ದೇಶದಾದ್ಯಂತ ಭಾರೀ ಮಳೆಗೆ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಈಗಾಗಲೇ ಅನೇಕ ಜನರು, ಪ್ರಾಣಿ-ಪಕ್ಷಿಗಳು ಭೀಕರ ಮಳೆಯಿಂದಾಗಿ ಸಂಭವಿಸಿದ ಪ್ರಕೃತಿ ವಿಕೋಪಗಳಿಗೆ ಸಿಕ್ಕು ಪ್ರಾಣ ಬಿಟ್ಟಿದ್ದಾರೆ.
ಆದರೆ ಇಲ್ಲೊಬ್ಬ ಭೂಪ ಮಾತ್ರ ಅಪಾಯದ ಅರಿವಿದ್ರು ತುಂಬಿ ಹರಿಯುತ್ತಿದ್ದ ನದಿಯಲ್ಲಿ ತನ್ನ ಎತ್ತಿನ ಬಂಡಿ ದಾಟಿಸಲು ಹೋಗಿದ್ದಾನೆ. ಎತ್ತುಗಳಿಗೆ ಮೊದಲೇ ಅಪಾಯದ ಅರಿವಾಯಿತೋ ಏನೋ, ಅವು ಮುಂದಕ್ಕೆ ಹೋಗಲು ನಿರಾಕರಿಸಿದ್ದಾವೆ. ಆದರೆ ಎತ್ತಿನ ಬಂಡಿ ಓಡಿಸುತ್ತಿದ್ದ ವ್ಯಕ್ತಿ ಮಾತ್ರ ಬೆತ್ತದಲ್ಲಿ ಹೊಡೆದು ಎತ್ತುಗಳನ್ನು ಬಲವಂತವಾಗಿ ನೀರಿಗೆ ಇಳಿಸಿದ್ದಾನೆ.
ಎತ್ತುಗಳು ಅರ್ಧ ನದಿ ದಾಟುತ್ತಿದ್ದಂತೆ ನೀರಿನ ಸೆಳೆತಕ್ಕೆ ಸಿಕ್ಕಿ ಎತ್ತಿನಬಂಡಿ ಪಲ್ಟಿಯಾಗಿದೆ. ಅದೇ ಬಂಡಿಗೆ ಹಗ್ಗದ ಮೂಲಕ ಎತ್ತುಗಳನ್ನು ಕಟ್ಟಿದ್ದರಿಂದ ಅವು ಕೂಡ ನೀರಿನಲ್ಲಿ ಮುಳುಗಿದೆ.
ಎಷ್ಟೇ ಪ್ರಯತ್ನ ಪಟ್ಟರೂ ಅವಕ್ಕೆ ಮೇಲೆ ಬರಲಾಗಲಿಲ್ಲ, ಕೊನೆಗೆ ನೀರಿನ ರಭಸಕ್ಕೆ ಕೊಚ್ಚಿಹೋಗಿದೆ. ಎತ್ತಿನ ಬಂಡಿ ಓಡಿಸುತ್ತಿದ್ದ ವ್ಯಕ್ತಿ ಮಾತ್ರ ಈಜಿ ದಡ ಸೇರಿ ಪ್ರಾಣ ಉಳಿಸಿಕೊಂಡಿದ್ದಾನೆ. ಆತನ ಹುಚ್ಚುತನಕ್ಕೆ ಮೂಕ ಪ್ರಾಣಿಗಳೆರಡು ಸಾವನ್ನಪ್ಪಿದೆ.
ಈ ವಿಡಿಯೋ ಬಿಹಾರದ್ದು ಎಂದು ಹೇಳಲಾಗುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಇದನ್ನು ನೋಡಿದ ಜನ ಆಕ್ರೋಶ, ನೋವು ವ್ಯಕ್ತಪಡಿಸಿದ್ದಾರೆ. ಎತ್ತಿನ ಬಂಡಿಯನ್ನು ಬಲವಂತವಾಗಿ ನೀರಿಗಿಳಿಸಿದ ಆ ವ್ಯಕ್ತಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಅನೇಕರು ಆಗ್ರಹಿಸಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ,
Watch Video
