ಮಳೆಗಾಲದಲ್ಲಿ ಭೂಕುಸಿತ ಸಂಭವಿಸೋದು ಸಾಮಾನ್ಯ. ಪ್ರತಿವರ್ಷ ಪ್ರಪಂಚದಾದ್ಯಂತ ಭೂಕುಸಿತದ ಕಾರಣಕ್ಕೆ ಅನೇಕ ಜನರು ಪ್ರಾಣ ಕಳೆದುಕೊಳ್ಳುತ್ತಾರೆ. ಭೂಕುಸಿತ ಸಂಭವಿಸಿದರೂ ಅದೃಷ್ಟದಿಂದಾಗಿ ಹಲವರು ಪ್ರಾಣಾಪಾಯದಿಂದ ಪಾರಾಗಿದ್ದನ್ನು ನಾವು ನೋಡಿರುತ್ತೇವೆ. ಇಂತಹದ್ದೇ ಘಟನೆಯ ವೀಡಿಯೋವೊಂದು ಎಲ್ಲೆಡೆ ಹರಿದಾಡುತ್ತಿದೆ.
ವಾಹನಗಳು ಓಡಾಡೋ ರಸ್ತೆಯ ಮೇಲೆ ಏಕಾಏಕೀ ಗುಡ್ಡವೊಂದು ಕುಸಿದು ಬಿದ್ದಿದ್ದು, ರಸ್ತೆಯಲ್ಲಿ ಸಂಚರಿಸುತ್ತಿದ್ದ ಬೈಕ್ ಸವಾರ ಕೂದಲೆಳೆ ಅಂತರದಿಂದ ಪಾರಾಗಿದ್ದಾನೆ. ಘಟನೆ ನಡೆದಿರೋದು ಇಂಡೋನೇಷ್ಯಾದಲ್ಲಿ ಎಂದು ತಿಳಿದುಬಂದಿದ್ದು, ಕಳೆದ ಎಪ್ರೀಲ್ ತಿಂಗಳಿನಲ್ಲಿ ಈ ದುರ್ಘಟನೆ ಸಂಭವಿಸಿದೆ.
ಬೈಕ್ ಸವಾರನೊಬ್ಬ ರಸ್ತೆಯಲ್ಲಿ ಸಂಚರಿಸುವ ವೇಳೆ ಏಕಾಏಕಿ ಗುಡ್ಡ ಕುಸಿದು ಬಿದ್ದಿದ್ದು, ಬೈಕ್ ಸವಾರ ಕೂಡಲೆ ತನ್ನ ಗಾಡಿಯನ್ನು ಬಲಕ್ಕೆ ತಿರುಗಿಸಿ ತನ್ನ ಪ್ರಾಣ ಉಳಿಸಿಕೊಂಡಿದ್ದಾನೆ. ಒಂದು ವೇಳೆ ಸವಾರ ಗುಡ್ಡ ಕುಸಿಯೋದನ್ನ ಗಮನಿಸದೆ ಹೋಗಿದ್ದರು, ಆತ ಮಣ್ಣಿನಡಿ ಸಿಲುಕುವ ಸಾಧ್ಯತೆಯಿತ್ತು.
ಈ ವೀಡಿಯೋವನ್ನು ಸ್ಥಳೀಯರು ತಮ್ಮ ಮೊಬೈಲ್ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬೆಚ್ಚಿಬೀಳಿಸುವ ವೀಡಿಯೋ ಇಲ್ಲಿದೆ ನೋಡಿ,
Omg!!!! What a narrow escape for that biker pic.twitter.com/W9eX0kBZzd
— Nandini Idnani (@idnani_nandini) July 19, 2020