶಾಂತಿಯುತವಾಗಿ ಗಣೇಶೋತ್ಸವ ಆಚರಿಸಲಾಗಿದೆ. ಇದೀಗ ಹೈದರಾಬಾದ್‌ನಲ್ಲಿ ಗಣೇಶೋತ್ಸವಕ್ಕೆ ಅಡ್ಡಿಪಡಿಸಿದ ಕೆಲ ಪುಂಡರಿಗೆ ಸಾರ್ವಜನಿಕರು ಸೇರಿ ಬೆಂಡೆತ್ತಿರುವ ವಿಡಿಯೋ ವೈರಲ್ ಆಗಿದೆ.

ಹೈದರಾಬಾದ್‌ನ ಬಾಲ್‌ಗುಂಜ್ ಎಂಬಲ್ಲಿ ಕಳೆದ 20ವರ್ಷಗಳಿಂದ ಸಾರ್ವಜನಿಕ ಗಣೇಶೋತ್ಸವ ಆಚರಿಸಲಾಗುತ್ತಿದೆ. ಸ್ಥಳೀಯ ಎಲ್ಲಾ ಧರ್ಮೀಯರು ಇದಕ್ಕೆ ಸಹಕಾರ ನೀಡಿ ಯಾವುದೇ ತೊಂದರೆಯಿಲ್ಲದೆ ನೆರವೇರಿಸಲಾಗುತ್ತಿತ್ತು. ಸರ್ಕಾರ ಗೊತ್ತುಪಡಿಸಿದ ಜಾಗದಲ್ಲಿಯೇ ಪೆಂಡಾಲ್ ಹಾಕಿ ಗಣಪತಿ ವಿಗ್ರಹ ಕೂರಿಸಲಾಗುತ್ತಿತ್ತು.

ಆದರೆ ಕೆಲ ಸಮಯದ ಹಿಂದೆ ಈ ಪೆಂಡಾಲ್ ಪಕ್ಕ ಎಡಪಂಥೀಯ ಚಿಂತನೆಯ ಕುಟುಂಬವೊಂದು ಆಸ್ತಿಖರೀದಿಸಿದ್ದು, ತಮಗೆ ಗಣೇಶೋತ್ಸವ ಆಚರಣೆಯಿಂದ ತೊಂದರೆಯಾಗುತ್ತಿದೆ ಎಂದು ಸ್ಥಳೀಯ ಆಡಳಿತಕ್ಕೆ ದೂರು ಸಲ್ಲಿಸಿದ್ದಾರೆ ಹಾಗೂ ಅಲ್ಲಿ ಶಾಶ್ವತವಾಗಿ ಹಾಕಲಾಗಿದ್ದ ಮಂಟಪವನ್ನು ತಮ್ಮ ಪ್ರಭಾವ ಬಳಸಿ ಕೆಲ ತಿಂಗಳ ಹಿಂದೆ ತೆರವುಗೊಳಿಸಿದ್ದಾರೆ.

ಈ ವರ್ಷ ಎಂದಿನಂತೆ ಸ್ಥಳೀಯರು ಪೆಂಡಾಲ್ ಹಾಕಿ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದು, ತಕ್ಷಣ ಅಲ್ಲಿಗೆ ಬಂದ ಕೆಲ ಪುಂಡರು ಪೋಲೀಸರನ್ನು ಕರೆಸಿ ಅದನ್ನು ತೆರವುಗೊಳಿಸಲು ಯತ್ನಿಸಿದ್ದಾರೆ. ಈ ನಡುವೆ ವಾಗ್ವಾದ ನಡೆದು ತಳ್ಳಾಟವಾಗಿ ಗಣಪತಿಯ ಮೂರ್ತಿಗೆ ಹಾನಿಯಾಗಿದೆ.

ಇದರಿಂದ ರೊಚ್ಚಿಗೆದ್ದ ಸ್ಥಳೀಯರು ಆ ಪುಂಡರಿಗೆ ಹಿಗ್ಗಾಮುಗ್ಗ ಭಾರಿಸಿದ್ದಾರೆ. ನೋಡನೋಡುತ್ತಿದ್ದಂತೆ ಹಬ್ಬದ ವಾತಾವರಣ ರಣರಂಗವಾಗಿದೆ ಬದಲಾಗಿದೆ. ಕೊನೆಗೆ ಪೋಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಇದೀಗ ವಿಡಿಯೋ ವೈರಲ್ ಆಗಿದ್ದು, ಇಲ್ಲಿದೆ ನೋಡಿ ವಿಡಿಯೋ,

Watch Video

error: Content is protected !!