fbpx

ಕೊನೆಗೂ ‘ರಾಮ ಮಂದಿರ ನಿರ್ಮಾಣ’, ವಿದೇಶಿ ರಾಮ ಭಕ್ತೆಯ ಸಂಭ್ರಮಾಚರಣೆ ಹೇಗಿತ್ತು ನೋಡಿ! ವೈರಲ್ ವಿಡಿಯೋ

ಅಯೋಧ್ಯೆಯಲ್ಲಿ ಭಗವಾನ್ ಶ್ರೀರಾಮ ಮಂದಿರದ ಶಿಲಾನ್ಯಾಸ ಕಾರ್ಯಕ್ರಮ ಬುಧವಾರ ಭರ್ಜರಿಯಾಗಿ ನೆರವೇರಿದೆ. ಭಾರತದ ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಸಾಧು ಸಂತರು ಹಾಗೂ ಗಣ್ಯರ ಸಮ್ಮುಖದಲ್ಲಿ ಶಿಲಾನ್ಯಾಸ ಕಾರ್ಯಕ್ರಮ ನಡೆದಿದ್ದು, ಭಾರತದ ಕೋಟ್ಯಾಂತರ ರಾಮಭಕ್ತ ಹಿಂದೂ ಬಾಂಧವರು ದೃಶ್ಯಮಾಧ್ಯಮಗಳ ಮೂಲಕ ಕಣ್ತುಂಬಿಕೊಂಡಿದ್ದಾರೆ.

ರಾಮ ಮಂದಿರ ನಿರ್ಮಾಣವನ್ನು ಭಾರತದಲ್ಲಷ್ಟೇ ಅಲ್ಲದೆ ವಿದೇಶಗಳಲ್ಲೂ ಭರ್ಜರಿಯಾಗಿ ಸಂಭ್ರಮಿಸಲಾಗುತ್ತಿದೆ. ಭಾರತೀಯ ಮೂಲದ ಹಿಂದೂಗಳ ಜೊತೆ ವಿದೇಶಿಗರು ಸೇರಿ ಅಮೇರಿಕಾ, ಲಂಡನ್ ಹಾಗೂ ಇತರ ಅನೇಕ ಪಾಶ್ಚಿಮಾತ್ಯ ದೇಶಗಳಲ್ಲಿ ಶಿಲಾನ್ಯಾಸ ಕಾರ್ಯಕ್ರಮವನ್ನು ಸಂಭ್ರಮಿಸಿದ್ದಾರೆ.

ಇದೀಗ ವಿದೇಶಿ ಮಹಿಳೆಯೊಬ್ಬರು ರಾಮ ಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಹಾಕಿರೋದನ್ನು ದೀಪ ಬೆಳಗುವ ಮೂಲಕ ಸಂಭ್ರಮಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಕೊನೆಗೂ ರಾಮ ಮಂದಿರ ನಿರ್ಮಾಣವಾಗುತ್ತಿದೆ. ಕಳೆದ ಎರಡು ಸಾವಿರ ವರ್ಷಗಳಲ್ಲಿ ಎರಡು ಅಬ್ರಹಾಂಮಿಕ್ ಧರ್ಮಗಳು(ಇಸ್ಲಾಂ ಹಾಗೂ ಕ್ರಿಶ್ಚಿಯನ್) ಸೇರಿ ಪ್ರಪಂಚದ ಅದೆಷ್ಟೋ ಪುರಾತನ ಧಾರ್ಮಿಕ ಪರಂಪರೆಯನ್ನು ನಾಶಮಾಡಿವೆ.

ಅವರ ಧಾರ್ಮಿಕ ನಂಬಿಕೆಯೇ ಸತ್ಯ, ಅವರ ದೇವರೇ ಸತ್ಯ ಎಂಬ ಮತಾಂಧತೆಯ ಕಾರಣಕ್ಕೆ ಮುಸ್ಲಿಮರು ಹಾಗೂ ಕ್ರಿಶ್ಚಿಯನ್ನರು ಒಂದರ ಹಿಂದೆ ಒಂದರಂತೆ ಪುರಾತನ ಧಾರ್ಮಿಕ ನಂಬಿಕೆಗಳನ್ನು ನಾಶಮಾಡಿದ್ದಾರೆ. ಅದೆಷ್ಟೋ ಜನರನ್ನು ಮತಾಂತರ ಮಾಡಿದ್ದಾರೆ. ಮತಾಂತರವಾಗಲು ಒಪ್ಪದವರ ಮೇಲೆ ಅತ್ಯಾಚಾರ, ಹತ್ಯೆ ಮಾಡುವ ಮೂಲಕ ನಾಶ ಮಾಡಿದ್ದಾರೆ.

