fbpx

Please assign a menu to the primary menu location under menu

ಲಡಾಖ್ ಗಡಿಯಲ್ಲಿ ಭಾರತೀಯ ಸೇನೆಯಿಂದ ಸಮರಾಭ್ಯಾಸ, ವೀಡಿಯೋ ನೋಡಿ

ಭಾರತ-ಚೀನಾ ಗಡಿಪ್ರದೇಶವಾದ ಲಡಾಖ್‌ಗೆ ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ ಭೇಟಿ ನೀಡಿದ್ದಾರೆ. ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ ಅವರ ಸಮ್ಮುಖದಲ್ಲಿ ಭಾರತೀಯ ಸೇನೆ ಸಮರಾಭ್ಯಾಸ ಕೈಗೊಂಡಿದ್ದು, ಸೈನಿಕರು ಟ್ಯಾಂಕ್ ಹಾಗೂ ರಕ್ಷಣಾ ಹೆಲಿಕಾಫ್ಟರ್‌ಗಳನ್ನು ಬಳಸಿ ಸಮರಾಭ್ಯಾಸ ನಡೆಸುತ್ತಿದ್ದಾರೆ.

ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಮತ್ತು ಸೇನಾ ಉನ್ನತಾಧಿಕಾರಿಗಳು ಲಡಾಖ್​ನ ಲೇಹ್ ಸೇನಾ ನೆಲೆ ತಲುಪಿದ್ದಾರೆ. ಇಲ್ಲಿ ಅವರು ಸಶಸ್ತ್ರ ಪಡೆಗಳ ಪ್ಯಾರಾ ಡ್ರಾಪಿಂಗ್ ಕವಾಯತು ಪ್ರದರ್ಶನವನ್ನು ವೀಕ್ಷಿಸಿದರು.

ಗಡಿಯಲ್ಲಿ ಪದೇಪದೇ ತಂಟೆ ಮಾಡುವ ಚೀನಾಗೆ ಖಡಕ್ ಸೂಚನೆ ನೀಡಿರುವ ಭಾರತ, ಎಲ್​ಎಸಿಯಿಂದ ಚೀನಾ ಸೇನೆ ಹಿಂದೆ ಸರಿಯಬೇಕು, ಒಪ್ಪಂದ ಪ್ರಕಾರ ನಡೆದುಕೊಳ್ಳಬೇಕು ಎಂದು ಹೇಳಿದೆ.

ಫಿಂಗರ್ ಪಾಯಿಂಟ್೪ ಹಾಗೂ ಪ್ಯಾಂಗೊಂಗ್ ತ್ಸೊ ಸರೋವರ ಪ್ರದೇಶದಲ್ಲಿ ಚೀನಾ ಸೇನೆ ಇನ್ನೂ ಬೀಡುಬಿಟ್ಟಿದೆ. ಗಡಿ ಪ್ರದೇಶದಲ್ಲಿ ಟ್ಯಾಂಕ್​ಗಳನ್ನು ನಿಯೋಜಿಸಿದೆ. ಇದೇ ಸಂದರ್ಭದಲ್ಲಿ ಭಾರತೀಯ ಸೇನೆ ಸಮರಾಭ್ಯಾಸ ನಡೆಸಿದ್ದು, ಚೀನಾಗೆ ಸ್ಪಷ್ಟ ಎಚ್ಚರಿಕೆ ನೀಡಿದಂತಿದೆ.

ಲಡಾಖ್ ಗಡಿಯಲ್ಲಿ ಭಾರತೀಯ ಸೇನೆಯಿಂದ ಸಮರಾಭ್ಯಾಸ, ವೀಡಿಯೋ ನೋಡಿ

Watch Video

error: Content is protected !!