ಹಿಂದೂಗಳ 500ವರ್ಷಗಳ ಹೋರಾಟದ ಫಲ, ಕೊನೆಗೂ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಆಗಸ್ಟ್ 5ರಂದು ಅಧಿಕೃತವಾಗಿ ಚಾಲನೆ ದೊರೆತೆದೆ. ಒಂದು ಕಡೆ ಪ್ರಧಾನಿ ಮೋದಿಯವರು ರಾಮ ಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಹಾಕುತ್ತಿದ್ದರೆ, ಇತ್ತ ರಾಜಸ್ಥಾನದ ಬರ್ಮರ್ನಲ್ಲಿ 50ಮುಸ್ಲಿಂ ಕುಟುಂಭ ಜೈಶ್ರೀರಾಮ್ ಎನ್ನುತ್ತ ಮರಳಿ ಹಿಂದೂ ಧರ್ಮಕ್ಕೆ ಬಂದಿದೆ.
ಮೊಘಲ್ ಇಸ್ಲಾಮಿಕ್ ಆಕ್ರಮಕಾರರು ತಮ್ಮ ಪೂರ್ವಜರನ್ನು ಬಲವಂತವಾಗಿ ಇಸ್ಲಾಂ ಸ್ವೀಕರಿಸುವಂತೆ ಮಾಡಿದ್ದರು. ನಮ್ಮ ಪೂರ್ವಜರು ಹಿಂದೂಗಳಾಗಿದ್ದು, ಇದೀಗ ನಾವು ಮರಳಿ ಸನಾತನ ಹಿಂದೂ ಧರ್ಮಕ್ಕೆ ಮರಳಿ ಬಂದಿದ್ದೇವೆ. ಯಾವುದೇ ಬಲವಂತವಿಲ್ಲದೆ ನಾವು ಮರಳಿ ಹಿಂದೂ ಧರ್ಮ ಸ್ವೀಕರಿಸಿದ್ದು, ಇ’ಸ್ಲಾಮಿಕ್ ಕ್ರೂರತೆಗೆ ಬಲಿಯಾದ ನಮ್ಮ ಪೂರ್ವಜರ ಆತ್ಮಕ್ಕೆ ಈಗ ಶಾಂತಿ ಸಿಕ್ಕಿರುತ್ತೆ ಎಂದಿದ್ದಾರೆ.
ನಮ್ಮನ್ನು ಇತರ ಮುಸ್ಲಿಂ ಜಾತಿಗಳು ಕೀಳಾಗಿ ಕಾಣುತ್ತಿದ್ದರು. ಇತಿಹಾಸ ಅಧ್ಯಯನ ಮಾಡಿದಾಗ ನಮ್ಮ ಮೂಲ ಹಿಂದೂ ಧರ್ಮವೆಂದು ತಿಳಿದುಬಂತು, ಹೀಗಾಗಿ ಕುಟುಂಬಸ್ಥರೆಲ್ಲ ಸೇರಿ ಹಿಂದೂ ಧರ್ಮಕ್ಕೆ ಮರಳುವ ನಿರ್ಣಯ ತೆಗೆದುಕೊಂಡೆವು. ಈ ಕಾರಣಕ್ಕೆ ಕೊನೆಗೂ ಯಜ್ಞ, ಹವನ ನೆರವೇರಿಸಿ, ಜನಿವಾರ ಧರಿಸಿ 250 ಮಂದಿ ಹಿಂದೂ ಧರ್ಮಕ್ಕೆ ಮರಳಿದ್ದೇವೆ ಎಂದಿದ್ದಾರೆ.