fbpx

ಅಕ್ರಮ ಗೋ-ಸಾಗಾಟ ಮಾಡುತ್ತಿದ್ದ ಟ್ರಕ್ಕನ್ನು ಚೇಸ್ ಮಾಡಿ ಹಿಡಿದ ಮಹಿಳೆ, ಹೇಗಿತ್ತು ನೋಡಿ ಚೇಸ್! (ವೈರಲ್ ವಿಡಿಯೋ)

ದೇಶದಲ್ಲಿ ಗೋಕಳ್ಳರ ಅಟ್ಟಹಾಸ ದಿನೇದಿನೇ ಮಿತಿಮೀರುತ್ತಿದೆ. ಮೊದಲು ಬೀಡಾಡಿ ದನ, ಹೋರಿಗಳನ್ನು ಹೊತ್ತುಕೊಂಡು ಹೋಗುತ್ತಿದ್ದ ಕಳ್ಳರು, ಇದೀಗ ಕೊಟ್ಟಿಗೆಗೆ ನುಗ್ಗಿ ಸಾಕು ದನಗಳನ್ನು ಕಳ್ಳತನ ಮಾಡುವ ಮಟ್ಟಿಗೆ ಬೆಳೆದಿದ್ದಾರೆ.

ದೇಶದಲ್ಲಿಯೇ ಗುಜರಾತ್‌ನಲ್ಲಿ ಗೋಹತ್ಯೆ ನಿಶೇಧದ ಜೊತೆ ಗೋಹಂತಕರಿಗೆ ಶಿಕ್ಷಿಸುವ ಕಠಿಣ ಕಾನೂನುಗಳು ಜಾರಿಯಲ್ಲಿದೆ. ಒಂದು ವೇಳೆ ಗೋಹತ್ಯೆ ಮಾಡಿ ಸಿಕ್ಕಿಬಿದ್ದರೆ ಜಾಮೀನು ರಹಿತ ಸಜೆ ಜೊತೆ 7-10ವರ್ಷಗಳ ಜೈಲು ಶಿಕ್ಷೆಗೂ ಗುರಿಯಾಗಬೇಕಿದೆ.


Continue Reading

ಇದೇ ಗುಜರಾತ್‌ನ ವಡೋದರಾ ಜಿಲ್ಲೆಯಲ್ಲಿ ಟ್ರಕ್ ಒಂದರಲ್ಲಿ ಅಕ್ರಮವಾಗಿ ಗೋಸಾಗಾಟ ಮಾಡುತ್ತಿರೋದನ್ನ ಗಮನಿಸಿದ ಮಹಿಳೆಯೊಬ್ಬರು ತಕ್ಷಣ ಟ್ರಕ್ಕನ್ನು ತಮ್ಮ ಕಾರಿನ ಮೂಲಕ ಚೇಸ್ ಮಾಡಿದ್ದಾರೆ. ಇದು ಟ್ರಕ್ ಚಾಲಕನ ಗಮನಕ್ಕೆ ಬರುತ್ತಿದ್ದಂತೆ ಆತ ಆಕೆಯ ಕೈಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ.

ಇದನ್ನೂ ಓದಿ:  ಕನ್ನಡದಲ್ಲಿ ಮಾತಾಡಿ ಎಂದಿದ್ದಕ್ಕೆ ಕಿರುಚಾಡಿ ರಂಪಾಟ ಮಾಡಿದ ಮಹಿಳೆ! ವೈರಲ್ ವಿಡಿಯೋ ನೋಡಿ

picsart 08 21 114896466541616437779

ಮಹಿಳೆ ಕಿಲೋಮೀಟರ್‌ಗಟ್ಟಲೆ ಟ್ರಕ್ಕನ್ನು ಹಿಂಬಾಲಿಸಿದ್ದೂ ಅಲ್ಲದೆ‌, ಗೋರಕ್ಷಕರಿಗೆ ಹಾಗೂ ಪೋಲೀಸರಿಗೆ ಟ್ರಕ್ ಚಲಿಸುತ್ತಿರುವ ಮಾರ್ಗಗಳ ಕ್ಷಣಕ್ಷಣದ ಮಾಹಿತಿಯನ್ನು ನೀಡಿದ್ದಾಳೆ. ಕೊನೆಗೆ ಟೋಲ್‌ಗೇಟ್ ಒಂದರ ಬಳಿ ಗೋರಕ್ಷಕರು ಹಾಗೂ ಪೋಲೀಸರು ಟ್ರಕ್ಕನ್ನು ಅಡ್ಡಹಾಕಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ಚಾಲಕನನ್ನು ಹಿಡಿದಿದ್ದಾರೆ.

ಟ್ರಕ್ ಬಾಗಿಲು ತೆರೆದಾಗ ಎರಡು ಕಂಪಾರ್ಟ್‌ಮೆಂಟ್‌ಗಳಲ್ಲಿ 40-50 ಹಸು, ಹೋರಿಗಳನ್ನು ನಿರ್ಧಯವಾಗಿ ತುಂಬಲಾಗಿತ್ತು. ಟ್ರಕ್ಕನ್ನು ವಶಪಡಿಸಿಕೊಂಡ ಪೋಲೀಸರು ಇದರ ಹಿಂದಿನ ಜಾಲವನ್ನು ಪತ್ತೆ ಹಚ್ಚಲು ತನಿಖೆ ನಡೆಸುತ್ತಿದ್ದಾರೆ.

ಇದೀಗ ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯ ಡೇರಿಂಗ್ ಚೇಸ್‌ನ ವಿಡಿಯೋ ವೈರಲ್ ಆಗಿದ್ದು, ಮಹಿಳೆಯ ಕೆಲಸಕ್ಕೆ ಜನ ಶಭಾಶ್ ಎಂದಿದ್ದಾರೆ. ವೈರಲ್ ವಿಡಿಯೋ ಇಲ್ಲಿದೆ ನೊಡಿ,

Watch Video

Trending Short Videos

close

This will close in 26 seconds

error: Content is protected !!