ಇವರ ಮತಾಂಧತೆಗೆ ಈಗಾಗಲೇ ಇನ್ಕಸ್, ಈಜಿಪ್ಟಿಯನ್, ಆಜ್ಟೆಕ್, ಪರ್ಶಿಯನ್, ಪೇಗನ್, ಯಜ್ದೀಸ್ ಹೀಗೆ ಅದೆಷ್ಟೋ ನಾಗರೀಕತೆಗಳು, ಧಾರ್ಮಿಕ ನಂಬಿಕೆಗಳು ನಾಶವಾಗಿದೆ. ಇಸ್ಲಾಮಿಕ್, ಕ್ರಿಶ್ಚಿಯನ್ ಆಕ್ರಮಣಕಾರರು ಮೊದಲು ನಾಶ ಮಾಡೋದೇ ಅನ್ಯ ಧರ್ಮಗಳ ದೇಗುಲಗಳು, ದೇವರ ಮೂರ್ತಿಗಳನ್ನು. ಹೀಗೆ ಅವರ ಧಾರ್ಮಿಕ ನಂಬಿಕೆಗಳನ್ನು ನಾಶ ಮಾಡಿ, ಆ ಧಾರ್ಮಿಕ ಪರಂಪರೆಯನ್ನೇ ಅಳಿಸಿಹಾಕುತ್ತಾರೆ.

ಇದೇ ಕಾರಣಕ್ಕೆ ಹಿಂದೂ ಧರ್ಮವನ್ನು ನಾಶಮಾಡಲು ಈ ಎರಡು ಅಬ್ರಹಾಮಿಕ್ ಮತಾಂಧರು ಕಳೆದ ಎರಡುಸಾವಿರ ವರ್ಷಗಳಲ್ಲಿ ಭಾರತದಾದ್ಯಂತ 60ಸಾವಿರಕ್ಕೂ ಅಧಿಕ ದೇಗುಲಗಳನ್ನು ನಾಶಮಾಡಿದ್ದಾರೆ, 8-10ಕೋಟಿ ಹಿಂದೂಗಳ ಹತ್ಯೆಯಾಗಿದೆ, ಲಕ್ಷಾಂತರ ಹಿಂದೂ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರವಾಗಿದೆ, ಅದೆಷ್ಟೋ ಕೋಟಿ ಹಿಂದೂಗಳನ್ನು ಬಲವಂತವಾಗಿ ಮತಾಂತರ ಮಾಡಲಾಗಿದೆ. ಈ ಮೂಲಕ ಹಿಂದೂ ಧಾರ್ಮಿಕ ಪರಂಪರೆ ನಾಶ ಮಾಡುವ ಪ್ರಯತ್ನ ನಡೆಸಲಾಯಿತು.

ಆದರೆ ಅವರು ಅಂದುಕೊಂಡಂತೆ ಹಿಂದೂ ಧಾರ್ಮಿಕ ಪರಂಪರೆ ನಾಶವಾಗಲಿಲ್ಲ, ಹಿಂದೂ ಪೂರ್ವಜರು ಅಬ್ರಹಾಮಿಕ್ ಮತಾಂಧರ ವಿರುದ್ಧ ಹೋರಾಡಿದರೇ ಹೊರತು ಅವರಿಗೆ ತಲೆಭಾಗಲಿಲ್ಲ. ಇದೇ ಕಾರಣಕ್ಕೆ ಇನ್ನೂ ಹಿಂದೂ ಧರ್ಮ ಹಿಂದಿನಂತೆಯೇ ಪ್ರಜ್ವಲಿಸುತ್ತಿದೆ. ಈ ಪ್ರಪಂಚಕ್ಕೆ ಹಿಂದೂ ಧರ್ಮದ ಅಗತ್ಯವಿದೆ. ಪ್ರಪಂಚದಲ್ಲಿರುವ ಎಲ್ಲಾ ತೊಂದರೆಗಳಿಗೂ ಹಿಂದೂಗಳ ಜ್ಞಾನ ಹಾಗೂ ಬದುಕುವ ವಿಧಾನದಲೇ ಉತ್ತರ ಅಡಗಿದೆ. ನಮ್ಮ ನಂಬಿಕೆಗಳು ಉಳಿಯಬೇಕಾದರೆ ನಮ್ಮ ದೇವಾಲಯಗಳು ಉಳಿಯಬೇಕು, ಇದಕ್ಕಾಗಿಯೇ ರಾಮಮಂದಿರದ ನಿರ್ಮಾಣ ಅತ್ಯಗತ್ಯ, ಜೈಶ್ರೀರಾಮ್” ಎಂದು ಹೇಳಿದ್ದಾರೆ. ವೈರಲ್ ವಿಡಿಯೋ ಇಲ್ಲಿದೆ ನೋಡಿ,

Watch Video

error: Content is protected !!