fbpx

ಫೇಮಸ್ ಆಗುವ ಹುಚ್ಚು, ಹಸುಗೂಸಿನ ಕಾಲಲ್ಲಿ ಹಿಡಿದು ಗರಗರನೆ ತಿರುಗಿಸಿದ ತಂದೆ! ಬೆಚ್ಚಿಬೀಳಿಸುವ ವಿಡಿಯೋ ಇಲ್ಲಿದೆ ನೋಡಿ

ಸ್ವಂತ ತಂದೆಯೇ ತನ್ನ ಆರು ವಾರದ ಹಸುಗೂಸಿನ ಕಾಲಲ್ಲಿ ಹಿಡಿದು ಅಲುಗಾಡಿಸಿ ಕ್ರೌರ್ಯ ಮೆರೆದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆರು ವಾರದ ಹೆಣ್ಣು ಮಗುವಿನ ಕಾಲಲ್ಲಿ ಹಿಡಿದ ಕ್ರೂರಿ ತಂದೆ ಅದನ್ನು ಅತ್ತಿತ್ತ ಅಲುಗಾಡಿಸಿದ್ದಾನೆ, ಇದನ್ನು ಆ ಮಗುವಿನ ತಾಯಿಯೇ ಚಿತ್ರೀಕರಿಸಿದ್ದಾಳೆ ಎಂದು ಹೇಳಲಾಗುತ್ತಿದೆ.

ರಷ್ಯಾದ ಮಾಸ್ಕೋ ಮೂಲದ ‘ಇಗರ್ ಕ್ರವ್ತಸೋ’ ಎಂಬಾತನೇ ತನ್ನ ಪುಟ್ಟ ಮಗುವಿಗೆ ಹಿಂಸಿಸಿದಾತ. ಈತ ತನ್ನನ್ನು ತಾನು ಸಾಮಾಜಿಕ ಜಾಲತಾಣದಲ್ಲಿ ಪ್ರಭಾವಶಾಲಿಯಾಗಿಸಲು ಈ ಕೃತ್ಯ ನಡೆಸಿ ತನ್ನ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.


ಸುದ್ದಿಗಳನ್ನು ತಕ್ಷಣ ಪಡೆಯಲು ನಮ್ಮ 'Telgram Channel' ಸೇರಿ

ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಮಾಸ್ಕೋ ಪೋಲೀಸರು ಮಗುವಿನ ತಂದೆ ಹಾಗೂ ತಾಯಿಯನ್ನು ವಶಕ್ಕೆ ಪಡೆದಿದ್ದಾರೆ. ಈ ಘಟನೆ ಬಗ್ಗೆ ಅರೋಪಿ ತಂದೆಯನ್ನು ವಿಚಾರಣೆ ನಡೆಸಿ ಪೊಲೀಸರೇ ಶಾಕ್ ಗೆ ಒಳಗಾಗಿದ್ದಾರೆ. ‘ಮಕ್ಕಳನ್ನು ಕೋತಿಯ ತರ ನಡೆಸಿಕೊಳ್ಳಬೇಕು, ನನಗೆ ಮಗುವನ್ನು ಯಾವರೀತಿ ನೋಡ್ಕೋಬೇಕು ಗೊತ್ತಿದೆ’ ಎಂದು ಕ್ರೂರಿ ತಂದೆ ಪೋಲೀಸರ ಮುಂದೆ ವಿಚಾರಣೆ ಸಂದರ್ಭದಲ್ಲಿ ಹೇಳಿದ್ದಾನಂತೆ

ಮಕ್ಕಳ ತಜ್ಞರ ಪ್ರಕಾರ ಈ ರೀತಿ ಮಕ್ಕಳನ್ನು ಅಲುಗಾಡಿಸೋದು ತಪ್ಪು, ಈ ರೀತಿ ಮಾಡೋದರಿಂದ ಮಗುವಿನ ಕುತ್ತಿಗೆ ಮುರಿಯುವ ಸಾಧ್ಯತೆ ಹೆಚ್ಚು, ಅಲ್ಲದೆ ಮೆದುಳಿನ ನರಗಳಿಗೆ ಪೆಟ್ಟಾಗಬಹುದು ಎಂದಿದ್ದಾರೆ. ಆದರೆ ಕ್ರೂರಿ ತಂದೆಯ ಸೋಶಿಯಲ್ ಮಿಡಿಯಾ ಬೆಂಬಲಿಗರು ಹೇಳೋದೇ ಬೇರೆ, ಈ ರೀತಿ ಮಾಡೋದು ಮಗುವಿಗೆ ಯೋಗ ಮಾಡಿಸಿದಂತೆ ಅಥವಾ ಶಿಸುವಿಗೆ ಜಿಮ್ನಾಸ್ಟಿಕ್ ಕಲಿಸಿದಂತೆ ಎಂದಿದ್ದಾರೆ.

ಸದ್ಯ ಹಸುಗೂಸನ್ನು ವಶಕ್ಕೆ ಪಡೆದಿರುವ ಪೋಲೀಸರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಿಸಿದ್ದಾರೆ. ಮಗುವನ್ನು ಕ್ರೂರಿ ದಂಪತಿಯಿಂದ ಶಾಶ್ವತವಾಗಿ ದೂರ ಇರಿಸುವ ಬಗ್ಗೆಯೂ ಚರ್ಚೆಗಳಾಗುತ್ತಿದೆ. ಕ್ರೂರಿ ತಂದೆಯ ವೈರಲ್ ವಿಡಿಯೋ ನೋಡಿ,

Watch Video

video

error: Content is protected !!