fbpx

Please assign a menu to the primary menu location under menu

ಮನೆಗೆ ನುಗ್ಗಿದ ಪ್ರವಾಹದ ನೀರಿನಲ್ಲೇ ಈಜು ಕಲಿಯುತ್ತಿರುವ ಮಹಿಳೆ, ವೈರಲ್ ವಿಡಿಯೋ ನೋಡಿ

ಭಾರತದಾದ್ಯಂತ ಮುಂಗಾರು ಮಳೆಯ ಆವಾಂತರ ಜೋರಾಗಿದೆ, ಅನೇಕ ರಾಜ್ಯಗಳು ಪ್ರವಾಹ ಪರಿಸ್ಥಿತಿ ಎದುರಿಸುತ್ತಿದೆ. ರಾಜ್ಯದಲ್ಲಿಯೂ‌ ಅನೇಕ ಜಿಲ್ಲೆಗಳು ಪ್ರವಾಹ ಪರಿಸ್ಥಿತಿಯನ್ನು ಎದುರಿಸುತ್ತಿವೆ.

ಒಂದು ಕಡೆ ಜನರು ಪ್ರವಾಹದಿಂದಾಗಿ ಸಂಕಷ್ಟದ ಸ್ಥಿತಿ ಅನುಭವಿಸುತ್ತಿದ್ದರೆ, ಇಲ್ಲೊಂದು ದಂಪತಿ ಪ್ರವಾಹದ ನೀರಿನಲ್ಲೇ ಈಜು ಕಲಿಯುತ್ತಿರುವ ವಿಡಿಯೋ ವೈರಲ್ ಆಗಿದೆ.

ಮನೆಯೊಳಕ್ಕೆ ನುಗ್ಗಿದ ಪ್ರವಾಹದ ನೀರಿನಲ್ಲಿ ಮಹಿಳೆ ಈಜು ಕಲಿಯುತ್ತಿದ್ದರೆ ಪತಿ ಆಕೆಗೆ ಸಹಾಯ ಮಾಡುತ್ತಿರೋದನ್ನು ಕಾಣಬಹುದಾಗಿದೆ.

ಪ್ರವಾಹ ಬಂದು ಎಲ್ಲರೂ ಊರು ತೊರೆದು ಹೋಗುತ್ತಿದ್ದರೆ, ಈ ದಂಪತಿ ಮಾತ್ರ ಪ್ರವಾಹವನ್ನೇ ಎಂಜಾಯ್ ಮಾಡ್ತಾ ಇದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಲ್ಲಿದೆ ನೋಡಿ ವಿಡಿಯೋ,

Watch Video

error: Content is protected !!