fbpx

ಹಾವು ಕಚ್ಚಿದ ಮಗುವನ್ನು ಆಸ್ಪತ್ರೆಗೆ ಸಾಗಿಸುವ ಬದಲು ಈ ಮೂಢ ಜನ ಮಾಡಿದ್ದೇನು ನೋಡಿ! ಶಾಕಿಂಗ್ ವಿಡಿಯೋ

ಜನರ ಮೂಢನಂಬಿಕೆಗೆ ಮಗುವೊಂದು ಪ್ರಾಣ ಕಳೆದುಕೊಂಡ ಘಟನೆ ಬಿಹಾರದಲ್ಲಿ ನಡೆದಿದೆ. ಬಿಹಾರದ ಪಶ್ಚಿಮ ಚಂಪರಣ್ ಜಿಲ್ಲೆಯ ರಾಮನಗರ್ ಎಂಬಲ್ಲಿ ಈ ಘಟನೆ ನಡೆದಿದ್ದು ಹಾವು ಕಚ್ಚಿದ್ದ ಮಗುವನ್ನು ಆಸ್ಪತ್ರೆಗೆ ಸಾಗಿಸುವ ಬದಲು ಅಲ್ಲಿಯ ಜನ ಮೂಢನಂಬಿಕೆಯ ಮೊರೆ ಹೋಗಿದ್ದಾರೆ.

ಆಟವಾಡುತ್ತಿದ್ದ ಮಗುವಿಗೆ ವಿಷಕಾರಿ ನಾಗರಹಾವು ಕಚ್ಚಿದ್ದು, ಮಗುವಿನ ಸ್ಥಿತಿ ಗಂಭೀರವಾಗಿತ್ತು. ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದರೆ ಮಗು ಬದುಕುತ್ತಿತ್ತೇನೋ, ಆದರೆ ಅಲ್ಲಿನ ಮೂಢ ಜನ ಆ ಕೆಲಸ ಮಾಡುವ ಬದಲು ಮಗುವಿನ ಪ್ರಾಣ ಹೋಗುವಂತಹ ಕೆಲಸ ಮಾಡಿದ್ದಾರೆ.


Continue Reading

ಮಗುವಿಗೆ ಕಚ್ಚಿದ್ದ ಹಾವನ್ನು ಹಿಡಿದ ಜನ ಅದನ್ನು ಕಬ್ಬಿಣದ ಸಲಾಕೆಗಳ ಮೂಲಕ ಹಿಡಿದು ಮಗುವಿನ ಹತ್ತಿರವೇ ಹಿಡಿದುಕೊಂಡಿದ್ದಾರೆ. ಯಾವ ಹಾವು ಕಚ್ಚಿತ್ತೋ ಅದನ್ನ ಹಿಡಿದು ಮತ್ತೆ ಕಚ್ಚಿಸಿದರೆ ಅದು ವಿಷವನ್ನು ಹೀರುತ್ತೆ ಅನ್ನೋ ಮೂಢನಂಬಿಕೆಯೆ ಇದಕ್ಕೆಲ್ಲ ಕಾರಣ.

ಇದನ್ನೂ ಓದಿ:  ಪುಟ್ಟ ಮಗುವಿ‌ನ ವಾಟರ್ ಸ್ಕೇಟಿಂಗ್‌ ಸಾಹಸಕ್ಕೆ ನೆಟ್ಟಿಗರು ಫಿದಾ! ವೈರಲ್ ವಿಡಿಯೋ ನೋಡಿ

picsart 08 21 106885255973965534698

ಆದರೆ ಹಾವು ಮಗುವಿಗೆ ಮತ್ತೆ ಬೆರಳನ್ನು ಕಚ್ಚಿ ಹಿಡಿದು ವಿಷವನ್ನು ಉಗುಳಿದೆ. ವಿಷ ಹೀರುತ್ತೆ ಎಂದು ಹಾವನ್ನು ಕಚ್ಚಿಸಿದ್ರೆ ಅದು ಮತ್ತಷ್ಟು ವಿಷವನ್ನು ಮಗುವಿನ ದೇಹಕ್ಕೆ ಸೇರಿಸಿ ಮಗು ಅಲ್ಲೇ ಮೃತಪಟ್ಟಿದೆ. ವಿಷ ಹೀರುವ ಬದಲು ಹಾವು ಮಗುವಿನ ಪ್ರಾಣವನ್ನೇ ಹೀರಿಬಿಟ್ಟಿದೆ.

ಅಲ್ಲಿದ್ದ ಜನ ತಾವು ಮಾಡುತ್ತಿರುವ ಘನಂಧಾರಿ ಕೆಲಸವನ್ನು ವಿಡಿಯೋ ಬೇರೆ ಮಾಡಿದ್ದಾರೆ. ವಿಡಿಯೋದಲ್ಲಿ ಕೆಲವರು ‘ಹಾವು ವಿಷ ಹೀರ್ತಿದೆ, ವಿಡಿಯೋ ಮಾಡಿ’ ಎಂದು ಹೇಳೋದು ಕೇಳಿಸುತ್ತೆ.

ಕೊನೆಗೂ ಜನರ ಮೂಢನಂಬಿಕೆ ಮುಗ್ಧ ಮಗುವಿನ ಪ್ರಾಣಹಿಂಡಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರ ಆಕ್ರೋಶ ಕಾರಣವಾಗಿದೆ. ವೈರಲ್ ವಿಡಿಯೋ ಇಲ್ಲಿದೆ ನೋಡಿ. (Graphical content).

Watch Video

Trending Short Videos

close

This will close in 26 seconds

error: Content is protected !!