fbpx

ಪಾಪಿ ಪಾಕಿಸ್ತಾನದ ನ್ಯೂಸ್ ಚಾನಲ್‌ನಲ್ಲಿ ಹಾರಾಡಿತು ಭಾರತದ ‘ರಾಷ್ಟ್ರಧ್ವಜ’, ವೈರಲ್ ವೀಡಿಯೋ ನೋಡಿ

ಪಾಪಿ ಪಾಕಿಸ್ತಾನದ ಪ್ರಮುಖ ಸುದ್ದಿವಾಹಿನಿಗಳಲ್ಲಿ ಒಂದಾದ ಡಾನ್ ನ್ಯೂಸ್‌ನಲ್ಲಿ ಭಾನುವಾರ ಮಧ್ಯಾಹ್ನ ಭಾರತದ ರಾಷ್ಟ್ರಧ್ವಜ ಹಾರಾಡಿದೆ. ಡಾನ್ ನ್ಯೂಸ್‌ನ ಯೂಟ್ಯೂಬ್ ಚಾನಲ್‌ನಲ್ಲಿ ಭಾನುವಾರ ಮಧ್ಯಾಹ್ನ ಏಕಾಏಕಿ ಭಾರತದ ರಾಷ್ಟ್ರಧ್ವಜ ಕಾಣಿಸಿಕೊಂಡಿದ್ದು, ಸಿಬ್ಬಂದಿ ಹಾಗೂ ವೀಕ್ಷಕರಿಗೆ ಶಾಕ್ ಆಗಿದೆ.

ಸುದ್ದಿಯ ಮಧ್ಯೆ ಡೆಟೋಲ್‌‌ನ ಜಾಹೀರಾತು ಪ್ರಸಾರವಾಗಿದ್ದು, ಜಾಹಿರಾತಿನ ಮೇಲೆ ಭಾರತದ ರಾಷ್ಟ್ರಧ್ವಜ ಕಾಣಿಸಿಕೊಂಡಿದೆ. ಇದಾದ ಕೆಲವೇ ಹೊತ್ತಿನಲ್ಲಿ ‘ಸ್ವಾತಂತ್ರ್ಯೋತ್ಸವದ ಶುಭಾಷಯಗಳು’ ಎಂದು ಇಂಗ್ಲಿಷ್‌ನ ಸಾಲುಗಳು ಕಾಣಿಸಿದೆ.

ಚಾನಲ್ ನ ಸಿಬ್ಬಂದಿ ಏನಾಗುತ್ತಿದೆ ಎಂಬುದನ್ನು ಅರಿಯುವ ಮೊದಲೇ ಇದರ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಚಾನಲ್ ವೀಕ್ಷಣೆ ಮಾಡುತ್ತಿದ್ದವರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ ಡಾನ್ ಚಾನಲ್ ಘಟನೆಯ ಬಗ್ಗೆ ಸ್ಪಷ್ಟನೆ ನೀಡಿದೆ‌.

ಭಾರತ ಮೂಲದ ಹ್ಯಾಕರ್‌ಗಳು ನಮ್ಮ ಯೂಟ್ಯೂಬ್ ಚಾನಲ್ ಹ್ಯಾಕ್ ಮಾಡಿ ಭಾರತದ ರಾಷ್ಟ್ರಧ್ವಜ ಕಾಣಿಸುವಂತೆ ಮಾಡಿದ್ದಾರೆ ಎಂದು ಅದು ಸ್ಪಷ್ಟನೆ ನೀಡಿದೆ. ಈ ಬಗ್ಗೆ ತನಿಖೆನಡೆಸಿ ಕ್ರಮಕೈಗೊಳ್ಳುತ್ತೇವೆ ಎಂದಿದ್ದಾರೆ. ಡಾನ್ ಚಾನಲ್‌ನಲ್ಲಿ ತ್ರಿವರ್ಣ ಧ್ವಜ ಹಾರಾಡಿದ ವೈರಲ್ ವೀಡಿಯೋ ಇಲ್ಲಿದೆ ನೋಡಿ,

Watch Video

error: Content is protected !!