fbpx

ಮೂರು ತಿಂಗಳಲ್ಲಿ ಸುರಿಯಬೇಕಾದ ಮಳೆ ಕೇವಲ 20ನಿಮಿಷದಲ್ಲಿ ಸುರಿದ ಪರಿಣಾಮ ಏನಾಗಿದೆ ನೋಡಿ, ಶಾಕಿಂಗ್ ವಿಡಿಯೋ

ಮುಂಗಾರು ಮಳೆಯ ಆರ್ಭಟ ದೇಶದಾದ್ಯಂತ ಅನಾಹುತ ಸೃಷ್ಟಿಸುತ್ತಿದೆ. ಭಾರತದ ಹಲವು ರಾಜ್ಯಗಳಲ್ಲಿ ಮಳೆಯ ಆವಾಂತರಕ್ಕೆ ಪ್ರವಾಹದ ಪರಿಸ್ಥಿತಿ ಎದುರಾಗಿದ್ದು, ಬೆಟ್ಟಗುಡ್ಡ ಕುಸಿದ ಪರಿಣಾಮ ಹಲವು ಕಡೆಗಳಲ್ಲಿ ಜೀವ ಹಾನಿಯಾಗಿದೆ. ಅಸ್ಸಾಂ, ಮುಂಬೈ, ದೆಹಲಿ, ಕರ್ನಾಟಕದ ಹಲವು ಜಿಲ್ಲೆಗಳು ವರುಣನ ಆರ್ಭಟಕ್ಕೆ ತತ್ತರಿಸಿ ಹೋಗಿದೆ.

ಮಳೆ ಆರ್ಭಟ ಇರೋದು ಭಾರತದಲ್ಲಷ್ಟೇ ಅಲ್ಲ ಚೀನಾ, ನೇಪಾಳ, ಸ್ಪೇನ್, ಬಾಂಗ್ಲಾದೇಶ ಸೇರಿದಂತೆ ಪ್ರಪಂಚದ ಹಲವು ರಾಷ್ಟ್ರಗಳು ಮುಂಗಾರು ಮಳೆಯ ಪ್ರಭಾವ ಎದುರಿಸುತ್ತಿದೆ. ಇದೀಗ ವಿಡಿಯೋವೊಂದು ವೈರಲ್ ಆಗಿದ್ದು, ಸ್ಪೇನ್‌ನ ಸೆವಿಲ್ಲೆ ಪ್ರದೇಶದ ಎಸ್ಟೆಪಾ ಎಂಬಲ್ಲಿ ಏಕಾಏಕಿ ಸುರಿದ ಭಾರೀ ಮಳೆಗೆ ಕುಸಿಯುತ್ತಿರುವ ಕಟ್ಟಡಗಳು, ವಾಹನಗಳು ಕೊಚ್ಚಿ ಹೋಗುತ್ತಿರುವ ದೃಶ್ಯ ಇದರಲ್ಲಿದೆ.

ಸ್ಪೇನ್‌ನ ಸೆವಿಲ್ಲೆ ಪ್ರದೇಶದ ಮೇಲೆ ಮೂರು ತಿಂಗಳಲ್ಲಿ ಸುರಿಯಬೇಕಾದ ಮಳೆ ಕೇವಲ ಇಪ್ಪತ್ತು ನಿಮಿಷಗಳಲ್ಲಿ ಸುರಿದ ಪರಿಣಾಮ ಅಕ್ಷರಶಃ ಪ್ರವಾಹ ಸೃಷ್ಟಿಯಾಗಿದೆ. ನೋಡನೋಡುತ್ತಿದ್ದಂತೆ ಪ್ರವಾಹದ ನೀರು ಏಕಾಏಕೀ ಜನವಸತಿ ಪ್ರದೇಶಕ್ಕೆ ನುಗ್ಗಿದ್ದು ಕಟ್ಟಡಗಳು ಉರುಳಿಬಿದ್ದಿದೆ, ರಸ್ತೆಬದಿ ನಿಲ್ಲಿಸಲಾಗಿದ್ದ ವಾಹನಗಳು ಪ್ರವಾಹದಲ್ಲಿ ಕೊಚ್ಚಿಹೋಗಿದೆ.

ಮಳೆಯ ಮುನ್ಸೂಚನೆ ಅರಿತ ಸರ್ಕಾರ ಸೋಮವಾರದಿಂದಲೇ ‘ಎಲ್ಲೋ ಅಲರ್ಟ್’ ಘೋಷಿಸಿತ್ತು. ಆದರೆ ಇದು ಕೇವಲ ಮಳೆಯಲ್ಲ ರಣಮಳೆ ಎಂದು ಅರಿತಿದ್ದೇ ಮಂಗಳವಾರ ಆರೆಂಜ್ ಅಲರ್ಟ್ ಘೋಷಣೆ ಮಾಡಿದ್ದಾರೆ, ಅಲ್ಲದೆ ಪ್ರವಾಹ ಪರಿಸ್ಥಿತಿ ನಿಭಾಯಿಸಲು ರಕ್ಷಣಾ ತಂಡವನ್ನೂ ಸ್ಥಳಕ್ಕೆ ರವಾನಿಸಲಾಗಿತ್ತು. ಈ ಮೂಲಕ ಅಪಾರ ಪ್ರಾಣ ಹಾನಿಯಾಗುವುದನ್ನು ಸರ್ಕಾರ ತಪ್ಪಿಸಿದೆ.

ಮೂರು ತಿಂಗಳು ಸುರಿಯಬೇಕಾದ ಮಳೆ ಇಪ್ಪತ್ತು ನಿಮಿಷಗಳಲ್ಲಿ ಸುರಿದ ಪರಿಣಾಮ ಸ್ಪೇನ್‌ನ ಈ ನಗರದ ಪರಿಸ್ಥಿತಿ ಹೇಗಾಗಿದೆ ನೋಡಿ, ವೈರಲ್ ವಿಡಿಯೋ.

Watch Video

error: Content is protected !!