fbpx

ಉ’ಗ್ರರ ಬೆದರಿಕೆ ಮಧ್ಯೆಯೂ ‘ಲಾಲ್‌ಚೌಕ್‌’ನಲ್ಲಿ ರಾಷ್ಟ್ರಧ್ವಜ ಹಾರಿಸಿ ಸಂಭ್ರಮಿಸಿದ ಮುಸ್ಲಿಂ ಮಹಿಳೆ! ವಿಡಿಯೋ ಸಖತ್ ವೈರಲ್

ಭಾರತದ ಮುಕುಟ ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿ ಆಗಸ್ಟ್ 5ಕ್ಕೆ ಒಂದು ವರ್ಷ ತುಂಬಿದೆ. ಆರ್ಟಿಕಲ್ 370 ಮತ್ತು ಆರ್ಟಿಕಲ್ 35A ರದ್ದು ಮಾಡಿ ವರ್ಷ ತುಂಬಿದ ಕಾರಣ ಕಾಶ್ಮೀರಿ ಮಹಿಳೆಯೊಬ್ಬರು ಭಾರತದ ರಾಷ್ಟ್ರಧ್ವಜ ಹಿಡಿದು ಸಂಭ್ರಮಾಚರಣೆ ಮಾಡಿದ್ದಾರೆ.


ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯ ಲಾಲ್‌ಚೌಕ್‌ನಲ್ಲಿ ಉಗ್ರರ ಬೆದರಿಕೆಯನ್ನೂ ಲೆಕ್ಕಿಸದೆ ಬಿಜೆಪಿ ನಾಯಕಿ ರುಮಿಸಾ ರಫೀಕ್ ಅವರು ಭಾರತದ ರಾಷ್ಟ್ರ ಧ್ವಜ ಹಾರಿಸಿ, ಅದಕ್ಕೆ ಸೆಲ್ಯೂಟ್ ಹೊಡೆದು ಗೌರವ ಸಲ್ಲಿಸಿದ್ದಾರೆ. ಕಾಶ್ಮೀರಿ ಪ್ರತ್ಯೆಕತಾವಾದಿಗಳು, ಪಾಕಿಸ್ತಾನಿ ಉಗ್ರರ ಬೆದರಿಕೆಯನ್ನು ಲೆಕ್ಕಿಸದೆ ಭಾರತದ ರಾಷ್ಟ್ರಧ್ವಜ ಲಾಲ್‌ಚೌಕ್‌ನಲ್ಲಿ ಹಾರಿಸಿದ್ದು ಇವರ ದೇಶಪ್ರೇಮಕ್ಕೆ ಸಾಕ್ಷಿ.

ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಮಾಡಿ ಇಂದಿಗೆ ಒಂದು ವರ್ಷ ಆಗಿದ್ದು, ಕಾಶ್ಮೀರದ ಕೆಲ ಪ್ರತ್ಯೆಕತಾವಾದಿಗಳು ಕಪ್ಪುದಿನ ಆಚರಿಸುತ್ತಿದ್ದರೆ, ದೇಶಪ್ರೇಮಿ ಕಾಶ್ಮೀರಿಗಳು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯಬಾರದು ಅಂತಾ ಜಮ್ಮು-ಕಾಶ್ಮೀರದಾದ್ಯಂತ ಭಾರೀ ಭದ್ರತೆ ಕೈಗೊಳ್ಳಲಾಗಿದೆ. ಕಾಶ್ಮೀರಿ ಮಹಿಳೆ ರಾಷ್ಟ್ರಧ್ವಜ ಹಾರಿಸುತ್ತಿರುವ ವೀಡಿಯೋ ನೋಡಿ,

error: Content is protected !!