fbpx

‘ಹಿಂದೂ’ ವಿದ್ಯಾರ್ಥಿನಿಗೆ ‘ಬುರ್ಕಾ’ ತೊಡಿಸಿ ಮೆರವಣಿಗೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ ‘ಇಸ್ಲಾಮಿಕ್ ಜಿ’ಹಾದಿ’ ವಿದ್ಯಾರ್ಥಿಗಳು, ಕಾರಣವೇನು ಗೊತ್ತೇ? (ವೀಡಿಯೋ)

CAA-NRC ಪರವಹಿಸಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ ಹಿಂದೂ ವಿದ್ಯಾರ್ಥಿನಿಗೆ ಮುಸ್ಲಿಂ ವಿದ್ಯಾರ್ಥಿಗಳು ಬೆದರಿಕೆ ಹಾಕಿದ ಬಗ್ಗೆ ವರದಿಯಾಗಿದೆ. ವಾಕ್-ಸ್ವಾತಂತ್ರ್ಯದ ಬಗ್ಗೆ ಇತರರಿಗೆ ಭಾಷಣ ಬಿಗಿಯುವ ಎಡಪಂಥೀಯರು ಈ ಘಟನೆಯ ಬಗ್ಗೆ ಮೌನವಹಿಸಿದ್ದಾರೆ.

ಆಲಿಘಡ್ ಮುಸ್ಲಿಂ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಾಂಗ ಮಾಡುತ್ತಿರುವ ಹಿಂದೂ ವಿದ್ಯಾರ್ಥಿನಿ ದೇಶದಲ್ಲಿ ಜಾರಿಗೆ ತರಲು ಉದ್ದೇಶಿಸಿರುವ CAA-NRC ಕಾನೂನಿನ ಪರವಾಗಿ ತನ್ನ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಪೋಸ್ಟ್ ಹಾಕಿದ್ದಳು. ಇದನ್ನು ಗಮನಿಸಿದ ಮುಸ್ಲಿಂ ಸಹಪಾಠಿಗಳು ಆಕೆಗೆ ಸಾಮಜಿಕ ಜಾಲತಾಣದಲ್ಲಿಯೇ ಬೆದರಿಕೆ ಹಾಕಿದ್ದಾರೆ.

ಹಿಂದೂ ಯುವತಿಯ CAA-NRC ಪರ ಪೋಸ್ಟ್‌ಗೆ ಕಮೆಂಟ್ ಮಾಡಿರುವ ಇಸ್ಲಾಮಿಕ್ ಜಿ’ಹಾದಿ ವಿದ್ಯಾರ್ಥಿಗಳು, ‘ಕೊರೋನಾ ಕಾರಣದಿಂದ ಮುಚ್ಚಿರುವ ಕಾಲೇಜು ಪುನರಾರಂಭವಾದ ಕೂಡಲೆ, ಕಾಲೇಜ್ ಕ್ಯಾಂಪಸ್‌ನಲ್ಲಿ ನಿನಗೆ ಬುರ್ಕಾ ತೊಡಿಸಿ ಮೆರವಣೆಗೆ ಮಾಡೋದಾಗಿ’ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ಕೆಟ್ಟಕೆಟ್ಟ ಶಬ್ದಗಳಿಂದ ನಿಂದಿಸಿದ್ದು, ಅತ್ಯಾಚಾರದ ಬೆದರಿಕೆಯನ್ನೂ ಹಾಕಿದ್ದಾರೆ.

ಇದೀಗ ಈ ಬಗ್ಗೆ ವಿದ್ಯಾರ್ಥಿನಿ ಪೋಲೀಸರಿಗೆ ದೂರು ದಾಖಲಿಸಿದ್ದು, ತನ್ನ ಮೇಲೆ ತನ್ನದೇ ಕಾಲೇಜಿನ ಮುಸ್ಲಿಂ ವಿದ್ಯಾರ್ಥಿಗಳು ಬೆದರಿಕೆ ಹಾಕಿರೋದಾಗಿ ಪೋಲೀಸರಿಗೆ ಲಿಖಿತ ಹೇಳಿಕೆ ನೀಡಿದ್ದಾಳೆ. CAA-NRC ವಿರೋಧದ ಹೆಸರಿನಲ್ಲಿ ದೇಶದಾದ್ಯಂತ ದೊಂಬಿ ಎಬ್ಬಿಸಿ ಅಮಾಯಕರ ಹತ್ಯೆಗೈದಿದ್ದಲ್ಲದೆ, ಇದೀಗ ಹಿಂದೂ ಹೆಣ್ಣುಮಕ್ಕಳಿಗೆ ಬಹಿರಂಗವಾಗಿ ಬೆದರಿಕೆ ಹಾಕೋಮಟ್ಟಕ್ಕೆ ಇಸ್ಲಾಮಿಕ್ ಜಿ’ಹಾದಿಗಳು ಬೆಳೆದಿರೋದು ಆತಂಕಕಾರಿ ವಿಚಾರ.

error: Content is protected !!